FactCheck:ಸೌಜನ್ಯ ‌ವಿಡಿಯೋ ಮಾಡಿದ ಯೂಟ್ಯೂಬರ್ ಅಂದರ್, ನಿಜವಾದ ಅರೋಪಿ ಸಿಕ್ಕಿಬಿದ್ದ

 | 
ರಹ
ಧರ್ಮಸ್ಥಳದಲ್ಲಿ ನಡೆದ ಸೌಜನ್ಯ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣ ಇಡೀ ದೇಶದಲ್ಲೇ ಸಂಚಲನವನ್ನು ಮೂಡಿಸಿತ್ತು. ಅದ್ರಲ್ಲೂ 11ವರ್ಷಗಳ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿ ಸಂತೋಷ್‌ ರಾವ್‌  ನಿರಪರಾಧಿ ಅಂತ ಸಿಬಿಐ  ನ್ಯಾಯಾಲಯ ಯಾವಾಗ ಆತನನ್ನು ಬಿಡುಗಡೆ ಮಾಡಿತೋ ಆಗ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಹೋರಾಟ ಇನ್ನಷ್ಟು ತೀವ್ರ ಸ್ವರೂಪ ಪಡೆಯಿತು.
 ಈಗ ಎಲ್ಲೆಲ್ಲಿಯೂ ಸೌಜನ್ಯಗಳಿಗೆ ನ್ಯಾಯ ಸಿಗಬೇಕು ಅನ್ನೋ ಸಮಾವೇಶಗಳು, ಪಾದಯಾತ್ರೆಗಳು,ರ್ಯಾಲಿಗಳು ನಡೀತಿವೆ. ಈ ಹೋರಾಟಗಳು ಹೊಸ ಹೊಸ ಆಯಾಮಗಳನ್ನು, ಹೊಸ ಹೊಸ ರೂಪಗಳನ್ನು ಪಡೆಯುತ್ತಿವೆ. ಅದರಲ್ಲೂ ಸೌಜನ್ಯಾ ಕೇಸ್ ಬಗ್ಗೆ ಸಮೀರ್ ಎನ್ನುವ ಯೂಟ್ಯೂಬ್ ರ್ ಒಬ್ಬ ಮಾತನಾಡಿದ್ದ ವೀಡಿಯೋ ಬಿಡುಗಡೆ ಆಗಿ 24 ಗಂಟೆಗಳ ಒಳಗಾಗಿ ಅವನ ಮೇಲೆ ಕೇಸ್ ಬಿದ್ದಿದೆ.
ಅವನಿಗೆ ಈ ವೀಡಿಯೋ ತೆಗೆಯುವಂತೆ ಮೇಲ್ ಬಂದಿದೆ. ಇದು ಕೇವಲ ಅವನೊಬ್ಬನ ಕಥೆ ಅಲ್ಲ. ಸೌಜನ್ಯಾ ಪ್ರಕರಣದ ವಿರುದ್ಧ ದನಿ ಎತ್ತಿದ ಪ್ರತಿಯೊಬ್ಬರ ಕಥೆ. ಹೌದು ಗಂಟಲು ಕಟ್ಟಿ ನಮ್ಮ ಮಾತನ್ನೇ ಉಡುಗಿಸಲು ಪ್ರಯತ್ನ ನಡೆಯುತ್ತಿದೆ. ದೊಡ್ಡವರೆಂದುಕೊಂಡ ಸಣ್ಣ ತನದ ಮನುಷ್ಯರು ಸೌಜನ್ಯಾ ಪರ ಮಾತನಾಡಿದ ವಿಡಿಯೋಗಳ ತೆಗೆಯುವಂತೆ ಮಾಡುತ್ತಿದ್ದಾರೆ. ಹಾಗಾಗಿ ಅದೆಷ್ಟೋ ವೆಬ್ಸೈಟ್, ಯೂಟ್ಯೂಬ್ ವಿಡಿಯೋಗಳು ಹೇಳ ಹೆಸರಿಲ್ಲದಂತೆ ಬಂದು ಹೋಗಿವೆ.
ಈ ಬಡ ಹೆಣ್ಣಿನ ಕುರಿತು ಮಾತಾಡಬಾರದು ಏಕೆ!ಹಾಗಾಗಿಯೇ ಈಗ ಸೌಜನ್ಯ ಪರ ಹೋರಾಟಗಳು ಜನರಲ್ಲಿ ನಾನಾ ಪ್ರಶ್ನೆಗಳನ್ನು ಮೂಡಿಸುತ್ತಿವೆ. ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣವುಸಮಾಧಿಯಾಯ್ತಾ? ಸೌಜನ್ಯ ಪ್ರಕರಣದ ಹೋರಾಟದ ದಾರಿ ತಪ್ಪಿಸಲಾಯಿತೇ? ಸೌಜನ್ಯ ಸಾವಿಗೆ ನ್ಯಾಯ ಸಿಗೋದು ಇನ್ನು ಮರೀಚಿಕೆಯಾ? ಪಟ್ಟಬದ್ಧ ಹಿತಾಸಕ್ತಿಗಳಿಂದ ಸೌಜನ್ಯ ಪ್ರಕರಣದಕಗ್ಗೊಲೆಯಾಯಿತಾ? ಅನ್ನೋ ಗಂಭೀರ ಪ್ರಶ್ನೆಗಳು ಕಾಡುತ್ತಿರೊದಂತೂ ಸತ್ಯ.