ಮದುವೆಯಾಗುವ ಹುಡುಗಿಯನ್ನ ಪರಿಚಯಿಸಿದ ಡ್ರೋನ್ ಪ್ರತಾಪ್, ಕನ್ನಡಿಗರು ಫಿದಾ

 | 
Nd
ಬಿಗ್‌ ಬಾಸ್‌ ಕನ್ನಡ ಸೀಸನ್‌ 10 ಬಳಿಕ ತಮ್ಮ ಜೀವನದ ಹೊಸ ಅಧ್ಯಾಯ ಆರಂಭಿಸಿದ್ದ ಡ್ರೋನ್‌ ಪ್ರತಾಪ್‌ ಇದೀಗ ಮನೋರಂಜನಾ ಕ್ಷೇತ್ರದಲ್ಲೇ ಮಿಂಚುತ್ತಿದ್ದಾರೆ. ಬಿಗ್‌ ಬಾಸ್‌ ಬಳಿಕ ಗಿಚ್ಚಿ ಗಿಲಿಗಿಲಿ ಶೋನಲ್ಲಿ ಕಾಣಿಸಿಕೊಂಡಿದ್ದ ಡ್ರೋನ್‌ ಪ್ರತಾಪ್‌ ಇದೀಗ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಮಿಂಚುತ್ತಿದ್ದಾರೆ.
ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಡ್ರೋನ್‌ ಪ್ರತಾಪ್‌ ತಮ್ಮ ಮೆಂಟರ್‌ ಗಗನಾ ಅವರನ್ನು ಖುಷಿ ಪಡಲು ಮಾಡುತ್ತಿರುವ ಪ್ರಯತ್ನಗಳನ್ನು ನೋಡಿದರೆ ನಿಜವಾಗಿಯೂ ಇದು ಡ್ರೋನ್‌ ಪ್ರತಾಪ್ ಅವರೇನಾ ಅನಿಸುತ್ತದೆ. ಅಷ್ಟರ ಮಟ್ಟಿಗೆ ಡ್ರೋನ್‌ ಪ್ರತಾಪ್‌ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಈ ಬಾರಿ ವಿನ್ನರ್‌ ಆಗಬಹುದು ಎನ್ನುವುದು ಪ್ರೇಕ್ಷಕರ ಲೆಕ್ಕಚಾರವಾಗಿದೆ.
ಈ ವಾರ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ಫ್ಯಾಮಿಲಿ ರೌಂಡ್ ಇದ್ದು, ಕಾರ್ಯಕ್ರಮದ ಎಲ್ಲಾ ಸ್ಪರ್ಧಿಗಳ ಪೋಷಕರನ್ನು ಕಾರ್ಯಕ್ರಮದ ವೇದಿಕೆಗೆ ಕರೆಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಡ್ರೋನ್‌ ಪ್ರತಾಪ್‌ ಕುಟುಂಬಸ್ಥರನ್ನು ಕೂಡ ಕರೆಯಿಸಲಾಗಿದ್ದು, ಡ್ರೋನ್‌ ಪ್ರತಾಪ್‌ ಅಪ್ಪ-ಅಮ್ಮನೂ ಕೂಡ ಕಾರ್ಯಕ್ರಮಕ್ಕೆ ಬಂದಿದ್ದಾರೆ. 
ಜೊತೆಗೆ ಅವರ ಅಜ್ಜಿ ಸೇರಿದಂತೆ ಅವರ ಸಂಪೂರ್ಣ ಕುಟುಂಬಸ್ಥರು ಬಂದಿದ್ದಾರೆ. ಈ ವೇಳೆ ವೇದಿಕೆ ಮೇಲೆ ಡ್ರೋನ್‌ ಪ್ರತಾಪ್‌ ಅವರ ಮದುವೆ ಬಗ್ಗೆ ಪ್ರಸ್ತಾಪ ನಡೆದಿದೆ. ಇನ್ನು ಡ್ರೋನ್‌ ಪ್ರತಾಪ್‌ ಈ ವಾರದ ಭರ್ಜರಿ ಬ್ಯಾಚುಲರ್ಸ್ ಕಾರ್ಯಕ್ರಮದಲ್ಲಿ ತಮ್ಮ ತಂದೆ-ತಾಯಿಯ ಪಾದ ಪೂಜೆ ಮಾಡಿ. ನನ್ನ ತಂದೆಯೇ ನನ್ನ ಪ್ರಪಂಚ ಎಂದು ಭಾವುಕರಾಗಿದ್ದಾರೆ. ಈ ವಾರದ ಸಂಚಿಕೆಯ ಪ್ರೋಮೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub