FactCheck:ಬಿಗ್ ಬಾಸ್ ನಿರೂಪಣೆಗೆ 50ಕೋಟಿ ಸಂಭಾವನೆಗೆ ಕಿಚ್ಚ ಬೇಡಿಕೆ, ಸುದೀಪ್ ಹೊಸ ಒಪ್ಪಂದಕ್ಕೆ ಒಪ್ಪಿಕೊಳ್ಳುತ್ತಾ ದೊಡ್ಮನೆ
Jun 26, 2025, 09:15 IST
|

ಬಿಗ್ ಬಾಸ್ ಕನ್ನಡ 12 ಕಾರ್ಯಕ್ರಮದ ತೆರೆಹಿಂದಿನ ಕೆಲಸಗಳಿಗೆ ಚಾಲನೆ ಕೊಡಲಾಗಿದ್ಯಂತೆ. ಈ ಬಾರಿಯೂ ಹೋಸ್ಟ್ ಆಗಿ ಕಿಚ್ಚ ಸುದೀಪ್ ಅವರೇ ಮುಂದುವರೆಯುತ್ತಾರಂತೆ. ಇದಕ್ಕಾಗಿ ಕಿಚ್ಚ ಸುದೀಪ್ ಕೆಲವು ಕಂಡೀಷನ್‌ಗಳನ್ನ ಹಾಕಿದ್ದಾರೆ, ಅವೆಲ್ಲದಕ್ಕೂ ‘ಬಿಗ್ ಬಾಸ್’ ಆಯೋಜಕರು ಒಪ್ಪಿಕೊಂಡಿದ್ದಾರಂತೆ ಎಂದು ಕಿರುತೆರೆ ಲೋಕದಲ್ಲಿ ಗುಲ್ಲೆಬ್ಬಿದೆ.
ಬೇರೆ ಭಾಷೆಗಳಿಗಿಂತಲೂ ಕನ್ನಡದ ‘ಬಿಗ್ ಬಾಸ್’ ಒಂದು ಕೈ ಮೇಲಿರಬೇಕು, ಕನ್ನಡಕ್ಕೆ ಹೆಚ್ಚಿನ ಆದ್ಯತೆ ಕೊಡಬೇಕು, ವಿವಾದಾತ್ಮಕ ಸ್ಪರ್ಧಿಗಳು ಇರಬಾರದು ಅಂತ ಕಿಚ್ಚ ಸುದೀಪ್ ಕಂಡೀಷನ್ ಹಾಕಿದ್ದಾರಂತೆ. ಅದಕ್ಕೆ ‘ಬಿಗ್ ಬಾಸ್’ ಆಯೋಜಕರು ಓಕೆ ಅಂದಿದ್ದಾರಂತೆ. ಹಾಗಂತ ಗುಲ್ಲೋ ಗುಲ್ಲು.ಇದಿಷ್ಟು ಕಿರುತೆರೆ ಅಂಗಳಲ್ಲಿ ಕೇಳಿಬರುತ್ತಿರುವ ಗಾಸಿಪ್ ಅಷ್ಟೇ. ಇದೇ ವಿಚಾರ ಸೋಷಿಯಲ್ ಮೀಡಿಯಾದಲ್ಲೂ ಚರ್ಚೆ ಆಗ್ತಿದೆ. ಅಷ್ಟಕ್ಕೂ, ‘ಬಿಗ್ ಬಾಸ್ ಕನ್ನಡ 12’ ಕಾರ್ಯಕ್ರಮದ ಕೆಲಸಗಳಿಗೆ ಚಾಲನೆ ಸಿಕ್ಕಿದ್ಯೋ, ಇಲ್ವೋ ಎಂಬುದೇ ಪಕ್ಕಾ ಇಲ್ಲ.
ಕಿಚ್ಚ ಸುದೀಪ್ ವಾಪಸ್ ಬರುವ ಬಗ್ಗೆ ಅಭಿನಯ ಚಕ್ರವರ್ತಿ ಕಡೆಯಿಂದಾಗಲಿ, ಕಲರ್ಸ್ ಕನ್ನಡ ವಾಹಿನಿ ಕಡೆಯಿಂದಾಗಲಿ, ಬಿಗ್ ಬಾಸ್ ಆಯೋಜಕರ ಕಡೆಯಿಂದಾಗಲಿ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.ಕಳೆದ ಸೀಸನ್ ನಡೆಯುವಾಗಲೇ.. ‘ಇದೇ ನನ್ನ ಕಡೆಯ ಸೀಸನ್’ ಅಂತ ಕಿಚ್ಚ ಸುದೀಪ್ ಘೋಷಿಸಿಬಿಟ್ಟಿದ್ದರು. ‘ಬಿಗ್ ಬಾಸ್’ಗಾಗಿ ಹೆಚ್ಚು ಸಮಯ ಮೀಸಲಿಡಬೇಕಿದೆ, ಸಿನಿಮಾ ಕಡೆಗೆ ಗಮನ ಹರಿಸಬೇಕಿದೆ ಅಂತಲೂ ಕಿಚ್ಚ ಸುದೀಪ್ ಹೇಳಿದ್ದರು. ಅಂದ್ಮೇಲೆ.. ಈಗ ನಿರ್ಧಾರ ಬದಲಿಸಿ ಹೊಸ ಸೀಸನ್‌ಗೆ ಕಿಚ್ಚ ಸುದೀಪ್ ಮರುಳುತ್ತಾರಾ? ಕಾದು ನೋಡೋಣ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023