ರಾಯರ ಹೆಂಡತಿ ಪ್ರೇತಾತ್ಮವಾಗಿ ಬಂದಿದ್ದು ಯಾಕೆ ಗೊತ್ತಾ, ಮಂತ್ರಾಲಯದಲ್ಲಿ ರಾಯರು ಮಾಡಿದ ಉಪಾಯ ಏ.ನು ಗೊ ತ್ತಾ

 | 
Hs

ದೇವರೆಂದರೆ ತಿರುಪತಿ ತಿಮ್ಮಪ್ಪ, ಗುರುಗಳೆಂದರೆ ಮಂಚಾಲೆ ರಾಘಪ್ಪ. ಇದು ಜನಜನಿತವಾದ ನಾಣ್ಣುಡಿ. ಈ ನುಡಿ ಶುಭವಾದದ್ದು ಮತ್ತು ಸತ್ಯವಾದದ್ದು ಅನ್ನೋದಕ್ಕೆ ಈ ಕ್ಷೇತ್ರಗಳಿಗೆ ಹೋಗಿ ಬಂದು ಕೃಪಾಶೀರ್ವಾದ ಪಡೆದ ಅಪಾರ ಭಕ್ತಗಣವೇ ಸಾಕ್ಷಿ. ಅದೆಷ್ಟು ಜನ ಹೋಗಿಲ್ಲ, ಶಿರಬಾಗಿ ಮುಗಿದಿಲ್ಲ, ಕಷ್ಟಗಳನ್ನ ಗೆದ್ದು ಬಂದಿಲ್ಲ. ಆದರೂ, ಕರ್ಮಸಿದ್ಧಾಂತದ ಅರಿವಿಲ್ಲದ ಅಷ್ಟೇ ಜನ ಕೊರಗಿದ್ದಾರೆ. ಬೈದಿದ್ದಾರೆ, ದೂರಿದ್ದಾರೆ. 

ಇಂತಹ ಅತೃಪ್ತ, ಅಸಮಾಧಾನಿತ ಮನಸ್ಥಿತಿಗಳ ಕಷ್ಟ-ಕಾರ್ಪಣ್ಯ ದೂರಾಗಬೇಕು ಎಂದರೆ ಇಂದು ನಾವು ಹೇಳೋಕೆ ಹೊರಟಿರೋ ಈ ಸತ್ಯಸಂಗತಿಯನ್ನ ದಿಗ್ದರ್ಶನ ಮಾಡಿಕೊಳ್ಳಲೇಬೇಕು. ಗುರುಮಹಿಮ ರಾಯರಂಥ ರಾಯರೇ ಕರ್ಮಫಲವನ್ನ ಅನುಭವಿಸಬೇಕಾಯ್ತು. ಒಮ್ಮೆ ದರಿದ್ರದೇವತೆ ವೆಂಕಟನಾಥರಿಗೆ. ನಿನ್ನ ಪೂರ್ವಕೃತ ಕರ್ಮಫಲಗಳಿಗೆ ಅನುಗುಣವಾಗಿ ನಾನೀಗ ನಿನ್ನನ್ನು ಆಶ್ರಯಿಸಲೇಬೇಕು. ಇದು ನನ್ನ ಕರ್ತವ್ಯ. ಆದರೆ ಸಾಮಾನ್ಯರ ಜೀವನಪ್ರವೇಶ ಮಾಡಿದಂತೆ ನಾನು ನಿನ್ನನ್ನು ಏಕಾಏಕಿ ಸೇರಿಬಿಡಲಾರೆ. 

ನೀನೊಬ್ಬ ಅಸಾಮಾನ್ಯ ಮಹಾಮಹಿಮ. ನಿನ್ನ ಅನುಮತಿ ಇದ್ದರಷ್ಟೇ ಆಶ್ರಯಿಸುತ್ತೇನೆ. ಆಶ್ರಯಿಸಿ ದರಿದ್ರವನ್ನ ಅನುಭವಿಸುತ್ತೇನೆ ಎಂದು ಕೋರಿಕೊಂಡಳು ದರಿದ್ರ ದೇವತೆ.ಆಗಲಿ ಎಂದರು ವೆಂಕಟನಾಥರು.
ವೆಂಕಟನಾಥರ ಪ್ರಶ್ನೆಗೆ ಉತ್ತರಿಸುತ್ತಾ ದರಿದ್ರದೇವತೆ ಒಂದು ಮಾತನ್ನು ಹೇಳುತ್ತಾಳೆ. ನೋಡು ವೆಂಟಕನಾಥ, ನಿನ್ನ ಹೆಂಡತಿ ಒಂದು ದಿನ ಗುರುಗಳ ಬಳಿ ಹೋಗೋಣ ಎಂದು ಕೇಳುತ್ತಾಳೆ. ಅಲ್ಲಿಯವರೆಗೂ ಈ ದಾರಿದ್ರ್ಯ ತಪ್ಪಿದ್ದಲ್ಲ. ಅಂದು ನಾನು ನಿನ್ನನ್ನು ಬಿಟ್ಟು ತೊಲಗುತ್ತೇನೆ ಎನ್ನುತ್ತಾಳೆ. 

ಈ ಮಾತು ಹೇಳುತ್ತಾ ಜೊತೆಗೊಂದು ಷರತ್ತನ್ನೂ ವಿಧಿಸುತ್ತಾಳೆ. ನಿನ್ನ ಹೆಂಡತಿ ತಾನಾಗಿ ತಾನೆ, ನಡೆಯಿರಿ ಗುರುಗಳ ಬಳಿ ಎಂದು ಹೇಳಬೇಕೆ ಹೊರತು, ಎಂಥದ್ದೇ ಕಷ್ಟ ಬರಲಿ ನೀನಾಗಿ ಹೆಂಡತಿಗೆ ಈ ಗುಟ್ಟನ್ನು ಬಿಟ್ಟುಕೊಡಬಾರದು ಎಂದು ಷರತ್ತು ಹಾಕುತ್ತಾಳೆ. ಅದರಂತೆ ದರಿದ್ರದೇವತೆಯ ಷರತ್ತನ್ನು ಒಪ್ಪಿ ಜೀವನದ ಅತ್ಯಂತ ಕಷ್ಟದ ದಿನಗಳನ್ನು ಸ್ವಾಗತಿಸುತ್ತಾರೆ ವೆಂಕಟನಾಥರು. ದರಿದ್ರ ದೇವತೆ, ವೆಂಕಟನಾಥರನ್ನ ಆಶ್ರಯಿಸಿದ್ದಾಯ್ತು. ಇದರೊಂದಿಗೆ ದಟ್ಟದಾರಿದ್ರ್ಯದ ದಿನಗಳೂ ಆರಂಭವಾದವು. ಯಾವ ಮಟ್ಟಕ್ಕೆ ಎಂದರೆ ವೆಂಕಟನಾಥರ ದಾರಿದ್ರಕ್ಕೆ ಉಪಮೆಯೇ ಸಿಗದಿರುವಷ್ಟು ತೀವ್ರತೆಯಲ್ಲಿ ಬಡತನ ಹೆಗಲೇರುತ್ತೆ. 

ಇದಾದ ಎರಡೇ ದಿನಕ್ಕೆ ಮನೆಗೆ ಕಳ್ಳರು ನುಗ್ಗಿ ಇರೋದನ್ನೆಲ್ಲ ದೋಚುತ್ತಾರೆ. ಇದ್ದ ಮನೆ ಸೋರಲಾರಂಭಿಸುತ್ತೆ. ಹರಿದ ಬಟ್ಟೆ, ಹಸಿದ ಹೊಟ್ಟೆ ದಿನಚರಿ ಎಂಬಂತಾಗಿಬಿಡುತ್ತೆ. ಬಡತನ ನೋಡಿದ ಬಂಧುಗಳು ದೂರದಲ್ಲೇ ನಿಂತುಬಿಡುತ್ತಾರೆ. ಇರೋ ಒಬ್ಬ ಮಗನಿಗೆ ಹಾಲು, ಅನ್ನ ಕೊಡೋಣ ಎಂದರೂ ಬಿಡಿಗಾಸಿಲ್ಲ. ಸಮುದ್ರದ ನಂಟು, ಉಪ್ಪಿಗೆ ಬರ ಎನ್ನುವಂತೆ ಮಹಾನ್ ವಿದ್ವಾಂಸರನ್ನು ಕೈ ಹಿಡಿದ ಸುಮಂಗಲಿ ಸರಸ್ವತಿಗೆ ಜೀವನವೇ ಅಯೋಮಯ ಎನಿಸಿಬಿಡುತ್ತೆ. ಆದರೆ ವಿಧಿಯಿಲ್ಲ ಅನುಭವಿಸಲೇಬೇಕು. ಯಾಕಂದ್ರೆ ಅಂದುಕೊಂಡಿದ್ದಲ್ಲ ಜೀವನ, ಅನುಭವಿಸಿದ್ದು ಅನ್ನೋದು ಜನಜನಿತ ಸತ್ಯ. 

ಈ ಮಾತಿಗೆ ಬದ್ಧರಾಗಿ ಗಂಡನ ಕಷ್ಟಕ್ಕೆ ಹೆಗಲಾಗಿ ಸಹನೆ ಕಾಯ್ದುಕೊಂಡೇ ಸಾಗುತ್ತಾರೆ ಸರಸ್ವತಿ. ಹೀಗಿರುವಾಗಲೇ ದಟ್ಟದಾರಿದ್ರ್ಯದ ಆ ದಿನಗಳಲ್ಲಿ ಒಂದು ರಾತ್ರಿ ವೆಂಟಕನಾಥರ ಪತ್ನಿ ಸರಸ್ವತಿಯವರಿಗೆ ಕನಸೊಂದು ಬೀಳುತ್ತೆ. ಕನಸಲ್ಲಿ ವೆಂಕಟನಾಥರ ಪರಮ ಗುರು ಅಂದ್ರೆ ಗುರುವಿನ ಗುರು ಇರುತ್ತಾರಲ್ಲ ಅವರು. ಇನ್ನೂ ಸರಳೀಕರಿಸಿ ಹೇಳೋದಾದ್ರೆ ವೆಂಕಟನಾಥರ ಗುರು ಸುಧೀಂದ್ರತೀರ್ಥರು ಇರ್ತಾರಲ್ಲ ಅವರ ಗುರುಗಳಾದ ವಿಜಯೇಂದ್ರ ತೀರ್ಥರು ಕನಸಲ್ಲಿ ಕಾಣಿಸಿಕೊಳ್ತಾರೆ.

ನೀವು ವೇದಪಾರಂಗತರಲ್ಲವೇ, ಪರಿಹಾರ ಹುಡುಕಬಹುದಲ್ಲ ಎಂದು ಕೇಳುತ್ತಾರೆ. ಪ್ರತಿಯಾಗಿ ವೆಂಕಟನಾಥರು ಹೇಳೋದೇನಂದ್ರೆ, ಇದೆಲ್ಲಾ ಕರ್ಮಫಲ, ಅನುಭವಿಸದೇ ಅನ್ಯ ಮಾರ್ಗವಿಲ್ಲ ಎಂದು. ಸರಿ ಹಾಗಿದ್ದರೆ ಯಾವುದಕ್ಕೂ ಒಂದು ಸಲ ನಿಮ್ಮ ಗುರುಗಳ ಬಳಿ ಹೋಗಿ ಬರೋಣ ಬನ್ನಿ ಎನ್ನುತ್ತಾರೆ ಸರಸ್ವತಿ. ವೆಂಕಟನಾಥರಿಗೆ ಆಶ್ವರ್ಯವಾಗುತ್ತದೆ. ಇದ್ದಕ್ಕಿದ್ದಂತೆ ಈ ಚಿಂತನೆ ಏಕೆ ನಿನಗೆ? ಎಂದು ಕೇಳುತ್ತಾರೆ. ಯಾಕೆ ಬಂತೋ ಏನೋ? ಬನ್ನಿ ಹೋಗಿ ಬರೋಣ ಎಂದು ಮತ್ತೊಮ್ಮೆ ಹೇಳುತ್ತಾರೆ. 

ಒಪ್ಪಿದ ವೆಂಕಟನಾಥರು ಷರತ್ತೊಂದನ್ನ ವಿಧಿಸುತ್ತಾರೆ. ನೋಡು ಸರಸ್ವತಿ, ಹೋಗಲು ನನಗೇನು ಅಡ್ಡಿಯಿಲ್ಲ, ಗುರುಗಳನ್ನ ನೋಡಿದರೆ ನನಗೂ ಖುಷಿಯಾಗುತ್ತದೆ. ಆದರೆ ಹೋದ ಮೇಲೆ ಎಂಥದ್ದಾದರೂ ಕಷ್ಟಕಾರ್ಪಣ್ಯ ಬಂದರೆ ಮಾನಸಿಕವಾಗಿ ನೀನು ಸಜ್ಜಾಗಿರಬೇಕು ಎಂದು ಕರೆದುಕೊಂಡು ಹೋಗುತ್ತಾರೆ. ಮಡದಿಯ ಮಾತಿನಂತೆ ತಮ್ಮ ಗುರುಗಳಾದ ಸುಧೀಂದ್ರ ತೀರ್ಥರನ್ನ ಭೇಟಿಯಾಗುತ್ತಾರೆ ವೆಂಟಕನಾಥ. 

ಗುರುಗಳ ದರ್ಶನ, ಕೃಪಾಶೀರ್ವಾದದ ಪರಿಣಾಮ ವೆಂಕಟನಾಥರ ಬದುಕೇ ಬದಲಾಗುತ್ತದೆ. ಅಂದಿನವರೆಗೂ ಇದ್ದ ದಟ್ಟ ದಾರಿದ್ರ್ಯ ದಿನಗಣನೆ ಮಾಡೋ ವೇಳೆಗೆಲ್ಲ ದೂರಾಗುತ್ತದೆ. ಗುರುಗಳ ಅಣತಿಯಂತೆ ಮಠದಲ್ಲೇ ವಾಸ್ತವ್ಯ ಹೂಡುತ್ತಾರೆ. ಪ್ರವಚನ ಮಾಡಲಾರಂಭಿಸುತ್ತಾರೆ. ಗುರುಗಳ ಜೊತೆ ಲೋಕಸಂಚಾರಕ್ಕಿಳಿಯುತ್ತಾರೆ. ಹೊದಲ್ಲೆಲ್ಲ ಕೀರ್ತಿಪುರುಷರಾಗುತ್ತಾರೆ. ಸಂಚಾರದ ವೇಳೆ ರಾಜರ ಆಸ್ಥಾನಗಳಿಗೆ ತೆರಳಿ ಸಂವಾದಕ್ಕಿಳಿಯುವ ವಾದಿಗಳನ್ನು ಗೆದ್ದು ಶ್ರೀ ಮಠಕ್ಕೆ ಕೀರ್ತಿ ತರುತ್ತಾರೆ. ವ್ಯಾಕರಣ ಶಾಸ್ತ್ರದಲ್ಲಿ ಇವರ ಅದಿತ್ವಿಯ ಪಾಂಡಿತ್ಯ ಕಂಡ ಸುಧೀಂದ್ರ ತೀರ್ಥರು ಮಹಾಭಾಷ್ಯ ಅನ್ನೋ ಬಿರುದನ್ನೂ ನೀಡುತ್ತಾರೆ. 

ನೋಡು ಸರಸ್ವತಿ ನಾನು ನಿರ್ಧರಿಸಿದ್ದೇನೆ. ಸನ್ಯಾಸಿಯಾಗಿಬಿಡುತ್ತೇನೆ. ಜನಕಲ್ಯಾಣದ ನಿರ್ದೇಶನವಾಗಿದೆ. ಸಂಸಾರ ಸಾಗರದಲ್ಲಿ ಮುಳುಗಿರಲಾರೆ. ಮಗನನ್ನು ಚೆನ್ನಾಗಿ ನೋಡಿಕೊ, ನೀನು ಕ್ಷೇಮವಾಗಿರು ಎಂದುಬಿಡ್ತಾರೆ ಒಂದೇ ಮಾತಿಗೆ. ಅಷ್ಟುಹೊತ್ತು ಮಗನ ಉಪನಯನದ ಸಂಭ್ರಮದಲ್ಲಿದ್ದ ಸರಸ್ವತಿಗೆ ಒಮ್ಮೆಲೆ ಬರಸಿಡಿಲು ಬಂದೆರಗಿದಂತಾಗುತ್ತೆ. 
ಇದಕ್ಕೇನಾ ನೀವು ಇಷ್ಟು ಆತುರಾತುರವಾಗಿ ಮಗನ ಕಾರ್ಯ ಮಾಡಿದಿರಿ? ಮದುವೆಯಾಗಿ ಕೆಲವೇ ವರ್ಷಗಳಾಗಿವೆ. ಸನ್ಯಾಸದ ಮಾತೇಕೆ? ಹೀಗೆ ಸರಸ್ವತಿಯವರು ಕೇಳಿದ ಪ್ರಶ್ನೆಗಳು ಒಂದೆರಡಲ್ಲ. 

ತೋಡಿಕೊಂಡ ದುಃಖ ಅಷ್ಟಿಷ್ಟಲ್ಲ. ಮುಂದೆ ಅದೇ ನೋವಲ್ಲಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಪ್ರೇತವಾಗುತ್ತಾರೆ. ಮುಂದೆ ಗುರು ರಾಘವೇಂದ್ರ ಸ್ವಾಮಿಗಳು ಅವರ ಪವಾಡದಿಂದ ಅವರಿಗೆ ಮುಕ್ತಿ ನೀಡುತ್ತಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.