ಸುಂದರಿ ಕೈಹಿಡಿದ ಖ್ಯಾತ ನಟ, ಫಿದಾ ಆದ ಕನ್ನಡಿಗರು
Mar 15, 2025, 13:06 IST
|

ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಲಕ್ಷ್ಮೀ ಪಾತ್ರದ ಮೂಲಕ ಗಮನಸೆಳೆಯುತ್ತಿರುವ ನಟಿ ಭೂಮಿಕಾ ರಮೇಶ್ ಅವರೀಗ ತೆಲುಗಿನ ಮೇಘ ಸಂದೇಶಂ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್‌ನಲ್ಲಿ ನನ್ನರಸಿ ರಾಧೆ ಧಾರಾವಾಹಿ ನಟ ಕೂಡ ಅಭಿನಯಿಸುತ್ತಿದ್ದಾರೆ. ಈ ಜೋಡಿ ಜಸ್ಟ್ ಫ್ರೆಂಡ್ಸ್ ಆಗಿ ಉಳಿದುಕೊಂಡಿದ್ಯಾ? ಅಥವಾ ಪ್ರೇಮಿಗಳಾ ಎಂಬ ಪ್ರಶ್ನೆ ಎದ್ದಿದೆ. ಇದಕ್ಕೆ ರಿಯಾಲಿಟಿ ಶೋನಲ್ಲಿ ಇವರಿಬ್ಬರು ಉತ್ತರ ಕೊಟ್ಟಿದ್ದಾರೆ
ಮೇಘ ಸಂದೇಶಂ ಧಾರಾವಾಹಿಯಲ್ಲಿ ಭೂಮಿಕಾ ರಮೇಶ್ ಅವರು ಭೂಮಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಗಗನ್ ಪಾತ್ರದಲ್ಲಿ ಅಭಿನವ್ ವಿಶ್ವನಾಥನ್ ನಟಿಸುತ್ತಿದ್ದಾರೆ. ಈ ಸೀರಿಯಲ್‌ನ ಆಚೆ ಕೂಡ ಈ ಜೋಡಿ ಆತ್ಮೀಯತೆಯಿಂದ ಇದೆ. ಇದನ್ನು ನೋಡಿ ಕೆಲವರು ಇವರಿಬ್ಬರು ಪ್ರೀತಿ ಮಾಡ್ತಿರಬಹುದು ಎಂದು ಭಾವಿಸಿದ್ದರು.
ರವಿವಾರ ರಾತ್ರಿ 9 ಗಂಟೆಗೆ ಜೀ ತೆಲುಗು ವಾಹಿನಿಯಲ್ಲಿ ಸೂಪರ್ ಸೀರಿಯಲ್ ಚಾಫಿಯನ್‌ಶಿಪ್ ಶೋ ಪ್ರಸಾರ ಆಗುವುದು. ಅದರಲ್ಲಿ ಮೇಘ ಸಂದೇಶಂ ಜೊತೆಗೆ ಬೇರೆ ಧಾರಾವಾಹಿ ತಂಡ ಕೂಡ ಭಾಗವಹಿಸಿದೆ. ಆ ವೇಳೆ ಅಭಿನವ್ ಹಾಗೂ ಭೂಮಿಕಾಗೆ ನೀವು ಲವ್ವರ್ಸ್? ಅಥವಾ ಸ್ನೇಹಿತರಾ? ಸತ್ಯ ಹೇಳಿ ಎಂದು ಪ್ರಶ್ನೆ ಕೇಳಲಾಗಿತ್ತು. ಆಗ ಅಭಿನವ್ ಅವರು ಭೂಮಿಕಾ ನನಗೆ ಸ್ನೇಹಿತೆಗಿಂತೆ ಹೆಚ್ಚು ಎಂದು ಹೇಳಿದ್ದಾರೆ. ಆಗ ನಿರೂಪಕರು, ಈ ರೀತಿ ಸ್ನೇಹ ಇದ್ದವರನ್ನೇ ಪತ್ನಿಯಾಗಿ ಮಾಡಿಕೊಳ್ಳಬೇಕು ಎಂದು ಹೇಳಿದ್ದರು.
ಭೂಮಿಕಾ ರಮೇಶ್ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಒಂದು ಲಕ್ಷಕ್ಕೂ ಅಧಿಕ ಫಾಲೋವರ್ಸ್ ಇದ್ದಾರೆ. ಭೂಮಿಕಾ ಅವರು ಕೇವಲ ನಾಲ್ಕು ಜನರನ್ನು ಫಾಲೋ ಮಾಡುತ್ತಿದ್ದು, ಅವರಲ್ಲಿ ಮೂವರು ಕುಟುಂಬದ ಸದಸ್ಯರಾದರೆ, ಇನ್ನೋರ್ವರು ಅಭಿನವ್ ಎಂದು ಹೇಳಬಹುದು. ಲಕ್ಷ್ಮೀ ಬಾರಮ್ಮ ಧಾರಾವಾಹಿಯ ಯಾವ ಕಲಾವಿದರನ್ನು ಕೂಡ ಅವರು ಫಾಲೋ ಮಾಡ್ತಿಲ್ಲ. ಈ ನಡೆ ಸಾಕಷ್ಟು ಅನುಮಾನ ಸೃಷ್ಟಿಸಿದೆ.
(ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.