ಪ್ರತಿ ಬಾರಿ ನನ್ನ ಗಂಡಸಲ್ಲ ಅಂತಾರೆ, ಒಂದಲ್ಲ ಒಂದು‌ ದಿನ ತೋರಿಸ್ತೀನಿ ಎಂದ ಪ್ರಶಾಂತ್

 | 
Nd
ಹಲವರ ಮನಗೆದ್ದ ಗಿಚ್ಚಿ ಗಿಲಿಗಿಲಿ ಹಾಗೂ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮಗಳಲ್ಲಿ ಟ್ಯಾಲೆಂಟೆಡ್‌ ಕಲಾವಿದ ಪ್ರಶಾಂತ್ ಗೌಡ ಸ್ಪರ್ಧಿಸಿದ್ದಾರೆ. ಯಾವುದೇ ಕಾರ್ಯಕ್ರಮ ಆಗಿರಲಿ.. ಅಲ್ಲಿ ಪ್ರಶಾಂತ್ ಇದ್ದರೆ ಸಾಕು.. ಅವರನ್ನ ಅತೀವವಾಗಿ ಕಾಲೆಳೆಯಲಾಗುತ್ತದೆ. ಕೆಲವು ಬಾರಿ ಅಂತೂ ಪ್ರಶಾಂತ್ ಅವರನ್ನ ಬೆರಕೆ ಪ್ರಶಾಂತ್ ಅಂತೆಲ್ಲಾ ಕರೆಯಲಾಗಿದೆ. 
ನೀನು ಗಂಡ್ಸಾ ಅಂತ ಪದೇ ಪದೇ ಪ್ರಶಾಂತ್ ಅವರನ್ನ ಪ್ರಶ್ನಿಸಲಾಗಿದೆ. ತಮಾಷೆ ಹೆಸರಿನಲ್ಲಿ ಅನೇಕ ಬಾರಿಗೆ ಪ್ರಶಾಂತ್‌ಗೆ ಇನ್‌ಸಲ್ಟ್ ಆಗಿದೆ. ಆದರೂ, ಪ್ರತಿ ಬಾರಿಯೂ ಅದನ್ನೆಲ್ಲಾ ತಮಾಷೆಯಾಗಿಯೇ ಪ್ರಶಾಂತ್ ಸ್ವೀಕರಿಸಿದ್ದಾರೆ. ಆದರೆ, ಈ ಬಾರಿ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದಲ್ಲಿ ಪ್ರಶಾಂತ್ ಬೇಸರ ವ್ಯಕ್ತಪಡಿಸಿದ್ದಾರೆ. ಇದು ಎಕ್ಸ್‌ಟ್ರೀಮ್ ಆಯ್ತು ಅಂತ್ಹೇಳಿ ಪ್ರಶಾಂತ್ ಕಣ್ಣೀರು ಸುರಿಸಿದ್ದಾರೆ. ಆದರೆ, ಕೊನೆಗೆ ಆಗಿದ್ದೇ ಬೇರೆ!
ವೇದಿಕೆ ಮೇಲೆ ಬಂದ ಪ್ರಶಾಂತ್, ಒಂದ್ಸಲಿ ಸರಿ.. ಎರಡ್ಸಲಿ ಸರಿ.. ಪ್ರತಿ ಬಾರಿ ಅದನ್ನೇ ಮಾಡಿದರೆ ಬೇಜಾರು ಆಗುತ್ತದೆ. ನಮ್ಮ ಮನೆ ಹೊರಗಡೆಯೆಲ್ಲಾ ಅದನ್ನೇ ಮಾತನಾಡಿಕೊಳ್ಳುತ್ತಾರೆ. ಗಂಡ್ಸಲ್ಲ.. ಹೆಂಗ್ಸಲ್ಲ ಅನ್ನೋದು ಪ್ರತಿ ಬಾರಿಯೂ ಮಾಡಿದರೆ ಸರಿಯಲ್ಲ ಅನಿಸುತ್ತದೆ. ಇದನ್ನ ಸ್ಟಾಪ್ ಮಾಡಿದರೆ ಒಳ್ಳೇದು ಅನ್ನೋದು ನನ್ನ ಅನಿಸಿಕೆ ಅಂತ್ಹೇಳಿ ಪ್ರಶಾಂತ್ ತಮ್ಮ ಮನಸ್ಸಿನ ಮಾತನ್ನ ಹೊರಹಾಕಿದರು. ಅದಕ್ಕೆ, ಇದೆಲ್ಲಾ ತಮಾಷೆಗೆ ಅಲ್ವಾ ಮಾಡೋದು ಎಂದು ಅನುಪಮಾ ಗೌಡ ಕೇಳಿದರು.
ಪ್ರತಿ ಬಾರಿ ಗಂಡ್ಸಲ್ಲ.. ಗಂಡ್ಸಲ್ಲ.. ಅಂತ ಹೇಳ್ತಾ.. ಪ್ರತಿ ಬಾರಿ ಬಾಯಿಗೆ ಬಂದ ಹಾಗೆ ಮಾತಾಡ್ತಾರೆ. ನಾವೇನು ಮಾಡಬೇಕು? ಅಂದ್ರೆ ನಾನೇನು ಕೇಳಲ್ಲ ಅಂತ.. ಎಂದು ಹೇಳಿ ಪ್ರಶಾಂತ್ ಕಣ್ಣೀರು ಸುರಿಸಿದರು. ಅದನ್ನ ಕಂಡು ಹುಡುಗಿಯರು ಶಾಕ್ ಆದರು. ಇನ್ಮೇಲೆ ನಿಮ್ಮ ಹೆಸರು ತಗೊಳ್ಳೋದಿಲ್ಲ. ನಗೋದೂ ಇಲ್ಲ ಅಂತಂದರು ಪ್ರಿಯಾ ಸವದಿ. ಎಲ್ಲರ ಪರವಾಗಿ ನಾನು ಸಾರಿ ಕೇಳ್ತೀನಿ. ಐ ಆಮ್ ಸಾರಿ’’ ಎಂದರು ಅನುಪಮಾ ಗೌಡ. ಗಂಡ್ಸಲ್ಲ ಅಂದಾಗ ನೋವಾಗುತ್ತದೆ. ಕಂಟೆಂಟ್‌ಗಾಗಿ ಸಾಯೋಕೂ ರೆಡಿ ಅಂತಾರೆ ಐಶ್ವರ್ಯಾ ಎಂದು ಪ್ರಶಾಂತ್ ಹೇಳಿದಾಗ ಐಶ್ವರ್ಯಾ ಸಿಂಧೋಗಿ ಸಹ ಕ್ಷಮೆ ಕೇಳಿದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub