FactCheck:ವಿಡಿಯೋ ಕಾಲ್ ಮೂಲಕ ಲೈವ್ ಬಂದು RCB Management ಗೆ ಗುಮ್ಮಿದ ಕೆ ಎಲ್ ರಾಹುಲ್
Apr 14, 2025, 13:22 IST
|

ತಂಡವನ್ನು ಗೆಲ್ಲಿಸುತ್ತಿದ್ದಂತೆ ಬ್ಯಾಟ್‌ನಿಂದ ವೃತ್ತ ಬರೆದ ಅವರು, ಇದು ನನ್ನ ಮೈದಾನ ಎಂದು ಹೇಳಿದರು. ಸಾಮಾನ್ಯವಾಗಿ ಶಾಂತವಾಗಿರುವ ಕೆಎಲ್ ರಾಹುಲ್ ಉಗ್ರಾವತಾರ ಕಂಡು ಅಭಿಮಾನಿಗಳು ಕೂಡ ಅಚ್ಚರಿಗೊಂಡರು. ಆರ್ ಸಿಬಿಗೆ ಆಡಬೇಕು ಎಂದು ಬಹಿರಂಗವಾಗಿಯೇ ಅವರು ಆಸೆ ವ್ಯಕ್ತಪಡಿಸಿದ್ದರು. ಮೆಗಾ ಹರಾಜಿನಲ್ಲಿ ಆರ್ ಸಿಬಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲಿ ಎಂದು ಅಭಿಮಾನಿಗಳು ಕೂಡ ಒತ್ತಾಯಿಸಿದ್ದರು.
ಆದರೆ ಆರ್ ಸಿಬಿ 10.75 ಕೋಟಿ ರೂಪಾಯಿವರೆಗೆ ಬಿಡ್ ಮಾಡಿ ಸುಮ್ಮನಾಯಿತು. 14 ಕೋಟಿ ರೂಪಾಯಿಗೆ ಅವರು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದರು.ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಾಗಿ ಎರಡು ಸತತ ಅರ್ಧಶತಕ ಸಿಡಿಸಿರುವ ಕೆಎಲ್ ರಾಹುಲ್ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಮ್ಮ ಸಂಭ್ರಮದ ಹಿಂದಿನ ಕಾರಣವನ್ನು ಅವರು ಬಹಿರಂಗಪಡಿಸಿದ್ದಾರೆ. ಯಾವ ಕಾರಣಕ್ಕೆ ಹಾಗೆ ಮಾಡಿದೆ, ಅದರ ಅರ್ಥವೇನು ಎಂದು ಸ್ವತಃ ಅವರೇ ಹೇಳಿದ್ದಾರೆ.
ಕೆಎಲ್ ರಾಹುಲ್ ಪಂದ್ಯದ ನಂತರ ಸ್ಪಷ್ಟತೆಯನ್ನು ನೀಡಿದ್ದು, ಇದು ನನಗೆ ವಿಶೇಷ ಸ್ಥಳ ಎಂದು ಡೆಲ್ಲಿ ಕ್ಯಾಪಿಟಲ್ಸ್ ಮಾಧ್ಯಮ ತಂಡಕ್ಕೆ ತಿಳಸಿದ್ದಾರೆ. ಆ ಆಚರಣೆ ನನ್ನ ನೆಚ್ಚಿನ ಸಿನಿಮಾಗಳಲ್ಲಿ ಒಂದಾದ ಕಾಂತಾರದಿಂದ ಪ್ರೇರಣೆ ಪಡೆದಿದ್ದು. ಹೌದು, ಈ ಮೈದಾನ, ಈ ಮನೆ, ಈ ಟರ್ಫ್ ನಾನು ಬೆಳೆದ ಸ್ಥಳ ಮತ್ತು ಇದು ನನ್ನದು ಎಂಬ ಹೆಮ್ಮೆ ಎಂದಿದ್ದಾರೆ.ಕಾಂತಾರ ಸಿನಿಮಾದ ಹಿನ್ನಲೆ ಸಂಗೀತದೊಂದಿದೆ ಡೆಲ್ಲಿ ಕ್ಯಾಪಿಟಲ್ಸ್ ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಹಂಚಿಕೊಂಡಿದೆ. ಸದ್ಯ ವಿಡಿಯೋ ವ್ಯಾಪಕವಾಗಿ ವೈರಲ್ ಆಗುತ್ತಿದೆ. ಆರ್ ಸಿಬಿ ಸೋತರೂ ಕನ್ನಡಿಗ ಕೆಎಲ್ ರಾಹುಲ್ ಉತ್ತಮವಾಗಿ ಆಡಿದ್ದು ಅಭಿಮಾನಿಗಳಿಗೆ ಸಮಧಾನ ತಂದಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Thu,24 Apr 2025