FactCheck:ರಜತ್ ಮತ್ತೆ ಜೈಲಿಗೆ, ಅವನನ್ನು ಸರಿಯಾಗಿ ‌ರುಬ್ಬಿ ಹೊರಗಡೆ ಕಳುಹಿಸಿ; ವಿನಯ್ ಗೌಡ

 | 
Jjj
ಮಚ್ಚು ಹಿಡಿದು ರೀಲ್ಸ್‌ ಪ್ರಕರಣದಲ್ಲಿ ಬಿಗ್‌ಬಾಸ್‌ ಸ್ಪರ್ಧಿ ರಜತ್‌ ಕಿಶನ್‌ಗೆ ನೀಡಿದ್ದ ಷರತ್ತುಬದ್ಧ ಜಾಮೀನು ರದ್ದಾಗಿದೆ. ಅವರನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಇನ್ನೊಂದೆಡೆ ಬಿಗ್‌ಬಾಸ್‌ನ ಮತ್ತೊಬ್ಬ ಸ್ಪರ್ಧಿ ವಿನಯ್‌ ಬಂಧನದ ಭೀತಿಯಿಂದ ಜಸ್ಟ್‌ ಮಿಸ್‌ ಆಗಿದ್ದಾರೆ.
ಜಾಮೀನು ಷರತ್ತು ಉಲ್ಲಂಘಿಸಿದ ಆರಂಭದ ಮೇಲೆ 24ನೇ ಎಸಿಜೆಎಂ ಕೋರ್ಟ್‌ ಈ ಆದೇಶ ನೀಡಿದೆ. ರಜತ್‌ ಕಿಶನ್‌ರನ್ನು ಏಪ್ರಿಲ್‌ 29ರವರೆಗೂ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದ್ದು, ನಾಳೆ ರಜತ್‌ ಅವರ ಜಾಮೀನು ಅರ್ಜಿ ವಿಚಾರಣೆಗೆ ಬರಲಿದೆ. ಇನ್ನೊಂದೆಡೆ ವಿನಯ್‌ಗೆ 500 ರೂಪಾಯಿ ದಂಡ ವಿಧಿಸಿ ವಾರಂಟ್‌ ರಿಕಾಲ್‌ ಆದೇಶ ನೀಡಲಾಗಿದೆ.
ಅಷ್ಟಕ್ಕೂ ಹಠಾತ್‌ ಬಂಧಿಸಲಾಗಿತ್ತು. ಅದಕ್ಕೆ ಕಾರಣ ಅವರ ವಿರುದ್ಧ ಜಾಮೀನು ರಹಿತ ವಾರಂಟ್‌ ಜಾರಿಯಾಗಿತ್ತು. ಇಂದು ವಿಚಾರಣೆಗೆ ಹಾಜಾರಗಿದ್ದ ವೇಳೆ ರಜತ್‌ನನ್ನು ಬಂಧಿಸಲಾಗಿತ್ತು. ಕೇಸ್ ನಲ್ಲಿ ಈಗಾಗಲೇ  ಒಮ್ಮೆ ಅರೆಸ್ಟ್  ಆಗಿ ಬೇಲ್‌ ಪಡೆದಿದ್ದರು. ಈ ವೇಳೇ ಕೋರ್ಟ್‌ ಷರತ್ತುಬದ್ಧ ಜಾಮೀನು ನೀಡಿತ್ತು. ಷರತ್ತಿನ ಅನ್ವಯ ಪ್ರತಿ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು.
ಆದರೆ, ನ್ಯಾಯಾಲಯಕ್ಕೆ ರಜತ್‌ ಹಾಜರಾಗಿರಲಿಲ್ಲ. ನ್ಯಾಯಾಲಯ ಆರೋಪಿ ರಜತ್ ವಿರುದ್ದ ನಾನ್ ಬೇಲೆಬಲ್ ವಾರಂಟ್ ಹೊರಡಿಸಿತ್ತು. ಈ ಹಿನ್ನೆಲೆ ರಜತ್ ಬಂಧನ ಮಾಡಲಾಗಿದ್ದು, ಬಳಿಕ ಕೋರ್ಟ್‌ಗೆ ಹಾಜರು ಪಡಿಸಲಾಗಿತ್ತು.ರಜತ್‌ ಬಳಿಕ ವಿನಯ್‌ ನಿವಾಸಕ್ಕೂ ತೆರಳಿದ್ದರು. ಇಬ್ಬರ ವಿರುದ್ದವೂ  ನಾನ್ ಬೇಲೆಬಲ್ ವಾರಂಟ್ ಜಾರಿಯಾಗಿತ್ತು. ಕೋರ್ಟ್ ಇಂದ NBW ಜಾರಿ ಮಾಡಲಾಗಿತ್ತು . ಕೋರ್ಟ್ ವಿಚಾರಣೆಗೆ ಹಾಜರಾಗಲು ದಿನಾಂಕ ನಿಗದಿ ಮಾಡಿತ್ತು. ಆದರೆ ಆ ದಿನಾಂಕದೊಂದು ಇಬ್ಬರೂ ಕೂಡ ವಿಚಾರಣೆಗೆ ಹಾಜರಾಗಿರಲಿಲ್ಲ. ಕೋರ್ಟ್ ಗೆ ಹಾಜರಾಗದ ಹಿನ್ನೆಲೆಯಲ್ಲಿ ಕೋರ್ಟ್ ಇಂದ NBW ಜಾರಿಯಾಗಿತ್ತು ಬಳಿಕ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು.
ರಜತ್ ಬಂಧನ ಬಳಿಕ ಎಚ್ಚೆತ್ತ ವಿನಯ್ ಗೌಡ: ರಜತ್‌ ಬಂಧನದ ಸುದ್ದಿ ಗೊತ್ತಾಗುತ್ತಿದ್ದಂತೆ, ವಿನಯ್‌ ಕೋರ್ಟ್‌ನತ್ತ ಮುಖ ಮಾಡಿದ್ದರು. ನಾನ್‌ ಬೇಲೆಬಲ್ ವಾರಂಟ್ ಮಾಹಿತಿ ಇಲ್ಲ ಎಂದು ವಿನಯ್‌ ತಿಳಿಸಿದ್ದರು. ರಜತ್ ಬಂಧನ ಬಳಿಕ NBW ಬಗ್ಗೆ ಮಾಹಿತಿ ಸಿಕ್ಕಿದೆ ಎಂದಿದ್ದಾರೆ. ಪೊಲೀಸರು ವಶಕ್ಕೆ ಪಡೆಯುವ ಮುನ್ನವೇ ಕೋರ್ಟ್ ಗೆ ವಿನಯ್‌ ಹಾಜರಾಗಿದ್ದಾರೆ. ಕೋರ್ಟ್ ಗೆ ಹಾಜರಾಗಿ ವಾರಂಟ್ ರೀಕಾಲ್ ಪ್ರಯತ್ನ ಮಾಡಿದ್ದರು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub