FactCheck:ಅವಮಾನ ಮಾಡಿದವರ ಮುಂದೆ ಗೆದ್ದು ಬಂದ ಕೆ ಎಲ್ ರಾಹುಲ್, ಇನ್ನುಮುಂದೆ RCB ಸೋಲಿನ ದಿನ ಶುರುವಾಯಿತು

 | 
Nvgg
ಕ್ರಿಕೆಟ್ ಪ್ರೇಮಿಗಳಿಗೆ ಈಗ ಹಬ್ಬ. ಹೌದು ಐಪಿಎಲ್ ಟೂರ್ನಿಯ ನಿನ್ನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸಿದ ಬಳಿಕ ಮಾತನಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬ್ಯಾಟರ್ ಕನ್ನಡಿಗ ಕೆಎಲ್ ರಾಹುಲ್ ಇದು ನಾನು ಆಡಿ ಬೆಳೆದ ಗ್ರೌಂಡ್.. ಬೆಂಗಳೂರು ನನ್ನ ಹೃದಯದಲ್ಲಿದೆ ಎಂದು ಹೇಳಿದ್ದಾರೆ.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್ ಅಂತರದ ಭರ್ಜರಿ ಜಯ ದಾಖಲಿಸಿತು. ಆರ್ ಸಿಬಿ ನೀಡಿದ 164 ರನ್ ಗಳ ಗುರಿಯನ್ನು ಬೆನ್ನು ಹತ್ತಿದ ಡೆಲ್ಲಿ ತಂಡ ಕನ್ನಡಿಗ ಕೆಎಲ್ ರಾಹುಲ್ ಅಜೇಯ 93 ಭರ್ಜರಿ ಬ್ಯಾಟಿಂಗ್ ನೆರವಿನಿಂದ ಗೆದ್ದು ಬೀಗಿತು. ಡೆಲ್ಲಿ ಕೇವಲ 17.5 ಓವರ್ ನಲ್ಲಿ 4 ವಿಕೆಟ್ ಕಳೆದುಕೊಂಡು 169 ರನ್ ಗಳಿಸಿ 6 ವಿಕೆಟ್ ಅಂತರದಲ್ಲಿ ಜಯ ದಾಖಲಿಸಿತು.
ಇದೇ ವೇಳೆ ರಜತ್ ಪಾಟಿದಾರ್ ತಮ್ಮ ಕ್ಯಾಚ್ ಕೈ ಚೆಲ್ಲಿದ ಕುರಿತು ಮಾತನಾಡಿದ ರಾಹುಲ್, ನಾನು ಅದೃಷ್ಟಶಾಲಿಯಾಗಿದ್ದೆ. ಕ್ಯಾಚ್ ಡ್ರಾಪ್ ನಿಂದ ಕೊಂಚ ಜಾಗರೂಕನಾಗಿ ಆಡಲು ಪ್ರಯತ್ನಿಸಿದೆ. ಅಂತೆಯೇ ಇದು ನನ್ನ ಮೈದಾನ, ಇದು ನನ್ನ ಮನೆ. ಬೇರೆಯವರಿಗಿಂತ ನನಗೆ ಇದು ಚೆನ್ನಾಗಿ ತಿಳಿದಿದೆ. ಇಲ್ಲಿ ಆಡುವುದನ್ನು ಆನಂದಿಸಿದೆ. ಬೆಂಗಳೂರು ನನ್ನ ಹೃದಯದಲ್ಲಿದೆ. ಬೆಂಗಳೂರಿಗರು ನನಗೆ ಸಪೋರ್ಟ್ ಮಾಡುತ್ತಾರೆ ಆದರೂ ತವರಿನ ತಂಡಕ್ಕೆ ಅವರ ಸಪೋರ್ಟ್ ಹೆಚ್ಚು ಎಂದು ನನಗೆ ತಿಳಿದಿದೆ ಎಂದು ಹೇಳಿದರು.
ಈ ಹಿಂದೆ ಆರ್ ಸಿಬಿ ಭಾಗವೇ ಆಗಿದ್ದ ಕೆಎಲ್ ರಾಹುಲ್ ರನ್ನು ಫ್ರಾಂಚೈಸಿ ಕೈಬಿಟ್ಟಿತ್ತು. ಅಲ್ಲದೆ ಕಳೆದ ಆಟಗಾರರ ಹರಾಜು ಪ್ರಕ್ರಿಯೆ ಸಂದರ್ಭದಲ್ಲೂ ಅಭಿಮಾನಿಗಳು ಈ ಬಾರಿ ಕೆಎಲ್ ರಾಹುಲ್ ತಂಡಕ್ಕೆ ಮರಳಲಿದ್ದಾರೆ ಎಂದು ಭಾವಿಸಿದ್ದರು. ಇದಕ್ಕೆ ಇಂಬು ನೀಡುವಂತೆ ಕಳೆದ ಬಾರಿಯ ಐಪಿಎಲ್ ನಲ್ಲಿ ಎಲ್ ಎಸ್ ಜಿ ಪರ ಆಡಿದ್ದ ರಾಹುಲ್ ರನ್ನು ಲಕ್ನೋ ಫ್ರಾಂಚೈಸಿ ನಡೆಸಿಕೊಂಡ ರೀತಿ ಆರ್ ಸಿಬಿ ಅಭಿಮಾನಿಗಳ ಕಣ್ಣು ಕೆಂಪಾಗಿಸಿತ್ತು. ಹೀಗಾಗಿ ಈ ಬಾರಿ ರಾಹುಲ್ ಆರ್ ಸಿಬಿ ಪರ ಆಡುತ್ತಾರೆ ಎಂದು ಭಾವಿಸಿದ್ದರು. ಆದರೆ ಆರ್ ಸಿಬಿ ಫ್ರಾಂಚೈಸಿಯ ಬದಲಿಗೆ ರಾಹುಲ್ ಡೆಲ್ಲಿ ಪಾಲಾಗಿದ್ದರು.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.