ಸ್ವಂತ ತಾಯಿ ಜೊತೆ ಮೈಮರೆತು ಡ್ಯಾನ್ಸ್ ಮಾಡಿದ ಡ್ರೋನ್ ಪ್ರತಾಪ್

 | 
Vjj

ಆಗೊಮ್ಮೆ ಈಗೊಮ್ಮೆ ವಿವಾದಗಳಿಂದಲೇ ಫೇಮಸ್ ಆಗಿರುವ ಡ್ರೋನ್ ಪ್ರತಾಪ್ ಈದೀಗ ಅಮ್ಮನೊಂದಿಗೆ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. ಈ ಹಿಂದೆ ಕೂಡ ಇವ್ರುಕಲರ್ಸ್​ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆ ಮೇಲೆ ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಅವರ ಅಮ್ಮನ ಆಗಮನವೂ ಆಗಿದೆ.  ಯಾವುದೋ ಕಾರಣಕ್ಕೆ ಮಗನ ಮೇಲೆ ಮೂರು ವರ್ಷ ಕೋಪ ಮಾಡಿಕೊಂಡು ಇದೀಗ ಮಗನೊಟ್ಟಿನ ಮೈಮನಸ್ಸು ಮರೆತಿದ್ದಾರೆ.

ಈ ಅಮ್ಮನೋಡಲು ಹಾಗೂ ಮಾತಿನಲ್ಲಿಯೂ ತುಂಬಾ ಸಿಂಪಲ್​ ಹಾಗೂ ಮೃದುವಾಗಿರೋ ಡ್ರೋನ್​ ಪ್ರತಾಪ್​ ಅಮ್ಮ ಇದಾಗಲೇ ವೀಕ್ಷಕರ ಮನಸ್ಸನ್ನು ಗೆದಿದ್ದಾರೆ. ಹಲವಾರು ಮಂದಿಗೆ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಡ್ರೋನ್​ ಪ್ರತಾಪ್​ ಮೇಲಿರುವ ಗಂಭೀರ ಆರೋಪಗಳ ನಡುವೆಯೂ ಇದೀಗ ಬಿಗ್​ಬಾಸ್​ ಸಕ್ಸಸ್​ ಬಳಿಕ ಮಗನನ್ನು ಒಪ್ಪಿಕೊಂಡಿದ್ದಾರೆ ಡ್ರೋನ್​ ಅಮ್ಮ. ಇದೀಗ ನನ್ನಮ್ಮ ಸೂಪರ್​ಸ್ಟಾರ್​ ವೇದಿಕೆ ಮೇಲೆ ಇದಾಗಲೇ ಅಮ್ಮನಿಗೆ ಮುದ್ದೆ ಮಾಡಿ ತಿನಿಸಿದ್ದಾರೆ ಡ್ರೋನ್​ ಪ್ರತಾಪ್​.

ಈಗ ಅಮ್ಮನ ಜೊತೆ ಡ್ಯಾನ್ಸ್​ ಮಾಡುವಂತೆ ನಿರೂಪಕಿ ಸುಷ್ಮಾ ಪ್ರತಾಪ್​ಗೆ ಹೇಳಿದ್ದಾರೆ. ಡ್ರೋನ್​ ಪ್ರತಾಪ್​ ಡ್ಯಾನ್ಸ್​ಗೂ ಸೈ. ಇದನ್ನು ಅವರು ಬಿಗ್​ಬಾಸ್​ನಲ್ಲಿಯೇ ನಿರೂಪಿಸಿದ್ದಾರೆ. ಆದರೆ ಅಮ್ಮ ತುಂಬಾ ನಾಚಿಕೊಂಡರು. ತಮಗೆ ಡ್ಯಾನ್ಸ್​ ಬರುವುದಿಲ್ಲ ಎಂದರು. ಕೊನೆಗೆ ಮಗನೇ ಖುದ್ದು ಅಮ್ಮನ ಕೈ ಹಿಡಿದು ಡ್ಯಾನ್ಸ್​ ಮಾಡಿದ್ದಾರೆ. ಇದನ್ನು ನೋಡಿ ಪ್ರೇಕ್ಷಕರು ಭಲೇ ಭಲೇ ಎನ್ನುತ್ತಿದ್ದಾರೆ. 
ಅಷ್ಟಕ್ಕೂ ಎಷ್ಟೋ ಅಮ್ಮಂದಿರಿಗೆ ಮಕ್ಕಳಂತೆಯೇ ಆಡಬೇಕು, ನರ್ತಿಸಬೇಕು, ಕುಣಿಯಬೇಕು ಎಂಬ ಆಸೆ ಇರುತ್ತದೆ. ಮಕ್ಕಳಲ್ಲಿ ಮಕ್ಕಳಾಗಿ ಇರಬೇಕು ಎಂಬ ಆಸೆ ಇರುವುದು ಸಹಜ.  ಆದರೆ ಯಾರು ಏನು ಅಂದುಕೊಳ್ಳುತ್ತಾರೋ ಎಂಬ ಹಿಂಜರಿಗೆ ಹಲವರಿಗೆ. ಅಕ್ಕ ಪಕ್ಕದವರು ಏನಂದುಕೊಂಡಾರು, ನೋಡಿದವರು ಏನಂದುಕೊಂಡಾರು ಎನ್ನುವ ಭಯ. ಇದೇ ಕಾರಣಕ್ಕೆ ಎಲ್ಲವನ್ನೂ ನುಂಗಿಕೊಂಡು ಇರುತ್ತಾರೆ. ಹಾಗಾಗಿ ಡ್ರೋನ್ ಪ್ರತಾಪ್ ಡ್ಯಾನ್ಸ್ ಕ್ಲಿಪ್ ಈಗ ಎಲ್ಲರ ಗಮನ ಸೆಳೆದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.