FactCheck:RCB ವಿಜಯೋತ್ಸವದಲ್ಲಿ ಕಾಲ್ತುಳಿತ ಆಗಿದ್ದಕ್ಕೆ ವಿರಾಟ್ ಕೊಹ್ಲಿ ಕಾರಣ, ಗೌತಮ್ ಗಂಭೀರ್ ಹೇಳಿದ್ದೇ ನು
Jun 8, 2025, 17:44 IST
|

ಬೆಂಗಳೂರಿನಲ್ಲಿ ಆರ್‌ಸಿಬಿ ವಿಜಯೋತ್ಸವ ಮೆರವಣಿಗೆಯಲ್ಲಿ ಭೀಕರ ಕಾಲ್ತುಳಿತ ಸಂಭವಿಸಿ 11 ಜನರು ಮೃತಪಟ್ಟಿದ್ದಾರೆ. ಆರ್‌ಸಿಬಿ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಈ ಘಟನೆಯನ್ನು ಖಂಡಿಸಿರುವ ಟೀಮ್ ಇಂಡಿಯಾ ಕೋಚ್ ಗೌತಮ್ ಗಂಭೀರ್, ಗೆಲುವಿನ ನಂತರದ ರೋಡ್ ಶೋಗಳನ್ನು ವಿರೋಧಿಸಿದ್ದಾರೆ. ಜನರ ಜೀವಗಳೇ ಮುಖ್ಯ ಎಂದು ಅವರು ಹೇಳಿದ್ದಾರೆ. ಈ ಘಟನೆಯಿಂದಾಗಿ ಆರ್‌ಸಿಬಿ ವಿರುದ್ಧ ಪ್ರಕರಣ ದಾಖಲಾಗಿದೆ.
ಇದೀಗ ಟೀಂ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಈ ವಿಷಯದ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಪತ್ರಿಕಾಗೋಷ್ಠಿಯನ್ನುದ್ದೇಶಿ ಮಾತನಾಡಿದ ಗಂಭೀರ್, ಗೆಲುವಿನ ನಂತರ ಇಂತಹ ರೋಡ್ ಶೋಗಳು ನಡೆಯಬಾರದು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ. ಏಕೆಂದರೆ ಆಚರಣೆಗಳಿಗಿಂತ ಜೀವಗಳು ಮುಖ್ಯ. ನನಗೆ ರೋಡ್ ಶೋಗಳಲ್ಲಿ ನಂಬಿಕೆ ಇಲ್ಲ.
ನಾನು ಆಡುತ್ತಿದ್ದಾಗ ಮತ್ತು ನಾವು ಟಿ20 ವಿಶ್ವಕಪ್ ಗೆದ್ದಾಗಲೂ, ನಾನು ಈ ರೋಡ್ ಶೋಗೆ ಬೆಂಬಲ ನೀಡಿರಲಿಲ್ಲ. ಜನರ ಜೀವಗಳು ಹೆಚ್ಚು ಮುಖ್ಯ. ಬೆಂಗಳೂರಿನಲ್ಲಿ ನಡೆದದ್ದು ನೋವಿನ ಸಂಗತಿ ಎಂದರು.ಆರ್‌ಸಿಬಿ ಐಪಿಎಲ್ ಟ್ರೋಫಿ ಗೆದ್ದಾಗ, ಕೋಟ್ಯಾಂತರ ಅಭಿಮಾನಿಗಳು ತುಂಬಾ ಸಂತೋಷಪಟ್ಟರು. ಫೈನಲ್ ಪಂದ್ಯ ಮುಗಿದ ಮರು ದಿನ ವಿಜಯೋತ್ಸವ ಮೆರವಣಿಗೆಯನ್ನು ವಿಧಾನಸಸೌಧದಿಂದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದವರೆಗೆ ನಡೆಸಬೇಕಿತ್ತು.
ಆದರೆ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಕ್ರೀಡಾಂಗಣದ ಬಳಿ ಜಮಾಯಿಸಿದರು, ಅವರನ್ನು ನಿಭಾಯಿಸುವುದು ಪೊಲೀಸರಿಗೂ ಕಷ್ಟಕರವಾಯಿತು. ಆ ನಂತರ ಕಾಲ್ತುಳಿತ ಸಂಭವಿಸಿ 11 ಅಭಿಮಾನಿಗಳು ಕೂಡ ಸಾವನ್ನಪ್ಪಿದರು. ಈ ದುರಂತದ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದ್ದು, ಆರ್‌ಸಿಬಿ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.