ಮೊದಲು ನನಗೆ ಬಾಸ್ ಅಂತಿದ್ರು ಈಗ ಯಶ್ ಗೆ ಬಾಸ್ ಅಂತಾರೆ, ನಮ್ದು ಬಾಸ್ ಕುಟುಂಬ ಎಂದ ರಾಕಿಬಾಯ್ ತಾಯಿ ಪುಷ್ಪಾ

 | 
Bjj

      ಆಗಸ್ಟ್ 1ರಂದು ‘ಕೊತ್ತಲವಾಡಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾವನ್ನು ರಾಕಿಂಗ್ ಸ್ಟಾರ್ ಯಶ್ ತಾಯಿ ಪುಷ್ಪಾ ಅರುಣ್ ಕುಮಾರ್ ಅವರು ನಿರ್ಮಾಣ ಮಾಡಿದ್ದಾರೆ. 

     ಇನ್ನು ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುಷ್ಪ ಅವರು ಮಾತನಾಡಿದರು. ಅವರು ಮಾತನಾಡಿದ ವಿಡಿಯೋಗಳು ಇದೀಗಎಲ್ಲೆಡೆ ವೈರಲ್ ಆಗುತ್ತಿವೆ. ಹೌದು ಕೊತ್ತಲವಾಡಿ ಸಿನಿಮಾ ಸುದ್ದಿಗೋಷ್ಠಿಯಲ್ಲಿ ರಾಕಿ ಬಾಯ್ ತಾಯಿ ಪುಷ್ಪಾ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. 
     ಈ ಕುರಿತು ಪುಷ್ಪಾ ಅವರು ಪ್ರತಿಕ್ರಿಯೆ ನೀಡಿದ್ದಾರೆ. ‘ನನಗೆ ನಟನೆ ಮಾಡೋಕೆ ಬರಲ್ಲ. ನಟನೆ ಎಷ್ಟು ಕಷ್ಟ ಎಂಬುದು ಯಶ್ ಸಿನಿಮಾ ಇಂಡಸ್ಟ್ರಿಗೆ ಬಂದ್ಮೇಲೆ ನನಗೆ ಗೊತ್ತಾಗಿದ್ದು. ಯಶ್ ಸಾಕಷ್ಟು ಹೆಸರು ಮಾಡಿದ್ದಾನೆ.
      ಹೂವಿನ ಜೊತೆ ನಾರು ಹೋದಂತೆ ನನ್ನನ್ನು ಜನ ಕರೆದುಕೊಂಡು ಹೋಗುತ್ತಿದ್ದಾರೆ. ಕೆಲಸದ ಹುಡುಗರು ಮೊದಲು ನನಗೆ ಬಾಸ್ ಎನ್ನುತ್ತಿದ್ದರು. ಈಗ ಯಶ್​ಗೆ ಬಾಸ್ ಅಂತಾರೆ’ ಎಂದಿದ್ದಾರೆ ಪುಷ್ಪ ಅರುಣ್ ಕುಮಾರ್.