FactCheck:ಮೇಘನಾ ರಾಜ್ ಮದುವೆ ಆಗುವ ಹುಡುಗನ ಬಗ್ಗೆ ಸ್ವತಃ ಅವರೇ ಮನಬಿಚ್ಚಿ ಹೇಳಿಕೊಂಡಿದ್ದಾರೆ
Apr 3, 2025, 21:39 IST
|

ಅಲ್ಲದೇ ಇನ್ನು ಕೆಲವರು ಮೇಘನಾ ರಾಜ್ ಚಿರು ಅವರನ್ನ ಬಹುಬೇಗ ಮರೆತರು ಅಂದರು. ಈ ಎಲ್ಲ ವಿಚಾರಗಳಿಗೆ ನಟಿ ಮೇಘನಾ ರಾಜ್ ಮೌನ ಮುರಿದು ಮುಕ್ತವಾಗಿ ಮಾತನಾಡಿದ್ದಾರೆ.ಖಾಸಗಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮತ್ತೊಂದು ಮದುವೆ ಕುರಿತು ಮಾತನಾಡಿದ್ದಾರೆ. ನಮಗೆ ಸಮಾಧಾನವಾಗುತ್ತೆ ಎಂದು ಅಂದುಕೊಂಡು ಅವರು ಹೀಗೆ ಮಾತನಾಡುತ್ತಾರಾ ಅಥವಾ ನೋವಲ್ಲಿರುವ ನಮಗೆ ಇನ್ನೂ ನೋವು ಕೋಡಬೇಕು ಎಂಬ ಉದ್ದೇಶದಲ್ಲಿ ಮಾತನಾಡುತ್ತಾರಾ, ಟ್ರೋಲ್ ಮಾಡುತ್ತಾರಾ ಗೊತ್ತಿಲ್ಲ, ಆದರೆ ಅದೆಲ್ಲ ನೋಡಿದಾಗ ನನಗೆ ಸ್ವಲ್ಪ ಮನರಂಜನೆ ಸಿಗುತ್ತೆ ಎಂದು ಮೇಘನಾ ಹೇಳಿದ್ದಾರೆ.
ಜನ ಹೀಗೆ ಮಾತನಾಡುವುದು ಅಂತ ನಾವು ಒಪ್ಪಿಕೊಳ್ಳಬೇಕು ಯಾಕೆಂದರೆ ನನ್ನ ಬಗ್ಗೆ ಮಾತ್ರವಲ್ಲ ವಿಜಯ್ ರಾಘವೇಂದ್ರ ವಿಚಾರದಲ್ಲಿ ಕೂಡ ಜನ ಹೀಗೆ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ. ಇನ್ನು ಮಗನ ಜೊತೆ ಹಾಯಾಗಿ ಕಾರಿನಲ್ಲಿ ಜಾಲಿ ರೈಡ್ ಮಾಡಿರುವ ಮೇಘನಾ ರಾಜ್ ಸೂಪರ್ ಆಗಿ ದಿನವನ್ನು ಕಳೆಯುತ್ತಿದ್ದಾರೆ. ಮತ್ತೆ ಮದುವೆ ಬಗ್ಗೆ ಯೋಚಿಸಿಲೂ ಕೂಡ ಮನಸ್ಸಿಲ್ಲ ಎಂದಿದ್ದಾರೆ.
ನಾನು ಹೀಗೆ ಇರುವುದು ಬೆಸ್ಟ್ ಎಂದು ಅನಿಸಿದರೆ ಚಿರು ಅದನ್ನು ನೋಡಿಕೊಳ್ಳುತ್ತಾರೆ. ನನಗೆ ದೇವರ ಮೇಲೆ ನಂಬಿಕೆ ಇದೆ, ನನ್ನ ಸುತ್ತ ಮುತ್ತ ಇರುವ ಎನರ್ಜಿಗಳ ಮೇಲೆ ನಂಬಿಕೆ ಇದೆ, ಚಿರುನ ಕಳೆದುಕೊಂಡ ನಂತರ ನನ್ನ ಬದುಕಿನಲ್ಲಿ ಕೆಲವು ಅಲ್ಲ ಹಲವು ಪವಾಡಗಳು ನಡೆದಿವೆ. ನನಗೆ ದೇವರ ಆಶೀರ್ವಾದ ಸಿಕ್ಕಿದೆ. ಚಿರು ದೇವರ ಹತ್ತಿರ ಹೋಗಿದ್ದಾರೆ, ಹೀಗಾಗಿ ಅಲ್ಲಿಂದನೇ ಚಿರು ನನಗೆ ಸದಾ ಒಳ್ಳೆಯದನ್ನು ಬಯಸುತ್ತಾರೆ, ಒಳ್ಳೆಯದನ್ನೇ ನನಗೆ ಮಾಡುತ್ತಾರೆ ಕೂಡ ಎಂದು ಮೇಘನಾ ರಾಜ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023