ದರ್ಶನ್ ಮನೆಗೆ ನುಗ್ಗಿದ ಅರಣ್ಯ ಅಧಿಕಾರಿಗಳು, ಸದ್ಯಕ್ಕೆ ದಾಸನ ಪರಿಸ್ಥಿತಿ ಹೇಗಿದೆ ಗೊ.ತ್ತಾ

ಸ್ಯಾಂಡಲ್‌ವುಡ್‌ಗೆ ಹುಲಿ ಉಗುರಿನ ಸಂಕಷ್ಟ ಎದುರಾಗಿದೆ. ಹುಲಿ ಉಗುರು ಹಾಕಿಕೊಂಡು ಪೋಸ್ ಕೊಟ್ಟವರೆಲ್ಲಾ ಇದೀಗ ಶಾಕ್ ಆಗಿದ್ದಾರೆ. ಹುಲಿ ಉಗುರಿನ ಲಾಕೆಟ್ ಹಾಕಿಕೊಂಡಿದ್ದ ಬಿಗ್ ಸ್ಫರ್ಧಿ ವರ್ತೂರ್ ಸಂತೋಷ್ ಬಂಧನದ ಬಳಿಕ ಹುಲಿ ಉಗುರು ಇದ್ದವರ ಎದೆಯಲ್ಲಿ ಢವಢವ ಶುರುವಾಗಿದೆ.
ನಟ ಜಗ್ಗೇಶ್ , ನಟ ದರ್ಶನ್ , ನಿಖಿಲ್ ಕುಮಾರಸ್ವಾಮಿ ಹಾಗೂ ರಾಕ್‌ಲೈನ್‌ಗೆ ಸಂಕಷ್ಟ ಎದುರಾಗಿದೆ. ಸರ್ವ ಸಂಘಟನೆಗಳ ಒಕ್ಕೂಟ ನಟ ಜಗ್ಗೇಶ್, ನಟ ದರ್ಶನ್, ನಿಖಿಲ್ ಕುಮಾರಸ್ವಾಮಿ ವಿರುದ್ಧ ದೂರು ನೀಡಿದ್ದು, ದೂರಿನ ಹಿನ್ನೆಲೆ ಅರಣ್ಯಾಧಿಕಾರಿಗಳು ದರ್ಶನ್ ಮನೆಗೆ ಭೇಟಿ ನೀಡಿದ್ದಾರೆ. ಬೆಂಗಳೂರು ನಗರ ಆರ್ ಎಫ್ ಸೇರಿದಂತೆ ಇಬ್ಬರು ಅಧಿಕಾರಿಗಳು ಆಗಮಿಸಿದ್ದಾರೆ.
ದರ್ಶನ್ ಕೊರಳಲ್ಲಿ ಹುಲಿ ಉಗುರಿನ ಪೆಂಡೆಂಟ್ ಇರೋ ಬಗ್ಗೆ ದೂರು ಬಂದ ಹಿನ್ನೆಲೆ ವಿಚಾರಣೆ ನಡೆಸುತ್ತಿದ್ದಾರೆ. ಅರಣ್ಯಾಧಿಕಾರಿಗಳಿ ಬಂದ ಹಿನ್ನೆಲೆ ಸ್ಥಳೀಯ ಪೊಲೀಸರು ಕೂಡ ದರ್ಶನ್ ಮನೆಗೆ ಆಗಮಿಸಿದ್ದಾರೆ.
ವನ್ಯಜೀವಿ ಸಂರಕ್ಷಣಾ ಕಾಯ್ದೆ ಪ್ರಕಾರ ಹುಲಿ ಉಗುರು ಬಳಸೋದು ಅಪರಾಧವಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಬಂಧಿಸಲಾಗಿದೆ.
ದರ್ಶನ್ ಬಳಿಯೂ ಹುಲಿ ಉಗುರು ಇದೆ ಎನ್ನುವ ಆರೋಪ ಕೇಳಿ ಬಂದಿದ್ದು, ಸಾಬೀತಾದ್ರೆ ದರ್ಶನ್ ಬಂಧನ ಕೂಡ ಗ್ಯಾರಂಟಿ ಎನ್ನುವ ಮಾತು ಕೇಳಿ ಬಂದಿದೆ. ಇನ್ನು ಈ ಕುರಿತು ಮಾತನಾಡಿರುವ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ದರ್ಶನ್ ಪ್ರಾಣಿಗಳನ್ನು ಪ್ರೀತಿಸುತ್ತಾರೆ ಹೊರತು ಅವರೆಂದು ಕೂಡಾ ಹಿಂಸೆ ನೀಡಿಲ್ಲ. ಅಲ್ಲದೆ ಅವರ ಕುತ್ತಿಗೆಯಲ್ಲಿ ಇರುವುದು ಕೂಡ ನೈಜವಾದ ಹುಲಿಯ ಉಗುರಾಗಿರಲು ಸಾಧ್ಯವಿಲ್ಲ ಎಂದು ಪತಿಗೆ ಬೆಂಬಲ ಸೂಚಿಸಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.