FactCheck:ಸಲ್ಮಾನ್ ಖಾನ್ ಎಂದಿಗೂ ಮರೆಯದಂತಹ ಮುತ್ತು ಕೊಟ್ಟ ರಶ್ಮಿಕಾ ಮಂದಣ್ಣ
Mar 29, 2025, 13:23 IST
|

ಅಷ್ಟಕ್ಕೂ ಕೆಲ ಯೂಟ್ಯೂಬ್ ಚಾನಲ್‌ನಲ್ಲಿ ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ರಶ್ಮಿಕಾ ಮಂದಣ್ಣಗೆ ಸಲ್ಮಾನ್ ಖಾನ್ ಕಿಸ್ ಮಾಡಿದರು ಎಂದು ಇದರಲ್ಲಿ ಬರೆಯಲಾಗಿದೆ. ಮತ್ತೆ ಅಲ್ಸುಕ್ ಹೆಸರಿನ ಇನ್ನೊಂದು ಯೂಟ್ಯೂಬ್ ಚಾನಲ್‌ನಲ್ಲಿ ಕೂಡ ಇದೇ ರೀತಿಯ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ರಶ್ಮಿಕಾ ಮಂದಣ್ಣಗೆ ಸಲ್ಮಾನ್ ಖಾನ್ ಕಿಸ್ ಮಾಡಿದರು ಎಂದು ಬರೆದುಕೊಳ್ಳಲಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಈ ವಿರಡಿಯೋ ಸಖತ್ ವೈರಲ್ ಆಗುತ್ತಿದೆ.
https://www.facebook.com/share/1EV9gjZyBt/
ಇನ್ನು ಈ ವಿಡಿಯೋವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆರಂಭದಲ್ಲಿ ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಸಹಜವಾಗಿ ಕಾಣುತ್ತಾರೆ. ಆದರೆ, ಅವರು ಚುಂಬಿಸಲು ಹೋದಾಗ ಅವರ ಮುಖಗಳು ಬದಲಾಗುತ್ತವೆ. ಹೀಗಾಗಿ ಇದು ನಕಲಿ ಎಂಬ ಅನುಮಾನ ಮೂಡಿತು. ಹೀಗಾಗಿ ಇದರ ಸತ್ಯಾಸತ್ಯತೆ ತಿಳಿಯಲು ಇದರ ಮೂಲ ವಿಡಿಯೋಗಾಗಿ ಹುಡುಕಾಟ ನಡೆಸಿದೆವು. ಡೆಕ್ಕನ್ ಕ್ರಾನಿಕಲ್‌ನಲ್ಲಿ ಇದರ ಮೂಲ ವಿಡಿಯೋ ಸಿಕ್ಕಿತು. ಪತ್ರಿಕೆಯು ಈ ವಿಡಿಯೋವನ್ನು ಟ್ವೀಟ್ ಮಾಡಿತ್ತು.
ಸಲ್ಮಾನ್ ಖಾನ್ ಮತ್ತು ರಶ್ಮಿಕಾ ಮಂದಣ್ಣ ಅವರ ಸಿಕಂದರ್' ಸಿನಿಮಾದ ಪ್ರಚಾರದ ಸಂದರ್ಭದ ವಿಡಿಯೋ ಇದಾಗಿದೆ. ಇದರಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಇಬ್ಬರೂ ಉತ್ತರಿಸುತ್ತಿರುವುದನ್ನು ಕಾಣಬಹುದು. ಆದರೆ ಇದರಲ್ಲಿ ಕಿಸ್ ಮಾಡುವ ದೃಶ್ಯ ಇಲ್ಲ. ಇದಲ್ಲದೆ ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾಗಳಲ್ಲಿ ಕಿಸ್ಸಿಂಗ್ ಸೀನ್ ಮಾಡುವುದಿಲ್ಲ. ಅವರು ಈ ಬಗ್ಗೆ ಬಹಿರಂಗವಾಗಿ ಈ ಹಿಂದೆಯೇ ಹೇಳಿದ್ದರು. ಕುಟುಂಬದೊಂದಿಗೆ ಕುಳಿತು ನೋಡಲು ಮುಜುಗರವಾಗುವಂತಹ ಯಾವುದೇ ಸಿನಿಮಾ ಅಥವಾ ಸೀನ್ ನಾನು ಮಾಡುವುದಿಲ್ಲ ಎಂದು ಸಲ್ಮಾನ್ ಖಾನ್ ಹೇಳಿದ್ದರು.
ಹೀಗಾಗಿ ಇದು ಕೃತಕ ಬುದ್ಧಿಮತ್ತೆ ಅಂದ್ರೆ ಎಐ ಬಳಸಿ ತಯಾರಿಸಿದ ವಿಡಿಯೋ ಆಗಿರಬಹುದು ಎಂಬ ಅನುಮಾನದ ಮೇಲೆ ಎಐ ಕಂಟೆಂಟ್‌ಗಳನ್ನು ಪತ್ತೆ ಹಚ್ಚುವ ಟೂಲ್‌ಗಳ ಮೊರೆ ಹೋದೆವು. ಇದಕ್ಕಾಗಿ ಡಿಕಾಪಿ ಎಐ ಎಂಬ ಎಐ ತಂತ್ರಗಳನ್ನು ಪತ್ತೆಹಚ್ಚುವ ಟೂಲ್‌ನಲ್ಲಿ ಪರಿಶೀಲನೆ ನಡೆಸಿದಾಗ ಈ ವಿಡಿಯೋ ಶೇ. 92.49ರಷ್ಟು ನಕಲಿ ಎಂಬ ಫಲಿತಾಂಶವನ್ನು ನೀಡಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023