ಭಯ ಪಡಬೇಡ ನಾನಿದ್ದೇನೆ, ತಮಿಳು ನಟ ವಿಶಾಲ್‌ಗೆ ಧೈರ್ಯ ತುಂಬಿದ ತುಳುನಾಡಿನ ದೈವ
Feb 14, 2025, 17:02 IST
|

ವಿಶಾಲ್ ಅವರು ಕರ್ನಾಟಕದ ಮಂಗಳೂರಿಗೆ ಭೇಟಿ ನೀಡಿದ್ದಾರೆ. ತುಳುನಾಡಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮಂಗಳೂರಿನ ಮುಲ್ಕಿ ತಾಲ್ಲೂಕಿನ ಹರಿಪಾದದಲ್ಲಿನ ಜಾರಂದಾಯ ದೇವಾಲಯಕ್ಕೆ ಭೇಟಿ ನೀಡಿದ ವಿಶಾಲ್, ತನ್ನ ಆರೋಗ್ಯ ಸಮಸ್ಯೆ ಪರಿಹರಿಸುವಂತೆ ದೈವಕ್ಕೆ ವಿಶೇಷ ಮಲ್ಲಿಗೆ ಹೂವು ಅರ್ಪಿಸಿ ಬೇಡಿಕೊಂಡಿದ್ದಾರೆ.
ನನ್ನ ಆರೋಗ್ಯ ಸರಿ ಹೋದರೆ ಮುಂದಿನ ಸಲ ನೇಮೋತ್ಸವದ ವೇಳೆ ಕ್ಷೇತ್ರದಲ್ಲಿ ತುಲಾಭಾರ ಸೇವೆ ಮಾಡುತ್ತೇನೆ ಎಂದು ಹರಕೆಯೂ ಕಟ್ಟಿಕೊಂಡಿದ್ದಾರೆ.ಈ ವೇಳೆ ಕೈಸನ್ನೆ ಮೂಲಕ ಜಾರಂದಾಯ ದೈವವು ವಿಶಾಲ್ ಅವರಿಗೆ ಅಭಯ ನೀಡಿದೆ. ನಿನ್ನ ಆರೋಗ್ಯ ಸರಿಯಾಗಲಿದೆ, ನೀನು ತುಂಬಾ ಸಮಸ್ಯೆಯಲ್ಲಿದ್ದೀಯ, ಕಣ್ಣೀರು ಹಾಕಬೇಡ, ನಾನಿದ್ದೇನೆ ಎಂದು ಹೇಳಿದೆ. ಬಳಿಕ ಮೂರು ಗಂಟೆಗಳ ಕಾಲ ವಿಶಾಲ್ ದೈವ ಕೋಲದಲ್ಲಿ ಭಾಗಿಯಾಗಿ ಅಲ್ಲಿ ಪ್ರಸಾದ ಸ್ವೀಕರಿಸಿದ್ದಾರೆ ಎಂದು ತಿಳಿದುಬಂದಿದೆ.
ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾದಲ್ಲಿ ದೈವ ಹಾಗೂ ತುಳುನಾಡಲ್ಲಿ ನಡೆಯುವ ನೇಮೋತ್ಸವದ ಬಗ್ಗೆ ನೋಡಿದ್ದೆ. ಈಗ ಮೊದಲ ಬಾರಿಗೆ ತುಳುನಾಡ ನೇಮೋತ್ಸವವನ್ನು ಕಣ್ಣಾರೆ ನೋಡಿದೆ. ಇದರಿಂದ ನನಗೆ ತುಂಬಾ ಖುಷಿಯಾಗಿದೆ. ನಿನ್ನೆ ನಾನು ಕೊಲ್ಲೂರು ಮುಕಾಂಬಿಕೆಯ ದರ್ಶನ ಕೂಡ ಪಡೆದೆ ಎಂದು ನಟ ವಿಶಾಲ್ ಇಲ್ಲಿನ ದೇವಸ್ಥಾನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Wed,21 May 2025
ರಾಧಿಕಾ ಕುಮಾರಸ್ವಾಮಿ ಮಗಳು ಎಷ್ಟು ಮುದ್ದಾಗಿದ್ದಾರೆ, ತಾಯಿಗೆ ತಕ್ಕ ಮಗಳು
Tue,20 May 2025