Fact check; ನಟ ಚಿಕ್ಕಣ್ಣ ಗುಟ್ಟಾಗಿ ಮದುವೆ, ಅಭಿಮಾನಿಗಳಲ್ಲಿ ಸಂಭ್ರಮ

 | 
Hh

ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟರಲ್ಲಿ ಚಿಕ್ಕಣ್ಣ ಕೂಡಾ ಒಬ್ಬರು. ತಮ್ಮ ಡೈಲಾಗ್, ಮ್ಯಾನರಿಸಂನಿಂದ ಸಾಕಷ್ಟು ಅಭಿಮಾನಿ ಬಳಗವನ್ನು ಸಂಪಾದಿರುವ ನಟ ಚಿಕ್ಕಣ್ಣ ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ರಾಜಾಹುಲಿ ಚಿತ್ರದ ಮೂಲಕ ಸ್ಯಾಂಡಲ್​​​ವುಡ್​​ಗೆ ಎಂಟ್ರಿ ಕೊಟ್ಟ ಚಿಕ್ಕಣ್ಣ ಈಗ ನಾಯಕನಾಗುವ ಮಟ್ಟಕ್ಕೆ ಬೆಳೆದುನಿಂತಿದ್ದಾರೆ.

 ಇನ್ನು ಚಿತ್ರರಂಗದಲ್ಲಿ ರೂಮರ್​​ಗಳು ಸಹಜ. ಆದರೆ ಕೆಲವೊಮ್ಮೆ ಅದು ನಟ ಅಥವಾ ನಟಿಯರ ಬೇಸರಕ್ಕೆ ಕಾರಣವಾಗುತ್ತದೆ. ಇದೀಗ ಚಿಕ್ಕಣ್ಣ ವಿಚಾರದಲ್ಲಿ ಕೂಡಾ ಆಗಿರುವುದು ಇದೇ. ಕಳೆದ ಕೆಲವು ದಿನಗಳಿಂದ ಚಿಕ್ಕಣ್ಣ ಆರೋಗ್ಯ ಸರಿ ಇಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಚಿಕ್ಕಣ್ಣ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು.

ಆದರೆ  ಅವರು ಸೈಲೆಂಟ್ ಆಗಿ ತಮ್ಮ ಹೊಸ ಚಿತ್ರ ಉಪಾಧ್ಯಕ್ಷ ಸಿನೆಮಾ ಶೂಟಿಂಗ್ ಮುಗಿಸಿ ತೆರೆಯ ಮೇಲೆ ಬಂದಿದ್ದಾರೆ. ಹಾಸ್ಯ ಮಿಶ್ರಿತ ಈ ಚಿತ್ರ ನೋಡಿ ಹಲವಾರು ಜನ ಮೆಚ್ಚಿದ್ದಾರೆ. ಅಲ್ಲದೆ ಈ ಚಿತ್ರದ ಪ್ರಮೋಶನ್ ವೇಳೆ ಚಿಕ್ಕಣ್ಣ ವೇದಿಕೆಯ ಮೇಲೆ ಆರೋಗ್ಯ ಸ್ಥಿತಿ ಅಂದು ಹಾಗು ಇಂದು ಸೂಪರ್ ಆಗಿಯೇ ಇದೆ ಎಂದು ಹೇಳಿದ್ದಾರೆ. ಸುಮ್ಮನೆ ಇಂತಹ ಸುದ್ಧಿ ಹಬ್ಬಿಸಬೇಡಿ ಎಂದು ಕೂಡ ಹೇಳಿದ್ದಾರೆ.

ಚಿಕ್ಕಣ್ಣ ಅವರ ಬಗ್ಗೆ ಈ ರೀತಿ ಸುಳ್ಳು ಸುದ್ದಿ ಹರಡುತ್ತಿರುವುದು ಇದೇ ಮೊದಲಲ್ಲ. ಚಿಕ್ಕಣ್ಣ ಹಾಗೂ ಕನ್ನಡದ ಖ್ಯಾತ ನಿರೂಪಕಿ ಸದ್ದಿಲ್ಲದಂತೆ ಮದುವೆಯಾಗಿದ್ದಾರೆ ಎಂದು 2 ವರ್ಷಗಳ ಹಿಂದೆ ಸುದ್ದಿ ಹಬ್ಬಿತ್ತು. ಆಗಲೂ ಕೂಡಾ ಚಿಕ್ಕಣ್ಣ ಇದೇ ರೀತಿ ನಗುತ್ತಲೇ ಪ್ರತಿಕ್ರಿಯಿಸಿದ್ದರು. ಮದುವೆ ಫಿಕ್ಸ್ ಆದರೆ ನಾನೇ ಹೇಳುತ್ತೇನೆ. ಇನ್ನೂ ಯಾವ ಹುಡುಗಿ ಕೂಡಾ ಸಿಕ್ಕಿಲ್ಲ ಎಂದು ಹೇಳಿದ್ದರು. 

ಹಾಗೇ ನಟಿಯೊಬ್ಬರು ಚಿತ್ರದ ಪೋಸ್ಟರ್ ಜೊತೆ ಚಿಕ್ಕಣ್ಣ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದಾಗ ಕೂಡಾ ಚಿಕ್ಕಣ್ಣಗೆ ಆಕೆಯೊಂದಿಗೆ ಮದುವೆ ಆಗಿದೆ ಎನ್ನಲಾಗಿತ್ತು. ನಂತರ ಆ ನಟಿ ಮಾಧ್ಯಮದ ಮುಂದೆ ಬಂದು ಈ ವಿಚಾರವಾಗಿ ಮಾತನಾಡಿದ್ದರು. ಅದು ಸಿನಿಮಾವೊಂದರ ಪೋಸ್ಟರ್, ಚಿತ್ರದಲ್ಲಿ ನಾನು ಹಾಗೂ ಚಿಕ್ಕಣ್ಣ ಮದುವೆಯಾಗುವ ದೃಶ್ಯವಿತ್ತು. ಆಗ ತೆಗೆದ ಫೋಟೋ ಅದು ಎಂದು ಸ್ಪಷ್ಟನೆ ನೀಡಿದ್ದರು. ಹಾಗಾಗಿ ನನಗೆ ವರ್ಶಕ್ಕೊಂದು ಮದುವೆ ಮಾಡ್ತಿದ್ದೀರಿ ಎಂದಿದ್ದಾರೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.