ಇನ್ನೂ 18 ವರ್ಷ ತುಂಬದ ಮಗನಿಗೆ ಸ್ವಂತ ತಾಯಿ ಮಾಡಿದ ಕೆಲಸಕ್ಕೆ ವಿದೇಶಿಯರು ಬೆ ಚ್ಚಿಬಿದ್ದಿದ್ದಾರೆ
Feb 28, 2025, 13:13 IST
|

ಮಿಚಿಗನ್‌ನ ಕೇಟೀ ಲೀ ಎಂಬ 39 ವರ್ಷದ ಮಹಿಳೆ ತನ್ನ ಮಗನ 18 ನೇ ಹುಟ್ಟುಹಬ್ಬದ ಮುನ್ನಾ ದಿನದಂದು ಆತನನ್ನು ಕೊಲೆ ಮಾಡಿದ್ದಾಳೆ. ತನ್ನ ಜೀವನವನ್ನು ತಾನೇ ಕೊನೆಗೊಳಿಸಲು ಪುತ್ರ ಬಯಸಿದ್ದ ಎಂದು ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ. ಇನ್ನು ಕೊಲೆ ನಡೆದಿರುವ ವಿಚಾರ ತಿಳಿದು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ, ಆರೋಪಿ ಮಹಿಳೆ ಕೇಟೀ ಲೀ ಮನೆಯಲ್ಲಿ ತನ್ನ ಮಗನನ್ನು ಹತ್ಯೆ ಮಾಡಿ ಚಾಕು ಹಿಡಿದು ನಿಂತಿದ್ದಳು.
ಅಷ್ಟಕ್ಕು ಅಪಾರ್ಟ್‌ಮೆಂಟ್ ಒಳಗೆ ಪೊಲೀಸರಿಗೆ ಆರೋಪಿ ಲೀ ಅವರ ಮಗ 17 ವರ್ಷದ ಆಸ್ಟಿನ್ ಡೀನ್ ಪಿಕಾರ್ಟ್ ಶವ ಸಿಕ್ಕಿದೆ.ಸಾಯುವುದಕ್ಕಾಗಿ ನಾನು ಮತ್ತು ಮಗ ಇಬ್ಬರೂ ಅತಿಯಾಗಿ ಮಾತ್ರೆ ಸೇವಿಸಿದ್ದೆವು ಎಂದು ಮಹಿಳೆ ತಿಳಿಸಿದ್ದಾರೆ. ದೂರಿನ ಪ್ರಕಾರ, ಮಗ ಪ್ರಜ್ಞೆ ತಪ್ಪಿದ್ದಾಗ ಚಾಕುವಿನಿಂದ ಆತನ ಗಂಟಲು ಮತ್ತು ತೋಳಿನ ಭಾಗವನ್ನು ಚಾಕುವಿನಿಂದ ಆಕೆ ಕೊಯ್ದಿದ್ದಳು ಎಂದು ವರದಿಯಾಗಿದೆ.
ಇವೆಲ್ಲವುಗಳ ಹೊರತಾಗಿ ನಾನು ನನ್ನ ಮಗನ ಜೊತೆ ಇರಬೇಕು. ನನ್ನನ್ನೂ ಕೊಂದುಬಿಡಿ ಎಂದು ಆರೋಪಿ ಮಹಿಳೆ ಪೊಲೀಸರ ಮುಂದೆ ದುಃಖಿಸಿರುವ ಪ್ರಸಂಗವೂ ನಡೆದಿದೆ. ಒಟ್ಟಿನಲ್ಲಿ ಹೇಳುವುದಾದರೆ ಜನ ಮರುಳೋ ಜಾತ್ರೆ ಮರುಳೋ ಅರ್ಥವಾಗದಂತಾಗಿದೆ. ಈ ಪ್ರಕರಣದ ತನಿಖೆಯನ್ನು ಪೋಲಿಸರು ಮುಂದುವರೆಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkarunadu.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕರುನಾಡು ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಏಕಾಏಕಿ ಲೈವ್ ಬಂದ್ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ಸಿಂಗರ್ ಅರ್ಚನ ಉಡುಪ
Sat,17 May 2025