ಮೊಟ್ಟಮೊದಲ ಬಾರಿಗೆ ಮೀಡಿಯಾ ಮುಂದೆ ರೊಚ್ಚಿಗೆದ್ದ ಪ್ರತಾಪ್, 'ನಾಯಿ ಬೊಗಳಿದ್ರೆ ನನಿಗೇನು ನಷ್ಟ ಇಲ್ಲ'

 | 
ರಂ

ಬಿಗ್ ಬಾಸ್ ಕನ್ನಡ ಸೀಸನ್ 10 ಶೋನಲ್ಲಿ ಆರಂಭದ ವಾರಗಳಲ್ಲಿ ಡ್ರೋನ್ ಪ್ರತಾಪ್ ಇದ್ದಿದ್ದಕ್ಕೂ, ಆ ನಂತರದ ವಾರಗಳಲ್ಲಿ ಅವರು ಕಾಣಿಸಿಕೊಂಡಿದ್ದಕ್ಕೂ ತುಂಬ ವ್ಯತ್ಯಾಸ ಇದೆ. ಈಗ ಅವರು 'ಗಿಚ್ಚಿ ಗಿಲಿಗಿಲಿ' ಎನ್ನುವ ಕಾಮಿಡಿ ಶೋನ ಮೂರನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿ ಸರ್ಪ್ರೈಸ್ ನೀಡಿದ್ದಾರೆ. ಹೌದು ಆಭಿಮಾನಿಗಳಿಗೆ ಧನ್ಯವಾದ ತಿಳಿಸಿ ತನ್ನ ಬಗ್ಗೆ ಹೇಳಿಕೆ ನೀಡುವ ಅವರಿಗೆ ವಾರ್ನ್ ಮಾಡ್ತಿದ್ದಾರೆ.

ಏನಾದರೂ ಟೀಕೆ ಟಿಪ್ಪಣಿ ಬಂದಾಗ ಉತ್ತರ ಕೊಡುತ್ತಿರಲಿಲ್ಲ. ನನ್ನ ಪಾಡಿಗೆ ನಾನು ಇರುತ್ತಿದ್ದೆ. ಬಿಗ್ ಬಾಸ್ ಶೋ ಗೆಲ್ಲೋಕಿಂತ ನನ್ನನ್ನು ನಾನು ಗೆಲ್ಲೋಕೆ ಹೋಗಿದ್ದೆ, ಅದಿಕ್ಕೆ ಖುಷಿಯಿದೆ. ಜನರು ಪ್ರೀತಿಯಿಂದ ಡ್ರೋನ್ ಅಂತಾರೆ, ಪ್ರಥು ಅಂತ ಹೇಳ್ತಾರೆ, ಫ್ಯಾನ್ಸ್ ಪೇಜ್ ನೋಡಿ ಖುಷಿ ಆಗ್ತಿದೆ. ನನಗೆ ಹೊಸ ಜೀವನ ಸಿಕ್ಕಿದೆ. ಇದರ ಬಗ್ಗೆ ಹೆಮ್ಮೆಯಿದೆ. ಕಲರ್ಸ್ ಕನ್ನಡ ವಾಹಿನಿ ನನಗೆ ಹೊಸ ಜೀವನ ಕೊಟ್ಟಿದೆ. 

ಜನರ ಮನಸ್ಸಿನಲ್ಲಿ ಪ್ರೀತಿ ಮೂಡಿದಿದ್ದ ಈ ವಾಹಿನಿಯಲ್ಲಿ ನನಗೆ ಯಾವುದೇ ಚಿಕ್ಕ ಪಾತ್ರ ಕೊಟ್ಟರೂ ನಾನು ಮಾಡುತ್ತೇನೆ. ಯಾರು ಹೇಗೆ ಮಾತನಾಡಿರಲಿ, ಹೊರಗಡೆ ಹೋಗಿ ಏನೇ ಮಾತನಾಡಿದ್ದರೂ ಕೂಡ ಕಿಚ್ಚ ಸುದೀಪ್ ಅವರು ಎಲ್ಲರಿಗೂ ಮರ್ಯಾದೆ ಕೊಟ್ಟಿ ಮಾತನಾಡಿಸಿದರು ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ.

ನಾನು ಬಿಗ್ ಬಾಸ್ ಮನೆಯಿಂದ ಹೊರಗಡೆ ಹೋದಮೇಲೆ ಇನ್‌ಸ್ಟಾಗ್ರಾಮ್‌ನಲ್ಲಿ ಕಿಚ್ಚ ಸುದೀಪ್ ಅವರನ್ನು ಫಾಲೋ ಮಾಡೋಕೆ ಆರಂಭಿಸಿದೆ. ನನ್ನ ತಂದೆ-ತಾಯಿ ಸ್ಥಾನ ನಂತರದ ಸ್ಥಾನವನ್ನು ಬಿಗ್ ಬಾಸ್‌ಗೆ ಕೊಡ್ತೀನಿ. ಆರಂಭದಲ್ಲಿ ನನಗೆ ಶೋ ಬಗ್ಗೆ ಬೇರೆ ಅಭಿಪ್ರಾಯ ಇತ್ತು. ಏನೇನೋ ತೋರಿಸ್ತಾರೆ ಅಂತ ಅಂದುಕೊಂಡಿದ್ದೆ. 

ನಾನು ನಾನಾಗಿ ಇರೋದನ್ನೆಲ್ಲ ತೋರಿಸಿದ್ರು, ಸುಮ್ಮನೆ ಮಾತಾಡಿದ್ದು ತೋರಿಸಿದ್ರು, ಸುಮ್ಮನೆ ಕೂತಿರೋದು ಕೂಡ ತೋರಿಸಿದ್ರು. ಬೇರೆಯವರು ನನ್ನ ಬಗ್ಗೆ ಮಾತನಾಡಿದ್ದು ಕೂಡ ತೋರಿಸಿದ್ರು ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.