FactCheck:ನಡು ಸಮುದ್ರದಲ್ಲಿ ದೋಣಿ‌‌ ಸಹಿತ ಯುವಕನನ್ನು ‌ನುಂ ಗಿದ ತಿಮಿಂಗಿಲ

 | 
Bs
ಜಗತ್ತಿನಲ್ಲಿ ಕೆಲವೊಮ್ಮೆ ನಂಬಲು ಅಸಾಧ್ಯ ಘಟನೆಗಳು ನಡೆಯುತ್ತವೆ.24 ವರ್ಷದ ಪುತ್ರ ಕಯಾಕಿಂಗ್ ಅನ್ನು ವಿಡಿಯೋ ಮಾಡುತ್ತಿದ್ದ ತಂದೆಗೆ ಆಘಾತ ನೀಡಿದ ಬೃಹತ್ ಹಂಪ್ ಬ್ಯಾಕ್ ತಿಮಿಂಗಿಲ ನೋಡ ನೋಡುತ್ತಲೇ ದೋಣಿ ಸಹಿತ ಪುತ್ರನನ್ನು ನುಂಗಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಹೌದು ಚಿಲಿ ದೇಶದ ಬಹಿಯಾ ಎಲ್ ಅಗುಯಿಲಾ ಎಂಬ ಪ್ರದೇಶದಲ್ಲಿ 24 ವರ್ಷದ ವ್ಯಕ್ತಿಯೊಬ್ಬ ತನ್ನ ತಂದೆಯೊಂದಿಗೆ ಕಯಾಕಿಂಗ್ ಮಾಡುತ್ತಿದ್ದಾಗ, ಬೃಹತ್ ಹಂಪ್‌ಬ್ಯಾಕ್ ತಿಮಿಂಗಿಲವೊಂದು ಅವನ ಹಳದಿ ಬಣ್ಣದ ದೋಣಿಯನ್ನು ನುಂಗಿದೆ. ಈ ದೃಶ್ಯವನ್ನು ಆ ವ್ಯಕ್ತಿಯ ತಂದೆಯೇ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದು ಈ ಕುರಿತ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ.
ಚಿಲಿಯ ದಕ್ಷಿಣದ ಪ್ಯಾಟಗೋನಿಯಾ ಪ್ರದೇಶದ ಮೆಗೆಲ್ಲನ್ ಜಲಸಂಧಿಯಲ್ಲಿರುವ ಸ್ಯಾನ್ ಇಸಿಡ್ರೊ ಲೈಟ್‌ಹೌಸ್ ಬಳಿ ಶನಿವಾರ ಈ ಘಟನೆ ನಡೆದಿದೆ. ತಂದೆ ಮತ್ತು ಪುತ್ರ ಇಬ್ಬರೂ ಪ್ರತ್ಯೇಕ ಕಯಾಕಿಂಗ್ ದೋಣಿಗಳ ಮೂಲಕ ಸಾಗುತ್ತಿದ್ದರು. ಈ ವೇಳೆ ತಂದೆ ಪುತ್ರನ ಕಯಾಕಿಂಗ್ ಅನ್ನು ಚಿತ್ರೀಕರಿಸುತ್ತಿದ್ದರು. ಇದೇ ಸಂದರ್ಭದಲ್ಲಿ ಬೃಹತ್ ತಿಮಿಂಗಲ ಬಾಯ್ತೆರೆದು 24 ವರ್ಷದ ಪುತ್ರನನ್ನು ನುಂಗಿದೆ.
ವೇಲ್ ಬಾಯಿತೆರೆಯುವ ವೇಳೆ ಭಾರಿ ಪ್ರಮಾಣದ ನೀರು ಮೇಲೆ ಬಂದಿತು. ಇದನ್ನು ತಂದೆ ಅಲೆಗಳಿರಬಹುದು ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಕ್ಷಣ ಮಾತ್ರದಲ್ಲೇ ವೇಲ್ ಪುತ್ರನನ್ನು ಕಯಾಕಿಂಗ್ ಬೋಟ್ ಸಹಿತ ನುಂಗಿದೆ. ಈ ವೇಳೆ ಗಾಬರಿಯಾದ ತಂದೆ ಕೂಗಿಕೊಂಡಿದ್ದು, ಪುತ್ರ ಸತ್ತೇ ಹೋದ ಎನ್ನುವಾಗಲೇ ವೇಲ್ ಆತನನ್ನು ಬೋಟ್ ಸಹಿತ ಉಗುಳಿದೆ. ಬೋಟ್ ಸಹಿತ ದೂರಕ್ಕೆ ಹಾರಿ ಬಿದ್ದ ಪುತ್ರನ ಕಂಡು ತಂದೆ ಕೂಡಲೇ ಆತನ ನೆರವಿಗೆ ಧಾವಿಸಿ ಆತನನ್ನು ರಕ್ಷಿಸಿದ್ದಾರೆ.
ಈ ವೇಳೆ ಗಾಬರಿಯಾಗಿದ್ದ ಮಗನನ್ನು ತಂದೆ ಶಾಂತವಾಗಿರು.. ಶಾಂತವಾಗಿರು.ನೀನು ಪಾರಾಗಿರುವೆ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.ಆತನನ್ನು ನುಂಗಿದ ವೇಲ್ ಕೆಲವೇ ಸೆಕೆಂಡ್ ಗಳಲ್ಲಿ ಆತನನ್ನು ಉಗಿಳಿದ್ದು, ಇದರಿಂದ ಆತ ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾನೆ. ಒಂದು ವೇಳೆ ವೇಲ್ ಕೆಲ ಸೆಕೆಂಡ್ ಗಳ ಆತನನ್ನು ತನ್ನ ಬಾಯಿಯಲ್ಲಿ ಉಳಿಸಿಕೊಂಡಿದ್ದರೂ ಆತ ಉಸಿರುಗಟ್ಟಿ ಸಾಯುತ್ತಿದ್ದ ಎನ್ನಲಾಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.