ಮನೋರಂಜನ ಮದುವೆ ಫಿಕ್ಸ್; ಹುಡುಗಿ ಮಾತ್ರ ಸೂ ಪರ್
ಕೆಲ ದಿನಗಳ ಹಿಂದಷ್ಟೇ ಮನೋರಂಜನ್ ರವಿಚಂದ್ರನ್ ಅವರು ಸಂಗೀತಾ ದೀಪಕ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗಾಗಲೇ ಆರತಕ್ಷತೆ ಕಾರ್ಯಕ್ರಮ ಕೂಡ ನಡೆದಿದ್ದು ಚಿತ್ರರಂಗದ ಕೆಲವೇ ಕೆಲವು ಗಣ್ಯರು ಆಗಮಿಸಿದ್ದರು. ಇಂದು ಎರಡು ಕುಟುಂಬದವರ ಮಧ್ಯೆ ಮಾಂಗಲ್ಯಧಾರಣೆ ನಡೆದಿದೆ. ಚಿತ್ರರಂಗದವರಿಗೋಸ್ಕರ ರವಿಚಂದ್ರನ್ ಆರತಕ್ಷತೆ ಕಾರ್ಯಕ್ರಮ ಕೂಡ ಇಟ್ಟುಕೊಂಡಿದ್ದಾರೆ.
ಮನೆಯಲ್ಲಿ ಹುಡುಕಿದ ಹುಡುಗಿಯ ಜೊತೆ ಮನೋರಂಜನ್ ಮದುವೆಯಾಗಿದ್ದಾರೆ. ಈ ಮೊದಲೇ ರವಿಚಂದ್ರನ್ ಅವರು ಮಾತನಾಡಿದ್ದು ನನ್ನ ಮಗಳು ಅಂಜಲಿ ರೀತಿಯಲ್ಲಿ ಮಗನ ಮದುವೆ ಮಾಡೋದಿಲ್ಲ. ಸರಳವಾಗಿ ಮಾಡುತ್ತೇವೆ, ಹೆಣ್ಣಿನ ಕಡೆಯವರಿಗೆ ಆಡಂಬರ ಇಷ್ಟವಿಲ್ಲ ಎಂದು ಹೇಳಿದ್ದರು.
ಇನ್ನು ಮದುವೆ ಬಗ್ಗೆ ಮಾತನಾಡಿದ್ದ ಮನೋರಂಜನ್ ಅವರು ಇದು ಅರೆಂಜ್ ಮ್ಯಾರೇಜ್. ನಾನು ಮದುವೆ ಆಗಲಿರುವ ಹುಡುಗಿ ಸಂಗೀತಾ ನಮಗೆ ದೂರದ ಸಂಬಂಧಿ ಆಗಬೇಕು. ನನಗೆ ಈಗ 34 ವರ್ಷ. ನಮ್ಮ ಕುಟುಂಬದಲ್ಲಿ ಹುಡುಗ ಮತ್ತು ಹುಡುಗಿಯರ ಮದುವೆ 27ರ ಒಳಗೆಯೇ ನಡೆಯುತ್ತದೆ. ನಾನು ಮಾತ್ರ ಇಷ್ಟು ತಡವಾಗಿ ಮದುವೆ ಆಗುತ್ತಿದ್ದೇನೆ.
ನಾವು ಒಬ್ಬರನ್ನೊಬ್ಬರು ಅರಿತುಕೊಂಡೆವು ಮತ್ತು ವಿಶೇಷವಾಗಿ ನಾನು ನಟನಾಗಿರುವುದರಿಂದ, ಅವರಿಗೆ ನನ್ನ ಬಗ್ಗೆ ತಿಳಿದುಕೊಳ್ಳಲು ಸಮಯ ನೀಡಬೇಕು. ಹಾಗಾಗಿ ಈ ನಿರ್ಧಾರವನ್ನು ಒಮ್ಮೆಲೆ ತೆಗೆದುಕೊಳ್ಳಲಿಲ್ಲ ಎಂದು ಹೇಳಿದ್ದರು.ಮನೋರಂಜನ್‌ಗೆ ಮದುವೆ ಮಾಡಲು ತಾಯಿ ಸುಮತಿ ರವಿಚಂದ್ರನ್ ಅವರು ವಧುವಿನ ಹುಡುಕಾಟದಲ್ಲಿದ್ದರು. ಆಗ ಸಂಗೀತಾ ಅವರ ಪ್ರಪೋಸಲ್ ಬಂದಿತ್ತು. ನಂತರ ಎರಡೂ ಕುಟುಂಬಗಳಿಗೆ ಒಪ್ಪಿಗೆಯಾಗಿ, ಈಗ ಮದುವೆಯಾಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.