Factccheck:ಎರಡನೇ ಮದುವೆಗೆ ಪೂರ್ವತಯಾರಿ, ಮೇಘನಾ ರಾಜ್ ತಂದೆಯಿಂದ ಸ್ಪಷ್ಟತೆ
Apr 21, 2025, 17:13 IST
|

ಮಗಳು ಮನೆಯಲ್ಲಿದ್ದಾಳೆ ಅಳಿಯನ ನೆನಪು ಮನದಲ್ಲಿ. ಅವರ ರೂಪವನ್ನೇ ಹೊತ್ತ ಮೊಮ್ಮಗ ನಮ್ಮೊಡನೆ ಇದ್ದಾನೆ. ಅಂದಿನ ಆ ಸಮಯದಲ್ಲಿ ನಾನು ಪಟ್ಟ ನೋವು ಇದೆಯಲ್ಲಾ, ಆಗ ದೇವರ ಮೇಲೆ ನಂಬಿಕೆ ಕಳೆದುಕೊಂಡೆ ಎಂದು ಹಿರಿಯ ನಟ ಸುಂದರ್ ರಾಜ್ ತಮ್ಮ ನೋವಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ.ತಮ್ಮ ಜೀವನದ ಸುಖ-ದುಃಖಗಳ ಬಗ್ಗೆ ಮನಸ್ಸು ಬಿಚ್ಚಿ ಮಾತನಾಡಿದ ಅವರು, ದೇವರು ಇಲ್ಲ ಅಂತ ಬೈಯುತ್ತಿದೆ. ಯಾಕೆ ಬೈದಿದ್ದು ಅಂದ್ರೆ ಒಂದೊಂದು ಸಲ ನಮಗೆ ಆ ಕೋಪ ಬರುತ್ತದೆ.
ನಮ್ಮದು ಅಸಹಾಯಕತೆ. ನಾವು ದೇವರಿಗೆ ಇಷ್ಟೆಲ್ಲಾ ಮಾಡಿದ್ದೇವೆ. ನಾವೇನು ತಪ್ಪು ಮಾಡಿದ್ದೇವೆ ಎಂದು ಪ್ರಶ್ನಿಸಿದರು.ದಿನ ಬೆಳಗ್ಗೆ ನಿನಗೆ ದೀಪ ಹಚ್ಚುತ್ತೀನಿ, ಪೂಜೆ ಮಾಡುತ್ತೀನಿ ಹೀಗಿರುವಾಗ ನೀನು ನನಗೆ ಕಷ್ಟ ಕೊಡುತ್ತೀಯಾ?. ಅವಾಗ ಕೆಲವು ಉತ್ತರ ಸಿಕ್ಕಿದವು. ಆದದ್ದು ಆಗಿ ಹೋಯ್ತು. ವಯನಾಡಿನಲ್ಲಿ ರಾತ್ರಿ ಮಲಗಿದ್ದವರು ಬೆಳಗ್ಗೆ ಎಳದೇ ನೂರಾರು ಜನ ಹೋಗಿ ಬಿಟ್ಟರು. ಅದು ಕೂಡ ಇದೇ ಪನಿಷ್ಮೆಂಟ್. ಅಂದರೆ ಚಿರುಗೆ ಸಿಕ್ಕಿದ್ದು ಕೂಡ ಇದೇ ಶಿಕ್ಷೆನಾ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.
ಅದೇ ಚಿರುಗೆ ಎರಡು ದಿನ ಅವಕಾಶವಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ನೋವು ಇದೆ. ಆ ಸಮಯದಲ್ಲಿ ಕೋವಿಡ್ ಅಂತಾ ಒಂದು ಬಂದು ಸಾಕಷ್ಟು ನಿಯಮಗಳಿದ್ದವು. ಅದೆಲ್ಲಾ ಇರಲಿಲ್ಲ ಅಂದಿದ್ರೆ ಖಂಡಿತಾ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವು. ನಮ್ಮ ದುರಾದೃಷ್ಟ ಭಾನುವಾರ ಡಾಕ್ಟರ್‌ಗಳು ಇರಲಿಲ್ಲ. ಇದು ವಿಧಿ. ಒಂದೊಂದು ಸಾರಿ ಎಲ್ಲಾ ಇದ್ದು ಏನೂ ಇರಲ್ಲ ಎಂದು ನೋವು ತೋಡಿಕೊಂಡರು. ಅವಳು ಇಷ್ಟ ಪಟ್ಟರೆ ಎರಡನೆ ಮದುವೆ ಮಾಡ್ತೇನೆ. ಒತ್ತಾಯ ಮಾಡುವುದಿಲ್ಲ. ಅವಳ ಬದುಕು ಅವಳದು . ಜೊತೆಯಾಗಿ ನಾವಿರುತ್ತೇವೆ ಎಂದಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023