FactCheck:ಇರಾನ್ ದೇಶದ ನಿಜವಾದ ಪರಿಸ್ಥಿತಿ ಹೀಗಿದೆ, ಇದನ್ನು ಭೂಲೋಕದ ಸ್ವರ್ಗ ಎಂದು ಕರೆಯುತ್ತಾರೆ

 | 
Nn
ಇಸ್ರೇಲ್ - ಇರಾನ್ ಸಂಘರ್ಷ ತೀವ್ರಗೊಂಡಿದ್ದು, ಉಭಯ ರಾಷ್ಟ್ರಗಳು ಆಸ್ಪತ್ರೆಗಳು ಮತ್ತು ಪರಮಾಣು ತಾಣಗಳನ್ನು ಗುರಿಯಾಗಿಸಿಕೊಂಡಿದೆ. ಸತತ 7 ನೇ ದಿನವಾದ ಗುರುವಾರ ದಾಳಿಗಳು ಮುಂದುವರೆದಿದೆ. ಇಸ್ರೇಲ್ ಇರಾನ್‌ನ ಪರಮಾಣು ತಾಣಗಳ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಗುರುವಾರ ಬೆಳಿಗ್ಗೆ ಇರಾನ್‌ ಇಸ್ರೇಲ್‌ನ ದಕ್ಷಿಣ ನಗರವಾದ ಬೀರ್‌ಶೆಬಾದಲ್ಲಿರುವ ಸೊರೊಕಾ ಆಸ್ಪತ್ರೆಯ ಮೇಲೆ ದಾಳಿ ಮಾಡಿದೆ. ನಗರದ ಅತಿ ದೊಡ್ಡ ಆಸ್ಪತ್ರೆ ಇದಾಗಿದ್ದು, ಸಾಲು ಸಾಲು ಕ್ಷಿಪಣಿಗಳನ್ನು ಉಡಾಯಿಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.
ಆಸ್ಪತ್ರೆಯ ಕೇಂದ್ರದ ಕಟ್ಟಡಕ್ಕೆ ಹಾನಿಯಾಗಿದೆ. ಹಲವರು ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಕನಿಷ್ಠ 47 ಜನರು ಗಾಯಗೊಂಡಿದ್ದಾರೆ. ಇದು ಇಸ್ರೇಲ್‌ನ ಅತಿದೊಡ್ಡ ಆಸ್ಪತ್ರೆಯಾಗಿದೆ. ದಾಳಿಯಾದಾಗ ಆಸ್ಪತ್ರೆಯಲ್ಲಿದ್ದ ರೋಗಿಗಳು ಭಯಭೀತರಾಗಿದ್ದರು. ಕಿಟಕಿಗಳು ಪುಡಿಯಾಗಿ ಹಾರಿಹೋಗಿವೆ. ಕಟ್ಟಡದ ಒಳಗೆ ದಟ್ಟವಾದ ಕಪ್ಪು ಹೊಗೆ ಆವರಿಸಿದೆ. ಜನರು ಮತ್ತು ವೈದ್ಯರು ಭಯದಿಂದ ಓಡಾಡುತ್ತಿದ್ದರು. ಈ ದೃಶ್ಯಗಳು ಇಸ್ರೇಲಿ ಮಾಧ್ಯಮಗಳಲ್ಲಿ ಪ್ರಸಾರವಾಗಿವೆ.
ಆಸ್ಪತ್ರೆ ಮೇಲೆ ಇರಾನ್‌ ದಾಳಿ ಮಾಡಿದ್ದು, ಅಂತಾರಾಷ್ಟ್ರೀಯ ಯುದ್ಧ ಕಾನೂನು ಉಲ್ಲಂಘನೆಗಳ ಕುರಿತು ಚರ್ಚೆಗಳಿಗೆ ಕಾರಣವಾಗಿದೆ. ಎರಡೂ ರಾಷ್ಟ್ರಗಳ ಜನರು ಯುದ್ಧ ಅಪರಾಧಗಳ ಆರೋಪ ಹೊರಿಸಿದ್ದಾರೆ. ಆಸ್ಪತ್ರೆ ಮೇಲಿನ ದಾಳಿಯ ಬಗ್ಗೆ ಪ್ರತಿಕ್ರಿಯೆ ನೀಡಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಇರಾನ್‌ನ ಭಯೋತ್ಪಾದಕರು ಸೊರೊಕಾ ಆಸ್ಪತ್ರೆ ಮೇಲೆ ಕ್ಷಿಪಣಿ ದಾಳಿ ಮಾಡಿದ್ದಾರೆ. 
ದೇಶದ ಮಧ್ಯ ಭಾಗದಲ್ಲಿ ನಾಗರಿಕರ ಮೇಲೂ ದಾಳಿ ನಡೆದಿದೆ. ಇದಕ್ಕೆ ಟೆಹರಾನ್‌ನಲ್ಲಿರುವ ದಾಳಿಕೋರರು ಭಾರಿ ಬೆಲೆ ತೆರಬೇಕಾಗುತ್ತದೆ ಎಂದು ಹೇಳಿದ್ದಾರೆ. ಇನ್ನು ಇಸ್ರೇಲ್‌ನ ಅತಿ ದೊಡ್ಡ ಆಸ್ಪತ್ರೆ ಮೇಲೆ ದಾಳಿ ಮಾಡಿದ್ದಕ್ಕೆ ಇರಾನ್‌ನ ನಾಯಕನನ್ನು ಹೊಣೆಗಾರನನ್ನಾಗಿ ಮಾಡಲಾಗುವುದು ಎಂದು ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದಾರೆ.
ಖಮೇನಿ ಶರಣಾಗತಿಗೆ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೂಚನೆ ಮತ್ತು ಇದಕ್ಕೆ ಖಮೇನಿ ಸಡ್ಡು ಹೊಡೆದ ಬೆನ್ನಲ್ಲೇ, ಅಮೆರಿಕದ ಅಣ್ವಸ್ತ್ರದಾಳಿ ಪ್ರತಿರೋಧಕ ವಿಮಾನ ಹಾರಾಟ ಕುತೂಹಲ ಮೂಡಿಸಿದೆ. ಡೂಮ್ಸ್‌ಡೇ ವಿಮಾನ ಎಂದೇ ಹೆಸರಾದ, ಇ - 4ಬಿ ವಿಮಾನವು ಲೊಯಿಸಿಯಾನಾದ ಡೇಲ್‌ ವಾಯುನೆಲೆಯಿಂದ ಮೆರಿಲ್ಯಾಂಡ್‌ನ ಆಂಡ್ರೀವ್ಸ್‌ ವಾಯುನೆಲೆಗೆ ಬಂದು ತಲುಪಿದೆ.