ಶೂಟಿಂಗ್ ಸಮಯದಲ್ಲಿ ನನ್ನ ಸೊಂ ಟಕ್ಕೆ ಕೈ‌ ಹಾಕಿದ, ತೆಲುಗು ಸಿನಿಮಾದಲ್ಲಿ ಬಿರುಗಾ ಳಿ

 | 
ಬಹ೭
ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲೇ ತೆಲುಗಿನ 'ಮಿಸ್ಟರ್ ಬಚ್ಚನ್' ಸಿನಿಮಾ ತೆರೆಗೆ ಬಂದಿದೆ. ರವಿತೇಜಾ ನಟನೆಯ ಚಿತ್ರಕ್ಕೆ ಹರೀಶ್ ಶಂಕರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಇನ್ನು ಸಿನಿಮಾ ಸಾಂಗ್‌ಗಳ ಬಗ್ಗೆ ಬಹಳ ಹಿಂದೆಯೇ ಸಾಕಷ್ಟು ಟ್ರೋಲ್ ಎದುರಾಗಿತ್ತು.
ಆಕ್ಷನ್ ಥ್ರಿಲ್ಲರ್ 'ಮಿಸ್ಟರ್ ಬಚ್ಚನ್' ಚಿತ್ರದಲ್ಲಿ ನಟ ರವಿತೇಜಾ ಇನ್‌ಕಂ ಟ್ಯಾಕ್ಸ್ ಆಫೀಸರ್ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಭಾಗ್ಯಶ್ರೀ ಬೋರ್ಸ್ ನಾಯಕಿಯಾಗಿ ಮಿಂಚಿದ್ದಾರೆ. ಮಿಕ್ಕಿ ಜೆ ಮೇಯರ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಸಂಸ್ಥೆ ಚಿತ್ರಕ್ಕೆ ಹಣ ಹೂಡಿದೆ. ಟೀ ಸೀರಿಸ್ ಹಾಗೂ ಪನೋರಮಾ ಸ್ಟುಡಿಯೋಸ್ ಸಂಸ್ಥೆಗಳು ಕೈ ಜೋಡಿಸಿದೆ.
ಇತ್ತೀಚೆಗೆ ರವಿತೇಜಾ ನಟನೆಯ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಚೆನ್ನಾಗಿಯೇ ಸದ್ದು ಮಾಡ್ತಿದೆ. ಇನ್ನು ಹರೀಶ್ ಶಂಕರ್ ಹಾಗೂ ರವಿತೇಜಾ ಹ್ಯಾಟ್ರಿಕ್ ಕಾಂಬಿನೇಷನ್‌ ಸಿನಿಮಾ ಇದು. ಚಿತ್ರದ 'ಸಿತಾರ' ಸಾಂಗ್ ಬಗ್ಗೆ ಈ ಹಿಂದೆ ಕೂಡ ಟ್ರೋಲ್ ಎದುರಾಗಿತ್ತು. ನಟಿಯನ್ನು ಪ್ರದರ್ಶನದ ವಸ್ತುವಂತೆ ಬಳಸಿ ಹಾಕಿಸಿದ್ದ ಸ್ಟೆಪ್ಸ್ ಬಗ್ಗೆ ಕೆಲವರು ಬೇಸರ ವ್ಯಕ್ತಪಡಿಸಿದ್ದರು.
56 ವರ್ಷ ವಯಸ್ಸಿನ ರವಿತೇಜಾಗೂ 25 ವರ್ಷ ವಯಸ್ಸಿನ ಭಾಗ್ಯಶ್ರೀಗೂ ಅಂದೆಂತಹ ಸ್ಟೆಪ್ಸ್ ಕಂಪೋಸ್ ಮಾಡಿದ್ದಾರೆ. ಅದರಲ್ಲೂ ಕೆಲ ಫ್ರೇಮ್‌ಗಳಲ್ಲಿ ನಾಯಕಿಯ ಮುಖವೇ ತೋರಿಸದೇ ಬರೀ ಆಕೆಯ ಸೊಂಟ, ಹಿಂಬಾಗ ತೋರಿಸುವಂತಹ ಸ್ಟೆಪ್ಸ್ ಬೇಕಾ? ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಸಿನಿಮಾ ನೋಡಿದವರು ರವಿತೇಜಾ ಆಕೆಯ ಸೊಂಟಕ್ಕೆ ಕೈ ಹಾಕಿ ಮಾಡಿರುವ ಮತ್ತೊಂದು ಸ್ಟೆಪ್ಸ್ ಬಗ್ಗೆ ಬೇಸರ ಹೊರಹಾಕುತ್ತಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.