4ವಷ೯ಗಳ ಸುದೀರ್ಘ ದಾಂಪತ್ಯ ನಡೆಸಿ ದಿಡೀರ್ ಡಿವೋರ್ಸ್ ಗೆ ಅಜಿ೯ ಸಲ್ಲಿಸಿದ್ಯಾಕೆ ಗೊತ್ತಾ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಮದುವೆಯಾಗಿ 4 ವರ್ಷಗಳು ಕಳೆದಿದೆ, ನಾಲ್ಕೇ ವರ್ಷಕ್ಕೆ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಚಂದನ್ ಶೆಟ್ಟಿ, ನಿವೇದಿತಾ ಗೌಡ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಇವರಿಬ್ಬರ ಲವ್ ಸ್ಟೋರಿ ಬಿಗ್ ಬಾಸ್ ರಿಯಾಲಿಟಿ ಶೋನಿಂದ ಆರಂಭವಾಗಿತ್ತು. ಮೈಸೂರಿನಲ್ಲಿ ಪ್ರಪೋಸ್ ಮಾಡಿ ಬಳಿಕ ಮದುವೆ ಮೂಲಕ ಈ ಜೋಡಿ ಒಂದಾಗಿತ್ತು.
ಚಂದನ್ ಶೆಟ್ಟಿ ಅವರು 17 ಸೆಪ್ಟೆಂಬರ್ 1989ರಲ್ಲಿ ಹುಟ್ಟಿದ್ದು ಅವರಿಗೆ ಈಗ 34 ವರ್ಷ ವಯಸ್ಸಾಗಿದೆ. ಚಂದನ್ ಅವರು ನಿವೇದಿತಾ ಗೌಡ ಅವರಿಗಿಂತ ದೊಡ್ಡವರು. ನಿವೇದಿತಾ ಗೌಡ ಅವರು 2000 ಮೇ 17ರಂದು ಹುಟ್ಟಿದ್ದು ಅವರ ವಯಸ್ಸು 23 ವರ್ಷ. ಅವರು ಟ್ವೆಂಟೀಸ್ ಕಿಡ್ ಆಗಿದ್ದು, ಇಬ್ಬರ ನಡುವೆ ಕೂಡ ಏಜ್ ಗ್ಯಾಪ್ ಕೂಡ ತುಂಬಾ ಇದೆ.
ಬಿಗ್ ಬಾಸ್ಗೆ ಕಾಲಿಟ್ಟ ಇಬ್ಬರು ಅಲ್ಲೇ ಪ್ರೀತಿಗೆ ಬಿದ್ದರು. ಬಿಗ್ ಬಾಸ್ ಮನೆಯಿಂದ ಹೊರ ಬಂದ ಬಳಿಕ ಇಬ್ಬರು ಮದುವೆ ಆಗಿದ್ದಾರೆ. ಚಿಕ್ಕ ವಯಸ್ಸಿಗೆ ಹಸೆಮಣೆ ಏರಿದ ನಿವೇದಿತಾ ಗೌಡ, ಕೆರಿಯರ್ ಬಗ್ಗೆ ಯೋಚಿಸಿರಲಿಲ್ಲ. ಇದೀಗ ನಿವಿಗೆ ಕೆರಿಯರ್ ಕಂಡುಕೊಳ್ಳುವ ಆಸೆ ಆಗಿದೆ. ಹೀಗಾಗಿ ಡಿವೋರ್ಸ್ ಪಡೆದಿದ್ದಾರೆ ಎನ್ನಲಾಗ್ತಿದೆ.
ಕಿರುತೆರೆ ಬಾರ್ಬಿ ಡಾಲ್ ಖ್ಯಾತಿಯ ನಿವೇದಿತಾ ಗೌಡ ಹಾಗೂ ಗಾಯಕ ಚಂದನ್ ಶೆಟ್ಟಿ ದಂಪತಿ ಡಿವೋರ್ಸ್ ಪಡೆದುಕೊಂಡಿದೆ ಎಂದು ವರದಿಯಾಗಿದೆ. ಈ ಬಗ್ಗೆ ದಂಪತಿ ಇನ್ನೂ ಸ್ಪಷ್ಟನೆ ಕೊಟ್ಟಿಲ್ಲ.ಕರಿಯರ್ ದೃಷ್ಟಿಯಿಂದ ಪರಸ್ಪರ ಒಪ್ಪಿಗೆ ಮೂಲಕ ವಿಚ್ಛೇದನ ಪಡೆದುಕೊಳ್ಳತ್ತಿದ್ದಾರೆ ಎನ್ನಲಾಗಿದೆ. ಇಂದು ಶಾಂತಿನಗರ ಕೋರ್ಟ್ ನಲ್ಲಿ ದಂಪತಿ ವಿಚ್ಛೇದನ ಪಡೆದುಕೊಳ್ಳಲಿದ್ದಾರೆ. ಒಟ್ಟಿಗೆ ಕೋರ್ಟ್ಗೆ ಹಾಜರಾಗಿದ್ರು.ಆದರೆ ಇವರ ಬಾಳಲ್ಲಿ ಈ ರೀತಿ ಘಟನೆ ನಡೆಯುತ್ತೆ ಅಂತ ಯಾರೂ ಊಹೆ ಕೂಡ ಮಾಡಿರಲಿಲ್ಲ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.