ಸರ್ಕಾರಿ ಶಾಲೆಗೆ ಗೋಡೆ ನಿರ್ಮಿಸಲು ಎದ್ದು ಬಿದ್ದು ಕೆಲಸ ಮಾಡಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ
Apr 8, 2025, 11:57 IST
|

ಶಾಲೆಯ ಆವರಣ ಗೋಡೆ ನಿರ್ಮಾಣಕ್ಕೆ ಶಿಕ್ಷಣ ಸಚಿವರು ಕೂಡಾ ಶ್ರಮದಾನ ನಡೆಸಿರುವುದು ವಿಶೇಷವಾಗಿತ್ತು. ಬಿರು ಬಿಸಿಲಿನಲ್ಲಿ ತಲೆಗೆ ಟವೆಲ್ ಕಟ್ಟಿಕೊಂಡ ಸಚಿವರು, ಪಿಕಾಸಿ, ಗುದ್ದಲಿ ಹಿಡಿದು ಕಾಂಪೌಂಡ್ ನಿರ್ಮಾಣ ಕಾಮಗಾರಿಯ ಗುಂಡಿ ಅಗೆದರು. ಗುದ್ದಲಿಯಿಂದ ಬುಟ್ಟಿಗೆ ಮಣ್ಣು ತುಂಬಿ, ಬೇರೆಡೆ ಹೊತ್ತು ಸುರಿದರು. ಬೆಳಗ್ಗೆ 19 ಗಂಟೆಗೆ ಕಾಮಗಾರಿ ಆರಂಭಿಸಿ, ಸತತ ಒಂದು ಗಂಟೆಗೂ ಹೆಚ್ಚು ಕಾಲ ಸಚಿವರು, ಶ್ರಮದಾನದಲ್ಲಿ ತೊಡಗಿದ್ದರು.
ನರೇಗಾ ಯೋಜನೆಯನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡರೆ ಗ್ರಾಮಗಳ ಚಿತ್ರಣವನ್ನೇ ಬದಲಿಸಬಹುದು. ಈ ರೀತಿಯ ಕಾರ್ಯಕ್ರಮಗಳು ದೇಶಕ್ಕೇ ಮಾದರಿಯಾಗಬೇಕು. ಇದು ಎಲ್ಲರಿಗೂ ಪ್ರೇರಣೆಯಾಗಬೇಕು.ಸಚಿವ ಮಧು ಬಂಗಾರಪ್ಪ ಕೆಲಸ ಆರಂಭಿಸುತ್ತಿದ್ದಂತೆ, ಕಾಂಗ್ರೆಸ್ ಕಾರ್ಯಕರ್ತರು ಕೂಡ ಶ್ರಮದಾನ ಮಾಡಿದರು.
ಕಾಂಪೌಂಡ್ ನಿರ್ಮಾಣಕ್ಕೆ ಮಣ್ಣು ಹೊತ್ತು ಹಾಕಿದರು. ಜಿಲ್ಲಾ, ತಾಲೂಕು ಮಟ್ಟದ ಮುಖಂಡರು, ಕಾರ್ಯಕರ್ತರು ಸಚಿವರ ಜೊತೆಗೆ ಕೂಲಿ ಕೆಲಸ ಮಾಡಿದರು.ಶಾಲೆ ಕಾಂಪೌಂಡ್ ನಿರ್ಮಾಣ ಕಾರ್ಯಕ್ಕೆ ಶಿಕ್ಷಣ ಸಚಿವರೆ ಗುದ್ದಲಿ, ಪಿಕಾಸಿ ಹಿಡಿದು, ಮಣ್ಣು ಹೊತ್ತು ಹಾಕಿ ಕೂಲಿ ಕಾರ್ಮಿಕನಂತೆ ಕೆಲಸ ಮಾಡಿದ್ದಾರೆ. ಸಚಿವ ಮಧು ಬಂಗಾರಪ್ಪ ಶ್ರಮದಾನಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023