ಗುಜಿರಿ ಹೆಕ್ಕಿ ಸ್ವಂತ ಮಗನಿಗೆ ಐಫೋನ್ ಗಿಫ್ಟ್ ಕೊಟ್ಟ ತಂದೆ, ಶ್ರೀಮಂತರ ಮಕ್ಕಳು ಶಾ ಕ್
ಮಕ್ಕಳ ಉತ್ತಮ ಭವಿಷ್ಯ ಕ್ಕಾಗಿ ಪಾಲಕರು ಏನು ಮಾಡಲೂ ಸಿದ್ಧವಿರ್ತಾರೆ. ಹಗಲು – ರಾತ್ರಿ ಎನ್ನದೆ ದುಡಿದು ಮಕ್ಕಳ ಶಿಕ್ಷಣ ಹಾಗೂ ಅವರ ಅಗತ್ಯಗಳನ್ನು ಪೂರೈಸಲು ಪಾಲಕರು ಮುಂದಾಗ್ತಾರೆ. ತಮ್ಮ ಇಷ್ಟಗಳನ್ನು ಬಚ್ಚಿಟ್ಟು, ಮಕ್ಕಳಿಗೆ ದುಬಾರಿ ವಸ್ತುಗಳನ್ನು ಕೊಡಿಸ್ತಾರೆ. ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ರೆ ಟ್ರಿಪ್, ಸೈಕಲ್, ವಾಚ್ ಹೀಗೆ ತಮ್ಮ ಆರ್ಥಿಕ ಸ್ಥಿತಿ ಮತ್ತು ಆಸಕ್ತಿಗೆ ತಕ್ಕಂತೆ ಮಕ್ಕಳಿಗೆ ಆಫರ್ ನೀಡುವ ಪಾಲಕರ ಸಂಖ್ಯೆ ಹೆಚ್ಚಿದೆ.
ಸೋಶಿಯಲ್ ಮೀಡಿಯಾ ದಲ್ಲಿ ಈಗ ಅಪ್ಪನ ವಿಡಿಯೋ ಒಂದು ವೈರಲ್ ಆಗಿದೆ. ಮಗನಿಗೆ ಐಫೋನ್ 16 ಕೊಡಿಸಿರುವ ಆತ ಐಟಿ ಕಂಪನಿಯಲ್ಲಿ ಕೆಲಸ ಮಾಡುವ ವ್ಯಕ್ತಿಯಲ್ಲ. ದೊಡ್ಡ ಬ್ಯುಸಿನೆಸ್ ಮಾಡ್ತಿಲ್ಲ. ಸ್ಕ್ರ್ಯಾಪ್ ಕೆಲಸ ಮಾಡ್ತಿರುವ ಈ ತಂದೆ, ಅಂದರೆ ಚಿಂದಿ ಆಯುವ ತಂದೆಯೊಬ್ಬ ತನ್ನ ಮಗನಿಗಾಗಿ ತನ್ನೆಲ್ಲ ದುಡಿಮೆ ಹಣವನ್ನು ಮೀಸಲಿಟ್ಟಂತಿದೆ.
Ghar Ke Kales ಹೆಸರಿನ ಎಕ್ಸ್ ಖಾತೆಯಲ್ಲಿ ಈ ತಂದೆಯ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅವರು ಏನ್ ಮಾತನಾಡ್ತಿದ್ದಾರೆ ಎಂಬುದು ಸ್ಪಷ್ಟವಾಗ್ತಿಲ್ಲವಾದ್ರೂ, ಮಗನ ಯಶಸ್ಸಿಗೆ ತಂದೆ ಮುಖದಲ್ಲಿ ನಗು ಮೂಡಿರೋದನ್ನು ನೀವು ಕಾಣ್ಬಹುದು. ಬೋರ್ಡ್ ಪರೀಕ್ಷೆಯಲ್ಲಿ ಮಗ ಉತ್ತಮ ಅಂಕಗಳಿಸಿದ್ದಾನೆ. ಇದ್ರಿಂದ ಖುಷಿಯಾಗಿರುವ ತಂದೆ, ಮಗನಿಗೆ ಐಫೋನ್ 16 ಕೊಡಿಸಿದ್ದಾರೆ. ಅದ್ರ ಬೆಲೆ 1.80 ಲಕ್ಷ ರೂಪಾಯಿ.
ಇನ್ನು ತಮಗಾಗಿ ಅವರು 85 ಸಾವಿರದ ಐಫೋನ್ ಖರೀದಿ ಮಾಡಿದ್ದಾರೆ. ವಿಡಿಯೋದಲ್ಲಿ ತಮ್ಮ ಕೈನಲ್ಲಿರುವ ಐಫೋನನ್ನು ಖುಷಿಯಿಂದ ತೋರಿಸ್ತಿರೋದನ್ನು ನೀವು ನೋಡ್ಬಹುದು. ತಂದೆಯ ಬೆಲೆಯಿಲ್ಲದ ಉಡುಗೊರೆ, ಸ್ಕ್ರ್ಯಾಪ್ ಡೀಲರ್, ಮಗನ ಬೋರ್ಡ್ ಫಲಿತಾಂಶದಿಂದ ಖುಷಿಯಾಗಿ 1.80 ಲಕ್ಷ ಮೌಲ್ಯದ ಐಫೋನ್ ಉಡುಗೊರೆಯಾಗಿ ನೀಡಿದ್ದಾರೆಂದು ವಿಡಿಯೋಕ್ಕೆ ಶೀರ್ಷಿಕೆ ಹಾಕಲಾಗಿದೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.