10 ವರ್ಷ ನಮ್ಮ ನಡುವೆ ಪ್ರೀತಿ ಮಾತ್ರ ಇತ್ತು, 'ದರ್ಶನ್ ಜೊತೆ ಸಂಬಂಧ ಇರೋದು ನಿಜ' ಪವಿತ್ರ ಗೌಡ

 | 
Hd

ನಟ ದರ್ಶನ್ ಜೊತೆಗಿನ ಒಂದಿಷ್ಟು ಫೋಟೋಗಳನ್ನು ನಟಿ, ಮಾಡೆಲ್ ಆಗಿರುವ ಪವಿತ್ರಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಅಷ್ಟೇ ಅಲ್ಲದೆ ಇದು 10 ವರ್ಷದ ಸುಂದರ ಸಂಬಂಧ ಎಂದು ಕೂಡ ಹೇಳಿದ್ದರು. ಇದನ್ನು ದರ್ಶನ್ ಪತ್ನಿ ವಿಜಯಲಕ್ಷ್ಮೀ ಅವರು ವಿರೋಧಿಸಿ, ಪವಿತ್ರಾ ಅವರ ಪತಿಯ ಜೊತೆಗಿನ ಫೋಟೋಗಳನ್ನು ಹಂಚಿಕೊಂಡಿದ್ದರು. 

ಅಷ್ಟೇ ಅಲ್ಲದೆ ಪವಿತ್ರಾಗೆ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ಕೂಡ ಕೊಟ್ಟಿದ್ದರು. ಇದಕ್ಕೆ ಪವಿತ್ರಾ ಈಗ ತಿರುಗೇಟು ಕೊಟ್ಟಿದ್ದಾರೆ. ನಾನು ಪವಿತ್ರಾ ಗೌಡ, ನನ್ನ ಮಗಳು ಖುಷಿ ಗೌಡ. ನಾನು ಸಂಜಯ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದು ನಂತರ ಖುಷಿ ಗೌಡ ಹುಟ್ಟಿರುತ್ತಾಳೆ. ನಮ್ಮ ಜೀವನದಲ್ಲಿ ಉಂಟಾದ ಸಮಸ್ಯೆಗಳಿಂದ ನಾನು ಸಂಜಯ್ ಅವರಿಂದ ವಿಚ್ಛೇದನ ಪಡೆದಿದೇನೆ. ಇಲ್ಲಿಯವರೆಗೂ ಖುಷಿ ಗೌಡ ದರ್ಶನ್ ಶ್ರೀನಿವಾಸರವರ ಮಗಳೆಂದು ನಾನು ಎಲ್ಲೂ ಹೇಳಿಲ್ಲ!! ನಾನು ಹಾಗೂ ದರ್ಶನ್ ಶ್ರೀನಿವಾಸರವರು ಕಳೆದ 10 ವರ್ಷಗಳಿಂದ ಜೊತೆಯಲ್ಲಿ ಸಂತೋಷವಾಗಿದ್ದೀವಿ.

ನಾನು ನನ್ನ ಹಿತಾಸಕ್ತಿಗೋಸ್ಕರ ಈ ಥರ ಇಲ್ಲ, ಇದು ನಮ್ಮ ಪವಿತ್ರವಾದ ಪ್ರೀತಿ. ಕಳೆದ 10 ವರ್ಷದಿಂದ ಜೊತೆಗೆ ಇರೋದು ಸುಲಭವೂ ಅಲ್ಲ. ಈ ವಿಷಯ ವಿಜಯಲಕ್ಷ್ಮೀ ಅವರಿಗೂ ಮೊದಲೇ ತಿಳಿದಿರುತ್ತದೆ. ಈ ವಿಚಾರವಾಗಿ ವಿಜಯಲಕ್ಷ್ಮೀ ಅವರೇ ನನಗೆ ಹಲವಾರು ಬಾರಿ ಫೋನ್ ಮಾಡಿ ನನ್ನ ಬಳಿ ಮಾತನಾಡಿದ್ದು ವಿಜಯಲಕ್ಷ್ಮೀ ಅವರಿಗೆ ಯಾವುದೇ ರೀತಿಯ ತೊಂದರೆ ಇಲ್ಲವೆಂದು ತಿಳಿಸಿರುತ್ತಾರೆ. ಇದೀಗ ವಿಜಯಲಕ್ಕ್ಷ್ಮೀ ಅವರು ನನ್ನ ವಿರುದ್ಧವಾಗಿ ಪೋಸ್ಟ್‌ಗಳನ್ನು ಹಾಕುತ್ತಿರುವುದು ನನಗೆ ಬೇಸರ ಉಂಟು ಮಾಡಿದೆ. 

ನನ್ನ ಹಾಗೂ ನನ್ನ ವಯಸ್ಕ ಮಗಳಾದ ಖುಷಿ ಗೌಡಳ ಬಗ್ಗೆ ವಿಜಯಲಕ್ಷ್ಮೀ ದರ್ಶನ್ ಎಂಬ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಬಹಳಷ್ಟು ಜನ ಕೆಟ್ಟ ಭಾಷೆಯಿಂದ ನಿಂದಿಸುವುದು ನನಗೆ ಮಾನಸಿಕ ನೋವು ಉಂಟುಮಾಡಿದೆ. ನನ್ನ ಜೀವನದ ಹಳೆಯ ವಿಚಾರಗಳನ್ನು ಹಾಗೂ ನನ್ನ ವೈಯಕ್ತಿಕ ಫೋಟೋಗಳನ್ನು ಬಳಕೆ ಮಾಡುವ ಹಕ್ಕು ಯಾರಿಗೂ ಇರುವುದಿಲ್ಲ ಎಂದು ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.