ಹೊರಗಡೆ ಮಾಡಿರೋ ತಪ್ಪನ್ನು ಒಪ್ಪಿಕೊಂಡು ಕಣ್ಣೀರಿಟ್ಟ ಡ್ರೋನ್ ಪ್ರತಾಪ್, ಚಪ್ಪಾಳೆ ತಟ್ಟಿದ ಕಿಚ್ಚ

 | 
Bgg

 ಐದನೇ ವಾರ ಡ್ರೋನ್‌ ಪ್ರತಾಪ್‌ ಅವರು ವಾರವಿಡೀ ಪ್ರಮುಖ ಹೈಲೈಟ್‌ ಆಗಿದ್ದಾರೆ. ಗಂಧದ ಗುಡಿ ಹಾಗೂ ವಜ್ರಕಾಯ ಟೀಂ ಎಂದು ಎರಡು ಟೀಂ ಮಾಡಿತ್ತು ಬಿಗ್‌ ಬಾಸ್‌. ಗಂಧದ ಗುಡಿಗೆ ಪ್ರತಾಪ್‌ ಕ್ಯಾಪ್ಟನ್‌ ಆದರೆ, ವಜ್ರಕಾಯಕ್ಕೆ ಸಿರಿ ಕ್ಯಾಪ್ಟನ್‌. ಆದರೆ ಕೊನೆಗೆ ಎಲ್ಲ ಟಾಸ್ಕ್‌ನಲ್ಲಿ ಗೆದ್ದು ಬೀಗಿದ್ದು ಮಾತ್ರ ಪ್ರತಾಪ್‌ ತಂಡ. ಇದೀಗ ಟ್ರೋನ್‌ ಪ್ರತಾಪ್‌ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದೆ.

ಸುದೀಪ್‌ ಅವರು ವೇದಿಕೆಯಲ್ಲಿ ಡ್ರೋನ್‌ ಪ್ರತಾಪ್‌ ಅವರಿಗೆ ಇಡೀ ತಂಡ ನಿಮ್ಮ ವಿರುದ್ಧ ನಿಂತಿದ್ದರೂ, ಪ್ರಾಮಾಣಿಕತೆಯಿಂದ ನೀವು ನಿಂತಿದಕ್ಕೆ ಈ ವಾರದ ಕಿಚ್ಚನ ಚಪ್ಪಾಳೆ ನಿಮಗೆ ಎಂದರು. ಪ್ರತಾಪ್‌ ಭಾವುಕರಾಗಿ ಮಾತನಾಡಿ ಇದು ನನಗೆ ಬಿಗ್‌ ಮೂಮೆಂಟ್‌. ಹೊರಗಡೆ ಆದರೆ ಎರಡೂ ಕಡೆ ಏನು ತಪ್ಪಾಗುತ್ತೆ ಎನ್ನುವುದು ಕಾಣಿಸಲ್ಲ.     

         ಹೌದು ನಾನು ಕೆಲವೊಂದು ತಪ್ಪುಗಳನ್ನು ಮಾಡಿದ್ದೇನೆ. ಅದನ್ನ ನಾನು ಹೇಳುವುದಕ್ಕೆ ಯಾವುದೇ ಮುಜುಗರವಿಲ್ಲ. ನನ್ನ ಕಳ್ಳ ಎಂದವರು, ಸುಳ್ಳ ಎಂದವರು, ಈಗ ನೆನಪಿಸಿಕೊಂಡರೆ, ಈಗ ಮನಸ್ಸು ಬಹಳ ಹಗುರುವೆನಿಸುತ್ತದೆ ಎಂದರು.ಪ್ರೇಕ್ಷಕರು ಕೂಡ ಕಮೆಂಟ್‌ನಲ್ಲಿ ಪ್ರತಾಪ್ ಅವರಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿದ್ದು ಖುಷಿ ತಂದಿದೆ .ಎಂದು ಕಮೆಂಟ್‌ ಮಾಡಿದ್ದಾರೆ. ಈ ವೇದಿಕೆಯನ್ನು ಸರಿಯಾಗಿ ಉಪಯೋಗಿಸಿ ಕೊಂಡ ಪ್ರತಾಪ್ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ. ನಿಜಾ ನಂಗೆ ಅಳು ಬಂತು ಎಂದು ಮತ್ತೊಬ್ಬರು ಕಮೆಂಟ್‌ ಮಾಡಿದ್ದಾರೆ.

ಈ ವಾರ ಗೇಮ್‌ನಲ್ಲಿ ಸ್ಟ್ರಾಟೆಜಿ ಬಳಸಿಕೊಂಡು ಸದಸ್ಯರನ್ನು ಕನ್ವಿನ್ಸ್‌ ಮಾಡುವಲ್ಲಿ ಡ್ರೋನ್‌ ಗೆದ್ದಿದ್ದರು. ಅಷ್ಟೇ ಅಲ್ಲದೇ ತಂಡದ ಕ್ಯಾಪ್ಟನ್ ಸಹ ಆಗಿದ್ದರು. ಮಾತ್ರವಲ್ಲ ಬ್ಯಾಕ್‌ ಟು ಬ್ಯಾಕ್‌ ಗೇಮ್ಸ್‌ ಗೆದ್ದು ಬೀಗಿದ್ದರು. ಸಿರಿ ಟೀಮ್‌ ವಜ್ರಕಾಯ ಆದರೆ ಪ್ರತಾಪ್‌ ಅವರದ್ದು ಗಂಧದ ಗುಡಿ ಟೀಂ. ಪ್ರತಿ ಬಾರಿ ಟ್ರೋನ್‌ ಪ್ರತಾಪ್‌ ಟೀಂ ವಿನ್‌ ಆಯ್ತು. ಹೀಗಾಗಿ ಡ್ರೋನ್‌ ಪ್ರತಾಪ್‌ ತಮ್ಮ ಟೀಂ ಕನ್ವಿನ್ಸ್‌ ಮಾಡುವ ರೀತಿ, ಹಾಗೂ ಉಸ್ತುವಾರಿ ವೇಳೆ ಡ್ರೋನ್ ಪ್ರತಾಪ್‌ ಫೇರ್‌ ಆಗಿ ಆಟವಾಡಿದ ರೀತಿ ಇತರೆ ಸ್ಪರ್ಧಿಗಳಿಗೆ ಇಷ್ಟವಾಗಿದೆ. ಹೀಗಾಗಿ ಡ್ರೋನ್ ಪ್ರತಾಪ್ ಅವರಿಗೆ ಬೆಸ್ಟ್ ಪರ್ಫಾಮೆನ್ಸ್ ಮೆಡಲ್ ಲಭಿಸಿದೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.