ಡ್ರೋನ್ ಪ್ರತಾಪ್ ಗೆ ಭಜ೯ರಿ ಗಿಫ್ಟ್ ಕೊಟ್ಟ ಅಭಿಮಾನಿ, ತಲೆಬಾಗಿ ಶರಣಾದ ಡ್ರೋನ್

 | 
Hhh

ಡ್ರೋನ್ ಪ್ರತಾಪ್ ಬಿಗ್ ಬಾಸ್‌ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಡುವುದಕ್ಕೂ ಮುನ್ನ ನಾನಾ ಕಾರಣಗಳಿಂದ ಸುದ್ದಿಯಾಗಿದ್ದರು. ಅಲ್ಲದೆ, ಕುಟುಂಬದಿಂದಲೂ ದೂರವಾಗಿದ್ದರು. ಹುಟ್ಟೂರಿನಲ್ಲಿ ಪೋಷಕರು ಹೊಸ ಮನೆ ಕಟ್ಟಿಸಿದರೂ, ಪ್ರತಾಪ್ ಹೋಗಿರಲಿಲ್ಲ. ಆದರೆ ಒಂದು 'ಬಿಗ್ ಬಾಸ್‌' ಶೋ ಪ್ರತಾಪ್ ಬದುಕನ್ನೇ ಬದಲಿಸಿದೆ. ಹಲವು ವರ್ಷಗಳಿಂದ ಹುಟ್ಟೂರಿಗೆ ಹೋಗಿರದ ಪ್ರತಾಪ್, ಈಗ ತಮ್ಮೂರಿಗೆ ಹೋಗಿ ಸಂತಸಪಟ್ಟಿದ್ದಾರೆ.

ಬಿಗ್ ಬಾಸ್' ಮುಗಿದ ಬಳಿಕ ಡ್ರೋನ್ ಪ್ರತಾಪ್ ಒಂದು ಪೋಸ್ಟ್ ಹಾಕಿದ್ದರು. ವೋಟ್ ಮಾಡಿದಂತಹ ಎಲ್ಲಾ ಕರ್ನಾಟಕದ ಪ್ರೀತಿಯ ಜನತೆಗೆ ಧನ್ಯವಾದಗಳು ಮತ್ತು ಇದೆ ಶುಕ್ರವಾರ ಹಾಗೂ ಶನಿವಾರ ನನ್ನ ಊರಾದಂತಹ ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು, ನೆಟ್ಕಲ್ ಗ್ರಾಮದಲ್ಲಿ 2 ದಿನಗಳ ಕಾಲ ಇರುತ್ತೇನೆ ಪ್ರೀತಿಯ ಅಭಿಮಾನಿಗಳು ಬಂದು‌ ಭೇಟಿಯಾಗಬಹುದು ಅಂತ ಬರೆದುಕೊಂಡಿದ್ದರು. ಇದೀಗ ಹೇಳಿದಂತೆ, ನೆಟ್ಕಲ್ ಗ್ರಾಮಕ್ಕೆ ಪ್ರತಾಪ್ ಆಗಮಿಸಿದ್ದಾರೆ.

ನೆಟ್ಕಲ್‌ ಗ್ರಾಮದಲ್ಲಿ ಡ್ರೋನ್ ಪ್ರತಾಪ್ ಅವರ ತಂದೆ-ತಾಯಿ ಹೊಸ ಮನೆ ಕಟ್ಟಿಸಿದ್ದಾರೆ. ಆದರೆ ಡ್ರೋನ್ ಪ್ರತಾಪ್ ಅದನ್ನು ಈವರೆಗೂ ನೋಡಿರಲಿಲ್ಲ. ಹಲವು ವರ್ಷಗಳಿಂದ ಅವರು ಹುಟ್ಟೂರಿಗೆ ಬಂದಿರಲಿಲ್ಲ. ಇದೀಗ ಮನೆಗೆ ಬಂದಿರುವ ಅವರನ್ನು ತಾಯಿ ಆರತಿ ಎತ್ತಿ ಸ್ವಾಗತಿಸಿದ್ದಾರೆ. ಮೊದಲ ಬಾರಿಗೆ ಅಪ್ಪ ಕಟ್ಟಿಸಿದ ಹೊಸ ಮನೆಯನ್ನು ಪ್ರತಾಪ್ ಖುಷಿಯಿಂದ ಕಣ್ತುಂಬಿಕೊಂಡಿದ್ದಾರೆ. ಅದರ ಜೊತೆಗೆ ಹಳೆ ಮನೆಯನ್ನು ನೋಡಿಕೊಂಡು ಬಂದಿದ್ದಾರೆ. ಊರಿನಲ್ಲಿರುವ ಸಂಬಂಧಿಕರನ್ನು ಮಾತಾನಾಡಿಸಿದ್ದಾರೆ.

ಪ್ರತಾಪ್ ಬರುತ್ತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆಯೇ, ಗ್ರಾಮದ ಮಕ್ಕಳು ಮನೆ ಬಳಿ ಬಂದಿದ್ದರು. ಅವರನ್ನೆಲ್ಲಾ ಮಾನತಾಡಿಸಿದ ಪ್ರತಾಪ್, ಜೊತೆಗೆ ಊರನ್ನೆಲ್ಲಾ ಸುತ್ತಾಡಿದ್ದಾರೆ. ಮನೆಗೆ ಬಂದ ಅಭಿಮಾನಿಳಿಗೆ ಅವರೇ ಊಟ ಮಾಡಿಸಿದ್ದಾರೆ. ಸೈಕಲ್ ತುಳಿದು ಎಂಜಾಯ್ ಮಾಡಿದ್ದಾರೆ. ಊರಿನ ಗ್ರಾಮಸ್ಥರು ಪ್ರತಾಪ್‌ಗೆ ಹಾರ ಹಾಕಿ ಸನ್ಮಾನಿಸಿದ್ದಾರೆ. ಇನ್ನು ಊರ ಬಡಜನರಿಗೆ ಒಂದಿಷ್ಟು ಹಣ ನೀಡಿ ಅವರಿಗೆ ಧನ ಸಹಾಯ ಮಾಡಿದ್ದಾರೆ.


( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.