FactCheck:ಕರ್ಣ ಸೀರಿಯಲ್ ಅರ್ಥಕ್ಕೆ ನಿಲ್ಲಿಸಿದ ನಿರ್ಮಾಪಕರು, ಏಕಾಏಕಿ ದುಃಖಿತನಾದ ಕಿರಣ್ ರಾಜ್
Jul 14, 2025, 13:16 IST
|

ಆದರೆ ಅಂದುಕೊಂಡ ಸಮಯಕ್ಕೆ ಕರ್ಣ ಧಾರಾವಾಹಿ ಶುರುವಾಗಲಿಲ್ಲ. ಇದರಿಂದ ಪ್ರೇಕ್ಷಕರು ಕೂಡ ಗೊಂದಲದಲ್ಲಿದ್ದಾರೆ. ಈ ಬಗ್ಗೆ ಖುದ್ದು ಕಿರಣ್ ರಾಜ್ ಪ್ರತಿಕ್ರಿಯಿಸಿದ್ದು, ಧಾರಾವಾಹಿ ಶುರುವಾಗದಿರುವುದಕ್ಕೆ ಕ್ಷಮೆ ಕೇಳಿ, ಕಾರಣವೂ ತಿಳಿಸಿದ್ದಾರೆ. ಎಲ್ಲರಿಗೂ ನಮಸ್ಕಾರ, ನಾನು ಕರ್ಣನಾಗಿ ನಿಮ್ಮೆಲ್ಲರ ಮನೆಗೆ ಬರಬೇಕಿತ್ತು. ಆದರೆ ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಇದಕ್ಕೆ ಮೊದಲಿಗೆ ನಾನು ಎಲ್ಲ ಪ್ರೇಕ್ಷಕರ ಕ್ಷಮೆ ಕೇಳುತ್ತೇನೆ. ನೀವು ಕೊಟ್ಟ ಸ್ಪಂದನೆ, ಪ್ರೀತಿಗೆ ನಾವು ಕೂಡ ಈ ಸೀರಿಯಲ್ ಅನ್ನ ನಿಮ್ಮ ಮುಂದೆ ಇಡಬೇಕು ಎಂದು ಉತ್ಸಾಹದಿಂದ ಕಾದಿದ್ವಿ. ಪ್ರತಿ ದಿನವೂ ನಮ್ಮ ಸೀರಿಯಲ್ ಯಾವಾಗ ಲಾಂಚ್ ಆಗುತ್ತೆ? ಯಾವಾಗ ಎಂಟು ಗಂಟೆಯಾಗುತ್ತೆ. ಯಾವಾಗ ನೀವು ಮೊದಲ ಎಪಿಸೋಡ್ ನೋಡ್ತೀರಿ? ನಿಮ್ಮ ಪ್ರತಿಕ್ರಿಯೆ ಹೇಗಿರುತ್ತೆ? ಎನ್ನುವ ಕುತೂಹಲ ನಮ್ಮಲ್ಲೂ ಇತ್ತು ಎಂದು ಕಿರಣ್ ರಾಜ್ ಹೇಳಿದ್ದಾರೆ.
ನಾನು ಕೂಡ ಈ ದಿನಕ್ಕೆ ಕಾಯುತ್ತಿದ್ದೆ. ಸುಮಾರು ಎರಡು ವರ್ಷಗಳ ನಂತರ ನಿಮ್ಮ ಮುಂದೆ, ನಿಮ್ಮ ಮನೆಗೆ ಕರ್ಣನಾಗಿ ಬರಬೇಕು ಅಂದುಕೊಂಡಿದ್ದೆ. ಆದರೆ ನನಗೆ ತಿಳಿದಿರುವ ಮಾಹಿತಿ ಪ್ರಕಾರ ಏನೋ ಲೀಗಲ್ ಸಮಸ್ಯೆ ಆಗಿದೆ. ಇದನ್ನು ಪರಿಹರಿಸಿಕೊಂಡು ಆದಷ್ಟು ಬೇಗನೆ ನಿಮ್ಮ ಮುಂದೆ ಬರ್ತೀವಿ, ಸ್ವಲ್ಪ ತಡ ಆಗಬಹುದು, ಆದರೆ ಬಂದೇ ಬರ್ತೀವಿ. ನಮಗೆ ಇನ್ನು ಸ್ವಲ್ಪ ಸಮಯ ಕೊಡಿ. ಇದು ಈ ಸಮಯದಲ್ಲಿ ಆಗಬಾರದಿತ್ತು. ಆದರೆ ಯಾವುದೂ ನಮ್ಮ ಕೈಯಲ್ಲಿ ಇಲ್ಲ ಎಂದಿದ್ದಾರೆ.
ವರದಿಗಳ ಪ್ರಕಾರ ಭವ್ಯಾ ಗೌಡ ಅವರ ಕಾರಣಕ್ಕೆ ಧಾರಾವಾಹಿಯ ಪ್ರಸಾರ ಮುಂದೂಡಿದೆ ಎಂದು ಹೇಳಲಾಗುತ್ತಿದೆ. ಈ ಧಾರಾವಾಹಿಯಲ್ಲಿ ನಾಯಕಿಯಾಗಿದ್ದ ಭವ್ಯಾ ಗೌಡ ಅವರ ಅಕೌಂಟ್‌ನಿಂದಲೂ ಧಾರಾವಾಹಿಗೆ ಸಂಬಂಧಿಸಿದ ಎಲ್ಲ ಪ್ರೋಮೋಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ಸ್ಟಾಗ್ರಾಮ್ ಸ್ಟೇಟಸ್ನಲ್ಲಿ ಅವರು Trust The Process ಎಂದು ಪೋಸ್ಟ್ ಹಾಕಿ ಅಚ್ಚರಿ ಮೂಡಿಸಿದ್ದಾರೆ. ಇದೇ ಕಾರಣಕ್ಕೆ ಧಾರಾವಾಹಿ ನಿಂತಿರುವುದಾಗಿ ಹೇಳಲಾಗುತ್ತಿದೆ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Mon,28 Jul 2025