ದೊಡ್ಡಪ್ಪನ ಮಗಳನ್ನು ಪ್ರೀತಿಸಿದ್ದಕ್ಕೆ ನಡುರಸ್ತೆಯಲ್ಲೇ ಮುಗಿಸಿದ ತಂದೆ, ಪ್ರೇಯಸಿ ಕಣ್ಣೀರು

 | 
Jd

ಪ್ರೀತಿ ಮಾಯೆ ಹುಷಾರು ಎನ್ನೋದನ್ನ ಕೇಳಿರ್ತಿರಿ ಆದ್ರೆ ಇಲ್ಲೊಬ್ಬ ಪ್ರೇಮಿ ಪ್ರೀತಿಸಿದ ತಪ್ಪಿಗೆ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಹೌದು ಶಶಾಂಕ್‍ ಎನ್ನುವ ಯುವಕ, ಯುವತಿಯೋರ್ವಳನ್ನು ಪ್ರೀತಿಸುತ್ತಿದ್ದ ಕಾರಣಕ್ಕೆ ಆತನ ಸಂಬಂಧಿಕರೇ ಕಿಡ್ನಾಪ್ ಮಾಡಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಪ್ರಕರಣ ಬೆಳಕಿಗೆ ಬಂದಿದೆ. ಸದ್ಯ ಯುವಕ ಐಸಿಯು ವಾರ್ಡ್‍ನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾನೆ. 

ಸುಟ್ಟ ಗಾಯಗಳಿಂದ ನರಳುತ್ತಿರುವ ಶಶಾಂಕ್‍ ಪರಿಸ್ಥಿತಿ ಗಂಭೀರವಾಗಿದೆ. ಶಶಾಂಕ್‍, ತನ್ನ ಸಂಬಂಧಿಕರ ಮಗಳನ್ನು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ. ಆದರೆ ಈ ವಿಚಾರ ಯುವತಿಯ ಮನೆಯವರಿಗೆ ಇತ್ತೀಚೆಗಷ್ಟೇ ತಿಳಿದಿದ್ದು ವಿರೋಧ ವ್ಯಕ್ತವಾಗಿತ್ತು. ಯುವತಿ, 11ನೇ ತಾರೀಕಿನಂದು ಮೈಸೂರಿನಿಂದ ಬೆಂಗಳೂರಿಗೆ ಒಬ್ಬಳೇ ಬಂದಿದ್ದು ಶಶಾಂಕ್ ಮನೆಗೆ ತೆರಳಿದ್ದಳು. ಈ ವಿಚಾರ ಗೊತ್ತಾಗಿ ಶಶಾಂಕ್ ಯುವತಿಯ ಮನೆಯವರು ಮನೆಗೆ ಬಂದಿದ್ದರು ಎನ್ನಲಾಗಿದೆ.

ಇವರು ಮನೆಗೆ ಬಂದಿದ್ದ ಸಂದರ್ಭದಲ್ಲಿ ಶಶಾಂಕ್ ಮೇಲೆ ಹಲ್ಲೆ ಮಾಡಿ ಯುವತಿಯನ್ನು ಕರೆದೊಯ್ದಿದ್ದಾರೆ. ನಂತರ ನಿನ್ನೆ ಬೆಳಗ್ಗೆ ಬೆಂಗಳೂರಿಗೆ ಬಂದು ಇನೋವಾ ಕಾರಿನಲ್ಲಿ ಶಶಾಂಕನನ್ನು ಕಿಡ್ನಾಪ್ ಮಾಡಿ ಕರೆದೊಯ್ದಿದ್ದಾರೆ. ನಂತರ, ಈ ದುಷ್ಕರ್ಮಿಗಳು ಕುಂಬಳಗೋಡು ಕಡೆ ಕರೆದೊಯ್ದು ಪೆಟ್ರೋಲ್ ಹಾಕಿ ಯುವಕನನ್ನು ಸುಟ್ಟಿದ್ದಾರೆ ಎನ್ನಲಾಗ್ತಿದೆ. ಪೊಷಕರ ಬಳಿ ಪ್ರೀತಿ ವಿಚಾರವನ್ನ ಮುಚ್ಚಿಟ್ಟಿದ್ದ ಶಶಾಂಕ್, ಡಾಕ್ಟರ್‍ ಆಗುವ ಕನಸು ಕಂಡಿದ್ದು, ಮನೆಯಲ್ಲಿ ಇಂಜಿನಿಯರ್ ಆಗುವಂತೆ ಪೊಷಕರು ಹೇಳಿದ್ದರು. 

ದೊಡ್ಡಪ್ಪನ ಮಗಳು 11ನೇ ತಾರೀಖು ಮನೆ ಬಿಟ್ಟು ಓಡಿ ಕಾಲೇಜಿನ ಬಳಿ ಓಡಿ ಬಂದಿದ್ದಳು. ನಂತರ ಆಕೆಗೆ ಸಮಾಧಾನ ಮಾಡಿ ಮನೆಗೆ ಕರೆದೊಯ್ದಿದ್ದ. ಈ ವೇಳೆ ತಂದೆ ರಂಗನಾಥ್, ಬುದ್ದಿವಾದ ಹೇಳಿ ಕುಟುಂಬಸ್ತರಿಗೆ ಕರೆ ಮಾಡಿದ್ದರು ಎನ್ನಲಾಗಿದೆ. ಯುವತಿಯ ತಂದೆ ಜಗದೀಶ್ ಅಲಿಯಾಸ್ ಅಣ್ಣಿಕುಟ್ಟಿ ಶಶಾಂಕ್ ಗೆ ದೊಡ್ಡಪ್ಪನಾಗಬೇಕು. ಮಹೇಶ್ ಹಾಗೂ ಜಗದೀಶ್ ಇಬ್ಬರೂ ಅಣ್ಣಂದಿರಾಗಬೇಕು. ಅದೇ ದಿನ ಸಂಜೆಗೆ ಮನು ಹಾಗೂ ಕುಟುಂಬಸ್ತರು ಮೈಸೂರಿನಿಂದ ಬಂದಿದ್ದು ಈ ವೇಳೆ ಮನು ಶಶಾಂಕ್‍ನನ್ನ ಮನಸೋ ಇಚ್ಚೆ ಥಳಿಸಿದ್ದ. 

ತಪ್ಪು ಮಾಡಿರುವ ಹಿನ್ನೆಲೆ ಹಲ್ಲೆ ಮಾಡಿದ್ದಾರೆ ಎಂದು ಕುಟುಂಬ ಸುಮ್ಮನಾಗಿತ್ತು ಎನ್ನಲಾಗಿದೆ. ಈ ವೇಳೆ ಮಹೇಶ್ ಅಲಿಯಾಸ್ ಮನು ಹೀಗೆ ಮಾಡಿದ್ರೆ ನಿನ್ನನ್ನ ಪೆಟ್ರೋಲ್ ಹಾಕಿ ಸುಟ್ಟು ಹಾಕ್ತೀನಿ ಅಂತ ಹೇಳಿದ್ದಾನೆ. ಹುಡುಗಿಯ ಕುಟುಂಬದವರು ಕೋಪದಲ್ಲಿ ಹೇಳುತ್ತಾರೆ ಎಂದು ಸುಮ್ಮನಾಗಿದ್ದಾರೆ.. ಆದರೆ ನಿನ್ನೆ ಬೆಳಿಗ್ಗೆ 10:30ರ ಸುಮಾರಿಗೆ ಶಶಾಂಕ್‍ನನ್ನು ಕಣ್ಣಿಗೆ ಬಟ್ಟೆ ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಕಿಡ್ನಾಪ್ ಮಾಡಲಾಗಿದ್ದು ಆರೋಪಿಗಳು ಆತನನ್ನು ಕುಂಬಳಗೂಡು ಬಳಿ ಕರೆದೊಯ್ದಿದ್ದಾರೆ. ಅಲ್ಲಿ ದುಷ್ಕರ್ಮಿಗಳಾದ ಮನು ಅಂಡ್ ಟೀಂ ಶಶಾಂಕ್‍ ಮೇಲೆ ಪೆಟ್ರೊಲ್ ಹಾಕಿ ಸುಟ್ಟು ಎಸ್ಕೇಪ್ ಆಗಿದ್ದಾರೆ. ಒಟ್ಟಿನಲ್ಲಿ ಹೇಳುವುದಾದರೆ ಪ್ರೀತಿ ಮಾತ್ರ ದುರಂತ ಸಾವಿನಲ್ಲಿ ಅಂತ್ಯವಾಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.