ಚೀನಾದಲ್ಲಿ ವಿಡಿಯೋ ಮಾಡಿ ಸಿಕ್ಕಿಬಿದ್ದ ಡ್ರಾ ಬ್ರೋ? ಒಂದು ತಿಂಗಳಿನಿಂದ ಯಾವುದೇ ಮಾಹಿತಿ ಇಲ್ಲದೆ ಕಂ.ಗಾಲಾದ ಫ್ಯಾನ್ಸ್

 | 
Bd

ಇತ್ತೀಚೆಗೆ ಚೀನಾಕ್ಕೆ ಹೋಗಿದ್ದ ಕನ್ನಡದ ಪ್ರಸಿದ್ಧ ಯೂಟ್ಯೂಬರ್‌ ಹಾಗೂ ಪ್ರವಾಸಿಗ ಡಾ ಬ್ರೋ ಅಲಿಯಾಸ್‌ ಗಗನ್‌ ಶ್ರೀನಿವಾಸ್‌  ಕೆಲ ದಿನಗಳಿಂದ ವೀಡಿಯೊ ಮಾಡುತ್ತಿಲ್ಲ. ಹೌದು ಒಂದು ತಿಂಗಳಿಂದ ಅವರ ಯುಟ್ಯೂಬ್ ನಲ್ಲಿ ಯಾವುದೇ ವೀಡಿಯೊ ಅಪ್ಲೋಡ್ ಆಗಿಲ್ಲ. ಕೆಲ ದಿನಗಳ ಹಿಂದಯಷ್ಟೇ ಚೀನಾಗೆ ಹೋಗಿ ಭಾರತೀಯನಾಗಿ ಚೀನಾವನ್ನು ಹೊಗಳಿದ್ದಾನೆ. 

ಚೀನಾದ ಮಕ್ಕಳಿಗೆ ಓದುವಾಗಲೇ ಕೌಶಲ್ಯ ಕಲಿಸಲಾಗುತ್ತಿದೆ. ಆದರೆ, ನಮ್ಮ ದೇಶದಲ್ಲಿ ಜಾತಿ, ಧರ್ಮ ವಿಷ ಬೀಜ ಬಿತ್ತಲಾಗುತ್ತಿದೆ ಎಂದು  ಹೇಳಿದ್ದಾರೆ.
ಚೀನಾದ ಬೀಜಿಂಗ್‌ನಲ್ಲಿ ವೀಡಿಯೋ ಮಾಡುತ್ತಾ ಮಾತನಾಡಿರುವ ಡಾ ಬ್ರೋ, ಮುಂದುವರೆದ ದೇಶದ ಮಕ್ಕಳೆಲ್ಲಾ ಸ್ಕೂಲ್ ಕಾಲೇಜ್ ಗಳಲ್ಲಿ, ಹೊಸ ಹೊಸ ಸ್ಕಿಲ್‌  ಕಲಿತರೆ , ನಮ್ಮ ಮಕ್ಕಳು ಜಾತಿ ಧರ್ಮ ಅಂತ ಕಿತ್ತಾಡ್ತಾವೇ!  ನಾವು ಈಗಿರುವ ಚೀನಾ ಮಟ್ಟಕ್ಕೆ ಹೋಗಬೇಕಾದರೆ, ಇನ್ನೂ ಕನಿಷ್ಟ 70 ವರ್ಷ ಬೇಕು ಅಂದ್ರೆ, ಆಗ ಚೀನಾ ಇನ್ನೆಲ್ಲಿಗೆ ಹೋಗಿರುಂತೆ ಯೋಚಿಸಿ. 

ಜಾತಿ ಧರ್ಮ ಅನ್ನುವ ನಂಜು ಬಿಟ್ಟು ಹೊರಬನ್ನಿ ಎಂದು ಹೇಳಿದ್ದಾರೆ. ಆದರೆ, ಭಾರತೀಯನಾಗಿ ಚೀನಾಗೆ ಹೋಗಿ ಅಲ್ಲಿನ ವ್ಯವಸ್ಥೆಯನ್ನು ಹೊಗಳಿದ ಡಾ. ಬ್ರೋಗೆ ದೇಶದ್ರೋಹಿ ಪಟ್ಟ ಕಟ್ಟಿದ್ದಾರೆ. ಇನ್ನು ಕೆಲವರು ನಮ್ಮ ದೇಶ ಚೀನಾ ಮಟ್ಟಕ್ಕೆ ತಲುಪಲು ಇನ್ನೂ 100 ವರ್ಷ ಬೇಕು. ಹುಟ್ಟಿದ್ ತಕ್ಷಣ ಕಲಿಸೋದೆ ಗುಲಾಮಗಿರಿ; ದೇವರು-ದಿಂಡರು, ಜಾತಿ-ಧರ್ಮ, ಸ್ವಾಮಿ-ಮಠ. ಹೇಗೆ ಜೀವಿಸಬೇಕು, ಜೀವನವನ್ನು ಹೇಗೆ ಎದುರಿಸಬೇಕು, ವಿಧ್ಯಾಭ್ಯಾಸ, ಸಾಕ್ಷರತೆ, ಆರೋಗ್ಯ, ಸಾಮಾನ್ಯ ಸಾಮಾಜಿಕ ಜ್ಞಾನ ಎಲ್ಲದಕ್ಕೂ ದೇವರು. 

ನಮ್ಮ ಕನಿಷ್ಟ ಕರ್ತವ್ಯವನ್ನು ಕಡೆಗಣಿಸಿ ಕಾಣದ ದೇವರಿಗೆ ಮೊರೆ ಹೋಗುವವರು ನಾವು. ಇರೋದನ್ನು ಇರೋ ಹಾಗೆ ಹೇಳಿದ್ರು ನಮ್ ಜನಕ್ಕೆ ಅರ್ಥ ಆಗಲ್ಲ ಬಿಡಿ ಮತ್ತೊಬ್ಬರು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಆದರೆ ಇದೀಗ ಇದೆಲ್ಲವುಗಳಿಂದ ಬೇಸೆತ್ತ ಡಾ. ಬ್ರೋ ಕಳೆದ ಒಂದು ತಿಂಗಳಿಂದ ನಾಪತ್ತೆ ಆಗಿದ್ದಾರೆ. 

ಫೇಸ್ಬುಕ್ ಅಲ್ಲಿ ಕೂಡ ಅವರ ಯಾವುದೇ ವೀಡಿಯೊ ಅಪ್ಲೋಡ್ ಆಗಿಲ್ಲ ಹಾಗಾಗಿ ಅಭಿಮಾನಿಗಳು ಚಿಂತಾಕ್ರಾಂತ ಆಗಿದ್ದಾರೆ. ರೆಸ್ಟ್ ಮಾಡುತ್ತಿದ್ದಾರಾ ಇಲ್ಲ ಜನರ ಮಾತಿಗೆ ಬೇಸರ ಮೂಡಿ ವೀಡಿಯೊ ಮಾಡೋದು ನಿಲ್ಲಿಸಿದರಾ ಎಂದು ಕಾದು ನೋಡಬೇಕಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.