FactCheck:ನಾನು ರಾಘ ಆದಷ್ಟು ಬೇಗ ಮದುವೆ ಆಗುತ್ತೇವೆ, ಮಿಂಚಿನ ಮಾತು ಹೇಳಿದ ಮೇಘನಾ ರಾಜ್

 | 
Bs
ನಟಿ ಮೇಘನಾ ರಾಜ್‌ ಅವರು ಗರ್ಭಿಣಿಯಿದ್ದಾಗಲೇ ದೈಹಿಕವಾಗಿ ಪತಿ ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡರು. ಪ್ರೀತಿಸಿ, ಅದ್ದೂರಿಯಾಗಿ ಮದುವೆಯಾಗಿದ್ದ ಈ ಜೋಡಿ ಖುಷಿಯಿಂದ ಬದುಕುತ್ತಿತ್ತು. ಯಾರ ಕೆಟ್ಟ ದೃಷ್ಟಿ ಬಿತ್ತೋ ಏನೋ ಈ ದುರಂತ ನಡೆಯಿತು. ಮುದ್ದಾದ ಮಗನಿಗೆ ತಾಯಿ, ತಂದೆಯಾಗಿ ಮೇಘನಾ ರಾಜ್‌ ಕಾರ್ಯ ನಿರ್ವಹಿಸುತ್ತಿದ್ದಾರೆ. ಆಗಾಗ ಅವರಿಗೆ ಎರಡನೇ ಮದುವೆ ಆಗ್ತಿದೆ, ಆ ನಟನ ಜೊತೆ ಮದುವೆ ಆಗುವುದು ಎಂಬ ಮಾತು ಕೇಳಿ ಬರುತ್ತದೆ. ಅದಕ್ಕೆ ಮೇಘನಾ ಉತ್ತರ ನೀಡಿದ್ದಾರೆ.
First Day First Show ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೇಘನಾ ರಾಜ್‌ ಅವರು, ನಾನು ನನ್ನ ಜೀವನದಲ್ಲಿ ಎರಡನೇ ಮದುವೆ ಆಗುವ ಬಗ್ಗೆ ಸಂದರ್ಶನದಲ್ಲಿ ಮಾತನಾಡಿದ್ದೆ. ಅದು ಎಲ್ಲರಿಗೂ ಅರ್ಥ ಆಗಿಲ್ಲ. ಹೀಗಿದ್ದರೂ ಕೆಲವರು ನೆಗೆಟಿವ್‌ ಕಾಮೆಂಟ್‌ ಮಾಡಿದ್ದಾರೆ. ಅರ್ಥವಾಗದೆ ಜನರು ಮಾತನಾಡಿದ್ದಾರೆ. ಹೀಗಾಗಿ ಮತ್ತೆ ನಾನು ಈ ಬಗ್ಗೆ ಮಾತಾಡಿ, ಅವರು ಇನ್ನೊಂದಿಷ್ಟು ಮಾತನಾಡೋಕೆ ಆಹಾರ ಕೊಡೋದಿಲ್ಲ. ಬೇರೆ ನಟರ ಜೊತೆ ನನ್ನ ಮದುವೆ ಆಗತ್ತೆ ಎನ್ನೋದು ಕೇಳಿದೆ. ಎಷ್ಟು ಖುಷಿಯಾಗತ್ತೋ ಅಷ್ಟು ಮಾತನಾಡಲಿ ಎಂದು ಅವರು ಹೇಳಿದ್ದಾರೆ.
ನನ್ನ ರಾಯನ್‌ಗೆ ಅಪ್ಪ ಇದ್ದಾರೆ, ರಾಯನ್‌ಗೆ ಚಿರಂಜೀವಿ ಸರ್ಜಾನೇ ಅಪ್ಪ. ನನಗೆ ಎರಡನೇ ಮದುವೆ ಬಗ್ಗೆ ಯೋಚನೆ ಬಂದಿಲ್ಲ ಅಂತ ಹೇಳಿದ್ದರೆ ಅದು ಸುಳ್ಳು ಆಗುವುದು. ನನ್ನ ಮಗನನ್ನು ನೋಡಿದಾಗ, ಅವನು ಪ್ರತೀ ದಿನವೂ ಅಪ್ಪನ ಬಗ್ಗೆ ಮಾತನಾಡುತ್ತಾನೆ. ಅಪ್ಪ ಅಂದ್ರೆ ಚಿರು ಅಂತ ಅವನಿಗೆ ಗೊತ್ತಿದೆ. ಚಿರು ಹಾಡುಗಳನ್ನು ನೋಡುತ್ತಾನೆ. ಆದರೆ ಫಿಸಿಕಲ್‌ ಆಗಿ ಚಿರಂಜೀವಿ ಸರ್ಜಾರನ್ನು, ಮಗ ನೋಡಿಲ್ಲ. ಆದ್ರೆ ಅಪ್ಪ ಎನ್ನೋರು ಇದ್ದಾರೆ ಅನ್ನೋದು ಅವನಿಗೆ ಗೊತ್ತಿದೆ. ಆದರೆ ರಾಯನ್‌ಗೆ ಫಿಸಿಕಲ್‌ ಆಗಿ ತಂದೆ ಫಿಗರ್‌ ಇದ್ದರೆ ಚೆನ್ನ ಅಂತ ಕೆಲ ಬಾರಿ ಅನಿಸುತ್ತದೆ ಎಂದು ಮೇಘನಾ ರಾಜ್‌ ಅವರು ಆರ್‌ಜೆ ಮಯೂರಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.
ನಟ ವಿಜಯ್‌ ರಾಘವೇಂದ್ರ ಅವರಿಗೂ ಇದೇ ಥರ ಮಾತಾಡ್ತಾರೆ. ಇದರಿಂದ ನನಗೆ ಬೇಸರವಾಗಲಿ ಅಂತ ಮಾತಾಡ್ತಾರೋ ಅಥವಾ ಖುಷಿ ಆಗಲಿ ಅಂತ ಮಾತಾಡ್ತಾರೋ ಗೊತ್ತಿಲ್ಲ. ಆದರೆ ಇದನ್ನೇ ಇಟ್ಕೊಂಡು ಟ್ರೋಲ್ಸ್‌ ಮಾಡುತ್ತಾರೆ. ಇದನ್ನು ನಾನು ಮನರಂಜನೆ ಎನ್ನೋ ಥರ ತಗೋತೀನಿ ಎಂದು ಅವರು ಹೇಳಿದ್ದಾರೆ. 
ನನ್ನ ಜೀವನಕ್ಕೆ ಸಂಗಾತಿಯಾಗಿ ಯಾರು ಬರಬಹುದು ಅಂತ ಐಡಿಯಾ ಇಲ್ಲ. ನನ್ನ ಲೈಫ್‌ನಲ್ಲಿ ಯಾರು ಬರಬೇಕು ಅಂತ, ಯಾರು ಬಂದ್ರೆ ಸರಿ ಅಂತ ಚಿರುಗೆ ಅನಿಸಿದ್ರೆ, ಅದು ನನ್ನ ಜೀವನಕ್ಕೆ ಒಳ್ಳೆಯ ನಿರ್ಧಾರ ಅಂತ ಅನಿಸಿದ್ರೆ ಅದು ನಿಜವಾಗಿಯೂ ಆಗುತ್ತದೆ ಎಂದು ಅವರು ಹೇಳಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub