FactCheck:ಪವಿತ್ರ ಗೌಡ ದರ್ಶನ್ ಗೆ ಏನಾಗಬೇಕು ಎಂದ ಕೋರ್ಟ್, ದರ್ಶನ್ ಕೊಟ್ಟ ಉತ್ತರಕ್ಕೆ ಪವಿತ್ರ ಫಿದಾ

 | 
ರಗ೮
ಕಳೆದ ಕೆಲ ದಿನಗಳಿಂದ ಸ್ಯಾಂಡಲ್‌ವುಡ್ ನಟ ದರ್ಶನ್‌ಗೆ ಜೈಲಿನಿಂದ ಹೊರಬಂದರೂ ಸಂಕಷ್ಟಗಳು ದೂರವಾಗುತ್ತಿಲ್ಲ. ಹೈಕೋರ್ಟ್ ದರ್ಶನ್‌ಗೆ ನೀಡಿದ ಜಾಮೀನು ರದ್ದು ಮಾಡಲು ರಾಜ್ಯ ಸರ್ಕಾರದ ಪ್ರಾಸಿಕ್ಯೂಷನ್ ಮನವಿ ಮಾಡಿದೆ. ಹೀಗಾಗಿ ಸುಪ್ರೀಂ ಅಂಗಳದಲ್ಲಿ ಇರುವ ಈ ವಿಚಾರ ಎಲ್ಲಿಗೆ ಬಂದು ನಿಲ್ಲಲಿದೆ ಎನ್ನುವ ಆತಂಕದಲ್ಲಿ ದಾಸ ದಿನದೂಡುವಂತಾಗಿದೆ. ಇದರೊಂದಿಗೆ ಪವಿತ್ರಾ ಗೌಡ ದರ್ಶನ್‌ಗೆ ಏನಾಗಬೇಕು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಹೌದು ಕಳೆದ ದಿನ ಸುಪ್ರೀಂ ಕೋರ್ಟ್‌ನಲ್ಲಿ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ನಡೆಯಿತು. ಈ ವೇಳೆ ಪ್ರಕರಣದ ಎ1 ಆರೋಪಿ ಪವಿತ್ರಾ ಗೌಡ ಎ2 ಆರೋಪಿ ದರ್ಶನ್‌ಗೆ ಏನಾಗಬೇಕು ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದ್ದಾರೆ. ನ್ಯಾ.ಜೆ.ಬಿ ಪರ್ದಿವಾಲಾ ಹಾಗೂ ನ್ಯಾ. ಮಹದೇವರ್ ಅವರಿದ್ದ ದ್ವಿ ಸದಸ್ಯ ಪೀಠ ಈ ಪ್ರಶ್ನೆಯನ್ನು ಮಾಡಿದೆ.
ಈ ಪ್ರಶ್ನೆಗೆ ಉತ್ತರ ನೀಡಿದ ಸರ್ಕಾರದ ಪರ ವಕೀಲರಾದ ಸಿದ್ಧಾರ್ಥ್ ಲೂಥ್ರಾ, ದರ್ಶನ್‌ಗೆ ಪವಿತ್ರಾ ಗೌಡ ಮಿಸ್ಟ್ರೆಸ್ ಆಗಬೇಕು ಎಂದಿದ್ದಾರೆ. ಮಿಸ್ಟ್ರೆಸ್ ಅಂದರೆ ವಿವಾಹಿತ ಪುರುಷನ ಜೊತೆಗೆ ಲೈಂಗಿಕ ಸಂಬಂಧ ಹೊಂದಿರುವ ಮಹಿಳೆ ಎಂದು ಕರೆಯಲಾಗುತ್ತದೆ. ಅಂದರೆ ಅನೈತಿಕ ಸಂಬಂಧ ಇಟ್ಟುಕೊಂಡವರು ಎಂದರ್ಥ.
ಹಿಂದೊಮ್ಮೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ಪವಿತ್ರಾ ಗೌಡರನ್ನ ದರ್ಶನ್ ಪತ್ನಿ ಎಂದು ಹೇಳಿದ್ದರು. ಆಗ ವಿಜಯಲಕ್ಷ್ಮೀ ಬಿ ದಯಾನಂದ್ ಅವರಿಗೆ ಪತ್ರ ಬರೆದು ದರ್ಶನ್‌ಗೆ ನಾನು ಮಾತ್ರ ಏಕೈಕ ಪತ್ನಿ. ನನ್ನನ್ನು ಹೊರತು ಬೇರೆ ಯಾರೂ ಕೂಡ ಪತ್ನಿ ಇಲ್ಲ ಎಂದು ಹೇಳಿದ್ದರು. ಆ ಬಳಿಕ ದರ್ಶನ್‌ಗೆ ಪವಿತ್ರಾ ಗೌಡ ಗೆಳತಿ ಆಗಬೇಕು ಎಂದು ಎಲ್ಲರು ಅಂದುಕೊಂಡಿದ್ದರು. ಅದರಂತೆ ಕೋರ್ಟ್ ಅಲ್ಲೂ ಕೂಡ ಹೇಳಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.