ದುನಿಯಾ ವಿಜಯ್ ಮಗಳ ಸೌಂ.ದರ್ಯಕ್ಕೆ ಮನಸೋತ ಕರುನಾಡು, ಎಷ್ಟು ಮುದ್ದಾಗಿದ್ದಾರೆ ಗೊ.ತ್ತಾ
ಸ್ಟಾರ್ ಕಿಡ್ ಎಂದರೆ ಅವರು ಹುಟ್ಟಿದಾಗಿನಿಂದಲೂ ಸ್ಪೆಷಲ್ ಹೌದು ಅವರು ಬಾಲ್ಯದಿಂದಲೇ ಒಂದಿಷ್ಟು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರರಾಗಿರುತ್ತಾರೆ ನಂತರ ಸಿನಿಮಾಗಳ ಮೂಲಕ ಕೆಲವರು ಮಾತ್ರ ಕ್ಲಿಕ್ ಆಗ್ತಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕಾಟೇರಾ ಚಿತ್ರದ ಮೂಲಕ ಕನಸಿನ ರಾಣಿ ಮಾಲಾಶ್ರೀ ಪುತ್ರಿ ಆರಾಧನಾ ರಾಮ್ ಅವರ ಎಂಟ್ರಿ ಆಗಿದ್ದು, ಈಗ ದುನಿಯಾ ವಿಜಯ್ ಅವರ ಪುತ್ರಿ ಮೋನಿಕಾ ಜಬರದಸ್ತಾಗಿ ಬಣ್ಣದ ಲೋಕ ಪ್ರವೇಶಿಸಲಿದ್ದಾರೆ.
ದುನಿಯಾ ವಿಜಯ್ ಅವರು ನಟಿಸಿ, ನಿರ್ದೇಶಿಸಿರುವ ಭೀಮ ಚಿತ್ರದ ಚಿತ್ರೀಕರಣವು ಬಹುತೇಕ ಮುಗಿದಿದೆ .
ಈಗ ತಮ್ಮ ಮುಂದಿನ ಚಿತ್ರದಲ್ಲಿ ಪುತ್ರಿ ಮೋನಿಕಾರೊಂದಿಗೆ ನಟಿಸಲು ಹೊರಟಿದ್ದಾರೆ ಎಂಬ ಸುದ್ದಿಯೂ ಗಾಂಧಿನಗರದಲ್ಲಿ ಹರಿದಾಡುತ್ತಿದೆ.ಅಪ್ಪ ಹಾಗೂ ಮಗಳ ಸಮಾಗಮದ ಚಿತ್ರಕ್ಕೆ ಕಾಟೇರ ಚಿತ್ರಕ್ಕೆ ಸಂಭಾಷಣೆ ಬರೆದಿರುವ ಜಡೇಶ್‍ಕುಮಾರ್ ಅವರು ಆಕ್ಷನ್ ಕಟ್ ಹೇಳಲಿದ್ದಾರೆ.
ಜಡೇಶ್ ಕುಮಾರ್ ಅವರು ಈ ಹಿಂದೆ ಶರಣ್ ನಟನೆಯ ಗುರುಶಿಷ್ಯರು ಚಿತ್ರವನ್ನು ನಿರ್ದೇಶಿಸಿದ್ದರು. ಸಲಗ, ಭೀಮ ಚಿತ್ರವನ್ನು ನಿರ್ದೇಶಿಸಿದ್ದ ದುನಿಯಾ ವಿಜಯ್‍ಅವರು ತಮ್ಮ ನಿರ್ದೇಶನದ ಚಿತ್ರದ ಮೂಲಕವೇ ಮೋನಿಷಾ ಹಾಗೂ ಮೋನಿಕಾರನ್ನು ಚಿತ್ರರಂಗಕ್ಕೆ ಪರಿಚಯಿಸುತ್ತಾರೆ ಎಂದು ಹೇಳಲಾಗುತ್ತಿತ್ತಾದರೂ, ಈಗ ಜಡೇಶ್‍ಕುಮಾರ್ ಅವರ ನಿರ್ದೇಶನದ ಮೂಲಕ ಮೋನಿಕಾರನ್ನು ಬಣ್ಣದ ಲೋಕಕ್ಕೆ ಕರೆತರಲು ಹೊರಟಿದ್ದಾರೆ.
ಮೋನಿಕಾ ಈಗಾಗಲೇ ಬಾಲಿವುಡ್‍ನ ಖ್ಯಾತ ನಟ ಅನುಪಮ್‍ಖೇರ್ ಅವರ ಫಿಲಂ ಇನ್ಸಿಟ್ಯೂಟ್‍ನಲ್ಲಿ ನಟನೆ ಬಗ್ಗೆ ಸಂಪೂರ್ಣ ತಯಾರಿ ನಡೆಸಿದ್ದು, ಅಪ್ಪ ಹಾಗೂ ಮಗಳ ದರ್ಶನವನ್ನು ಬೆಳ್ಳಿತೆರೆ ಮೇಲೆ ನೋಡಲು 2024ರ ಅಂತ್ಯದವರೆಗೂ ಕಾಯಲೇಬೇಕಾಗಿದೆ. ಆರಾಧನಾ ಆಯ್ತು ಇನ್ನು ಮೋನಿಕಾಳ ಹವಾ ಅಂತಿದೆ ಸ್ಯಾಂಡಲ್ ವುಡ್ ಚಿತ್ರ ರಂಗ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.