ಬಿಗ್ ಬಾಸ್ ಮನೆಗೆ ಡ್ರೋನ್ ಪ್ರತಾಪ್ ತಂದೆ ಎಂಟ್ರಿ, ಆದರೆ ಮಗ ಪ್ರತಾಪ್ ಮಾ ಡಿದ್ದೇನು ಗೊ.ತ್ತಾ

 | 
ರಕ

ಇನ್ನು ಕೆಲವೇ ದಿನಗಳಲ್ಲಿ ಬಿಗ್​ಬಾಸ್​ ಮುಗಿಯಲಿದ್ದು, ಈ ಸಂದರ್ಭದಲ್ಲಿ ಟಾಸ್ಕ್​ಗಳ ಭರಾಟೆಯೂ ಜೋರಾಗಿದೆ. ಜೊತೆಗೆ ತಾವೇ ಬಿಗ್​ಬಾಸ್​ ಕಿರೀಟ ಪಡೆಯಬೇಕು ಎಂದು ಎಲ್ಲಾ ಸ್ಪರ್ಧಿಗಳು ಹಂಬಲಿಸುತ್ತಿದ್ದು, ಟಾಸ್ಕ್​ ಗೆಲ್ಲಲು ಶತಾಯುಗತಾಯು ಪ್ರಯತ್ನ ಮಾಡುತ್ತಿದ್ದಾರೆ. ಇದರ ನಡುವೆಯೇ ಬಿಗ್​ಬಾಸ್​ ತನ್ನ ಸ್ಪರ್ಧಿಗಳಿಗೆ ಆಗಾಗ್ಗೆ ಸರ್​ಪ್ರೈಸ್​ ನೀಡುತ್ತಲೇ ಇರುತ್ತದೆ. ಕೆಲ ದಿನಗಳ ಹಿಂದೆ ಮನೆ ಅಡುಗೆಯನ್ನು ಸವಿಯುವ ಅವಕಾಶವನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು. 

ಇದೀಗ ಇಬ್ಬರು ಅಮ್ಮಂದಿರ ಎಂಟ್ರಿಯಾಗಿ ಹೋಗಾಗಿದೆ ಇದೀಗ ಅಪ್ಪಂದಿರ ಸರದಿ ಎನ್ನಲಾಗುತ್ತಿದೆ. ಈಗಾಗಲೇ ನಮ್ರತಾ ಗೌಡ ತಾಯಿ ಬಂದ ಖುಷಿಯಲ್ಲಿ ಕಣ್ಣೀರು ಹಾಕಿದ್ದರು. ಕೆಲ ಸಮಯ ಮಗಳ ಜೊತೆ ಇದ್ದ ನಮ್ರತಾ ಅಮ್ಮ, ಕೆಲ ಕಾಲ ಕಳೆದು ಬಿಗ್ ಬಾಸ್​ ಮನೆಯಿಂದ ಹೊರಕ್ಕೆ ಬಂದಿದ್ದಾರೆ. ಮನೆಯವರ ಜೊತೆ ಕೂಡ ನಮ್ರತಾ ತಾಯಿ ಮಾತಾಡಿದರು. ಬಿಗ್ ಬಾಸ್ ಸ್ಪರ್ಧಿಗಳಿಗೆ ಇದೇ ವೇಳೆ ವರ್ತೂರು ಸಂತೋಷ್ ತಾಯಿ ಸಲಹೆ ನೀಡಿದ್ದಾರೆ. 

ಮನೆಯಲ್ಲಿ ಯಾರು ಅಳಬಾರದು ಎಂದಿದ್ದಾರೆ. ಸಂಗೀತಾ ನೀನು ತುಂಬಾ ಅಳ್ತೀಯಾ ಇನ್ಮೇಲೆ ಅಳಬೇಡ ಎಂದಿದ್ದಾರೆ. ನಂತರದಲ್ಲಿ ಬಿಗ್‌ಬಾಸ್ ಮನೆಗೆ ಎಲ್ಲರ ಮನೆಯವರು ಎಂಟ್ರಿ ಕೊಟ್ಟಂತೆ ತುಕಾಲಿ ಸಂತೂ ಅವರ ಹೆಂಡತಿ ಕೂಡ ಬಂದಿದ್ದಾರೆ. ಈ ಮಧ್ಯೆ ಬಿಗ್‌ಬಾಸ್ ನನ್ನ ಹೆಂಡತಿ ಮಾತ್ರ ಬರೋದು ಬೇಡ ಅಂತ ತುಕಾಲಿ ಕಾಮಿಡಿ ಡೈಲಾಗ್ ಹೊಡೆದಿದ್ದರು. ಅದೇ ಮಾತು ಕೇಳಿಸಿಕೊಂಡ ಅವರ ಪತ್ನಿ ಎಂಟ್ರಿ ಕೊಡ್ತಿದ್ದಂತೆ ಗ್ರಹಚಾರ ಬಿಡಿಸಿದ್ದಾರೆ.

ದೊಣ್ಣೆಯಿಂದ ಇಡೀ ಮನೆಯಲ್ಲೇ ಅಟ್ಟಾಡಿಸಿಕೊಂಡು ಸರಿಯಾಗಿ ರುಬ್ಬಿದ್ದಾರೆ. ಇನ್ನು ಜನರಿಗೆ ಪ್ರತಾಪ್ ನೋಡಲು ಅವರ ಮನೆಯಿಂದ ಯಾರು ಬಂದಿದ್ದಾರೆ ಎನ್ನುವ ಕುತೂಹಲವಿದೆ. ಏಕೆಂದರೆ ಅವರೇ ಈ ಹಿಂದೆ ನಾನು 3 ವರ್ಷದಿಂದ ಮನೆಗೆ ಹೋಗಿಲ್ಲ. ಅಪ್ಪ ಅಮ್ಮ ತಂಗಿಯನ್ನು ನೋಡಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇನ್ನು ಸಿಕ್ಕ ಮಾಹಿತಿಯ ಪ್ರಕಾರ ಬಿಗ್ಬಾಸ್ ಮನೆಗೆ ಪ್ರತಾಪ ಅವರನ್ನು ನೋಡಲು ಅವರ ತಂದೆ ಬಂದಿದ್ದಾರೆ. ಆ ಫೋಟೋ ವೈರಲ್ ಆಗ್ತಿದೆ. ಆದರೆ ಆ ಎಪಿಸೋಡ್ ಅನ್ನು ಟಿಆರ್ಪಿ ಸಲುವಾಗಿ ಇನ್ನು ಬಿಡುಗಡೆ ಮಾಡಿಲ್ಲ ಎನ್ನಲಾಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.