ಕಿಚ್ಚ ಸುದೀಪ್ ಮನೆಗೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ಡ್ರೋನ್ ಪ್ರತಾಪ್, ಅದ್ಧೂರಿಯಾಗಿ ವೆಲ್ ಕಮ್

 | 
ರತ

ಈ ಬಾರಿ 'ಬಿಗ್ ಬಾಸ್‌' ರನ್ನರ್ ಪ್ರತಾಪ್ ಅವರು ಈ ಹಿಂದೆ ಮನೆಗೆ ಎಂಟ್ರಿ ಕೊಟ್ಟ ಬಹುತೇಕ ಸ್ಪರ್ಧಿಗಳು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿಯಿಂದ ಬಂದವರು. ಆದರೆ ಪ್ರತಾಪ್ ಸಾಮಾನ್ಯ ವ್ಯಕ್ತಿಯಾಗಿ ಒಳಗೆ ಹೋಗಿದ್ದರು. ಮನರಂಜನೆ ವಿಚಾರ ಬಂದಾಗೆಲ್ಲ, ನಾನು ಎಂಟರ್‌ಟೇನ್‌ಮೆಂಟ್ ಇಂಡಸ್ಟ್ರಿ ಯಿಂದ ಬಂದಿಲ್ಲ.. ಎನ್ನುತ್ತಿದ್ದರು ಪ್ರತಾಪ್. ಇದರ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು.

ಇದೀಗ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಕಾಮಿಡಿಯೇ ಹೈಲೈಟ್. ಇಂತಹ ಶೋನಲ್ಲಿ ಪ್ರತಾಪ್ ಕಾಮಿಡಿ ಮಾಡ್ತಾರಾ ಅನ್ನೋದು ಕೆಲವರ ಪ್ರಶ್ನೆ. ಅದಕ್ಕೆ ಗಿಚ್ಚಿ ಗಿಲಿ ಗಿಲಿ ಟೀಮ್ ಉತ್ತರ ನೀಡಿದೆ. ಇದರಲ್ಲಿ ನಟನೆ ಗೊತ್ತಿರುವ ಕಲಾವಿದರೇ ಭಾಗವಹಿಸಬೇಕು ಅಂತೇನಿಲ್ಲ. ಯಾರೂ ಬೇಕಾದರೂ ಬರಬಹುದು.. ಎಂದು ಟೀಮ್ ಹೇಳಿಕೊಂಡಿದೆ. ಅದರ ಬೆನ್ನಲ್ಲೇ ಕಾಮಿಡಿ ಮಾಡಲು ಪ್ರತಾಪ್ ಬಂದಿದ್ದಾರೆ.

ನಟ ಸುದೀಪ್ ಚೆನ್ನಾಗಿ ಕಾಮಿಡಿ ಮಾಡಲು ಪ್ರತಾಪ್ ಗೆ ಹಾರೈಸಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿನಯ ಕಲಿತು ಸಿನೆಮಾ ಕ್ಷೇತ್ರದಲ್ಲಿ ಮಿಂಚುವಂತಾಗು ಎಂದು ಹಾರೈಸಿದ್ದಾರೆ. ಡ್ರೋನ್ ಪ್ರತಾಪ್ ನಟ ಸುದೀಪ್ ಅವರ ಮನೆಗೆ ತೆರಳಿ ಅವರ ಆಶೀರ್ವಾದ ಪಡೆದು ನಿಮ್ಮಿಂದ ನನ್ನ ಬದುಕೇ ಬದಲಾಗಿದೆ ಎಂದು ನುಡಿದಿದ್ದಾರೆ.

ಅಂದಹಾಗೆ, ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಗಳಾಗಿ ಭಾಗಿಯಾಗಿದ್ದ ಡ್ರೋನ್ ಪ್ರತಾಪ್, ತುಕಾಲಿ ಸಂತು, ಈಶಾನಿ ಈಗ ಗಿಚ್ಚಿ ಗಿಲಿ ಗಿಲಿ ಸೀಸನ್ 3ರಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಇಷ್ಟು ದಿನ ಬಿಗ್ ಬಾಸ್‌ನಲ್ಲಿ ಕಾಣಿಸಿಕೊಂಡ ಇವರು, ಇನ್ನುಮುಂದೆ ಗಿಚ್ಚಿ ಗಿಲಿ ಗಿಲಿ ಶೋನಲ್ಲಿ ಹೇಗೆ ರಂಜಿಸುತ್ತಾರೆ ಎಂಬುದನ್ನು ಕಾದುನೋಡಬೇಕು.

( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.