FactCheck:ಜಗತ್ತಿನ ಉದ್ದವಾದ ವಿಮಾನದಲ್ಲಿ ಕಾಣಿಸಿಕೊಂಡ ಉಪೇಂದ್ರ, ಹೊಸ ಸಿನಿಮಾಗಾಗಿ ವಿಮಾನ ಖರೀದಿಸಿದ್ರ ಉಪ್ಪಿ

 | 
Kkk
ಕನ್ನಡದ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ '45' ಟೀಸರ್ ಅನಾವರಣಗೊಂಡಿದೆ. ವಾಣಿಜ್ಯ ನಗರಿ ಮುಂಬೈಯಲ್ಲಿ ನಡೆದ ಈ ಸಮಾರಂಭದಲ್ಲಿ ಹ್ಯಾಟ್ರಿಕ್ ಹಿರೋ ಡಾ. ಶಿವರಾಜ್ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ ಹಾಗೂ ನಿರ್ದೇಶಕ ಅರ್ಜುನ್ ಜನ್ಯ ಹಾಗೂ ನಿರ್ಮಾಪಕ ಉಮಾ ರಮೇಶ್ ರೆಡ್ಡಿ ಮತ್ತು ರಮೇಶ್ ರೆಡ್ಡಿ ಉಪಸ್ಥಿತರಿದ್ದರು.
ದಕ್ಷಿಣ ಭಾರತದ ಪ್ರಸಿದ್ಧ ನಟರನ್ನೊಳಗೊಂಡಿರುವ ಈ ಚಿತ್ರ ಅದ್ದೂರಿಯಾಗಿ ಚಿತ್ರೀಕರಣಗೊಂಡಿದ್ದು, ಆಕ್ಷನ್-ಫ್ಯಾಂಟಸಿ ನಿರೂಪಣೆ, ಉತ್ತಮ ಕಥೆಯೊಂದಿಗೆ ಭರವಸೆ ಮೂಡಿಸಿದೆ. ಆಗಸ್ಟ್ 15, 2025 ರಂದು ಕನ್ನಡ, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಭಾರತೀಯ ಚಿತ್ರರಂಗದಲ್ಲಿ ಐತಿಹಾಸಿಕ ಮೈಲಿಗಲ್ಲು ಸೃಷ್ಟಿಸುವ ಸಾಧ್ಯತೆಯಿದೆ.
ಸಂಗೀತ ಮಾಂತ್ರಿಕ ಅರ್ಜುನ್ ಜನ್ಯ ನಿರ್ದೇಶಿಸಿದ ಈ ಚಿತ್ರ ಆಕ್ಷನ್, ಎಮೋಷನ್ ಹಾಗೂ ಆಳವಾದ ತಾತ್ವಿಕ ಟ್ವಿಸ್ಟ್ ಗಳ ಹೊರಣವಾಗಿದೆ. ಟೀಸರ್ ಬಿಡುಗಡೆ ಸಮಾರಂಭ ಜನರಿಂದ ತುಂಬಿತ್ತು. ಮಾಧ್ಯಮಗಳು ಮತ್ತು ಅಭಿಮಾನಿಗಳು ಟೀಸರ್‌ನ ಭವ್ಯತೆ, ದೃಶ್ಯ ವೈಭವವನ್ನು ಶ್ಲಾಘಿಸಿವೆ. ವಿಷುಯಲ್ ಎಫೆಕ್ಟ್‌ ಹಾಗೂ ಅತ್ಯುತ್ತಮ ಅಭಿನಯಕ್ಕೆ ಚಪ್ಪಾಳೆಯ ಸುರಿಮಳೆಯಾಯಿತು.
ಇನ್ನು ನಟರೇಲ್ಲರೂ ತಮ್ಮ 45 ಚಿತ್ರದ ಪ್ರಚಾರಕ್ಕೇನೆ ಹೊರಟ್ಟಿದ್ದಾರೆ. ಏಪ್ರಿಲ್-15 ಮತ್ತು ಏಪ್ರಿಲ್ -16 ರಂದು ಮುಂಬೈ, ಹೈದ್ರಾಬಾದ್, ಚೆನ್ನೈ, ಕೇರಳ ಹೀಗೆ ನಾಲ್ಕು ರಾಜ್ಯಗಳಿಗೂ ಪ್ರಯಾಣ ಬೆಳೆಸಲಿದ್ದಾರೆ. ಆಯಾ ರಾಜ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಹೇಳಿಕೊಳ್ಳಲಿದ್ದಾರೆ. ಈಗಾಗಲೇ ಟೀಸರ್ ನೋಡಿ ಮೆಚ್ಚಿಕೊಂಡವರಿಗೂ ಧನ್ಯವಾದ ಹೇಳಲಿದ್ದಾರೆ. ಇವರ ಈ ಒಂದು ಪಯಣದಲ್ಲಿ ಅದ್ಯಾಕೋ ರಾಜ್ ಬಿ ಶೆಟ್ಟಿ ಕಾಣಿಸುತ್ತಿಲ್ಲ. ಬೆಂಗಳೂರಿನಿಂದ ಖಾಸಗಿ ವಿಮಾನದ ಮೂಲಕವೇ ಇದೀಗ ಇವರು ಪ್ರಯಾಣ ಆರಂಭಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub