ಬಿಗ್ ಬಾಸ್ ಮನೆಗೆ ಹೋಗಿ ನನಗೆ ಟಿವಿಗೂ ಗತಿ ಇಲ್ಲದಂತಾಗಿದೆ, ಮಾಜಿ ಸ್ಫಧಿ೯ ಅಕ್ಷತಾ ಕಣ್ಣೀರು
ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಸಿರುವ ಅಕ್ಷತಾ ಪಾಂಡವಪುರ ಸದ್ಯ ಥಿಯೇಟರ್, ಕುಕ್ಕಿಂಗ್ ಮತ್ತು ಬ್ಯುಸಿನೆಸ್‌ನಲ್ಲಿ ಸಖತ್ ಬ್ಯುಸಿಯಾಗಿಬಿಟ್ಟಿದ್ದಾರೆ. ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಬಿಗ್ ಬಾಸ್ ಸೀಸನ್ 10ರ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಬಿಗ್ ಬಾಸ್ ನೋಡುತ್ತಿಲ್ಲ ಎಂದಿದ್ದಾರೆ.
ನಾನು ಬಿಗ್ ಬಾಸ್ ಸೀಸನ್ 10 ನೋಡುತ್ತಿಲ್ಲ..ಕಾರಣ ನಮ್ಮ ಮನೆಯಲ್ಲಿ ಟಿವಿ ಇಲ್ಲ. ಮೊಬೈಲ್‌ನಲ್ಲಿ ಬರುವ ಸಣ್ಣ ಪುಟ್ಟ ವಿಡಿಯೋ ನೋಡುತ್ತಿರುವುದು. ನಮ್ಮ ಮನೆಯಲ್ಲಿ ಟಿವಿ ಇದೆ ಆದರೆ ಕೇಬಲ್ ಹಾಕಿಸಿಲ್ಲ. ಬಿಗ್ ಬಾಸ್ ಕಾರ್ಯಕ್ರಮ ನೋಡಲು ಚಂದ. ಆಡಿಯನ್ಸ್ ಆಗಿ ನೋಡಿ ಕಣ್ಣು ತಂಪು ಮಾಡಿಕೊಳ್ಳಲು ಚೆನ್ನಾಗಿರುತ್ತದೆ.
ಸೀಸನ್ 10 ಚೆನ್ನಾಗಿ ನಡೆಯುತ್ತಿದೆ. ಪ್ರಖ್ಯಾತಿ ಮತ್ತು ಕುಖ್ಯಾತಿ ಅಂತ ಇರುತ್ತದೆ. ಬಿಗ್ ಬಾಸ್‌ಗೆ ಹೋಗಿ ಪ್ರಖ್ಯಾತಳಾದೆ ಅಂತ ನಾನು ಎಲ್ಲೂ ಹೇಳುವುದಿಲ್ಲ ಎಂದು ಅಕ್ಷತಾ ಹೇಳಿದ್ದಾರೆ. ನೇಮ್ ಮತ್ತು ಫೇಮ್ ನಂಬಿಕೊಂಡು ಅಥವಾ ಇಟ್ಟುಕೊಂಡು ನಾನು ಸಿನಿಮಾ ಇಂಡಸ್ಟ್ರಿ ಅಥವಾ ಟಿವಿ ಜಗತ್ತಿಗೆ ಬಂದಿಲ್ಲ ಎಂದು ಖಾಸಗಿ ಟಿವಿ ಸಂದರ್ಶನದಲ್ಲಿ ಮಾತನಾಡಿದ್ದಾರೆ ಅಕ್ಷತಾ.
ನೇಮ್ ಮತ್ತು ಫೇಮ್ ಬಿಟ್ಟು ಕೆಲಸ ಮಾಡಬೇಕು. ನಟನೆಯನ್ನು ಜೀವನ ಅಂತ ತಿಳಿದುಕೊಂಡು ಕೆಲಸ ಮಾಡುತ್ತಿರುವೆ. ಹೀಗಾಗಿ ಬಿಗ್ ಬಾಸ್ ನನ್ನ ತಪ್ಪು ಆಗಿತ್ತು ಎಂದಿದ್ದಾರೆ ಅಕ್ಷತಾ. ಮತ್ತೂಂದು ಸಲ ತಪ್ಪು ಮಾಡದಂತೆ ಎಚ್ಚರಿಕೆಯಿಂದ ಹೆಜ್ಜೆ ಹಾಕುತ್ತಿದ್ದೇನೆ. ಮುಂದಿನ ದಿನಗಳಲ್ಲಿ ನೆಕ್ಸ್ಟ್ ಸೀಸನ್ ಗೆ ಹೋಗುವವರು ಯೋಚಿಸಬೇಕಿದೆ ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.