ಬ್ರೇಕಪ್ ಬಗ್ಗೆ ಸ್ಪಷ್ಟತೆ ಕೊಟ್ಟ ಗಗನ್, ವೈಷ್ಣವಿ‌ ಗೌಡ ಜೊತೆ ಕೂಡ ಲವ್ವಿಡವ್ವಿ ಇತ್ತು ಎಂದ ನಟ

 | 
Nkk
ಸೀತಾರಾಮ ಧಾರಾವಾಹಿಯಲ್ಲಿ ನಾಯಕನ ಪಾತ್ರದಲ್ಲಿ ನಟ ಗಗನ್ ಚಿನ್ನಪ್ಪ ಅವರು ಹಿರಿಯರಷ್ಟೇ ಅಲ್ಲದೇ, ಪುಟಾಣಿಗಳ ಮನಸನ್ನೂ ಗೆದ್ದಿದ್ದಾರೆ. ಸೀತಾರಾಮದಲ್ಲಿ ರಾಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಗಗನ್ ಅವರ ಪಾತ್ರವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಸಿಹಿ ಜೊತೆಗೆ ರಾಮ ನಡೆದುಕೊಳ್ಳುವ ರೀತಿಯೂ ಬಹಳ ಮುದ್ದಾಗಿದೆ. ರಾಮ ಹಾಗೂ ಸಿಹಿ ಕಾಂಬಿನೇಷನ್ ನ ಸೀನ್ಸ್ ಗಳನ್ನು ನೋಡಲು ಎಲ್ಲರೂ ಬಯಸುತ್ತಾರೆ. ಸಿಹಿಗಾಗಿ ರಾಮ ಮಾಡುವ ಮುಗುಳುನಗೆ ಮ್ಯಾಜಿಕ್ ಮೂಲಕ ಎಲ್ಲರನ್ನೂ ರಂಜಿಸಿದ್ದಾರೆ.
ಇನ್ನು ರಾಜೀವನಾಗಿ ಮಂಗಳಗೌರಿ ಧಾರಾವಾಹಿಯಲ್ಲಿ ನಟಿಸಿ ವೀಕ್ಷಕರ ಮನ ಸೆಳೆದಿರುವ ಗಗನ್ ಚಿನ್ನಪ್ಪ ತದ ನಂತರ ಕಾರಣಾಂತರಗಳಿಂದ ಪಾತ್ರದಿಂದ ಹೊರಬಂದಿದ್ದರು. ಗಗನ್ ಚಿನ್ನಪ್ಪ ಈಗ ರಾಮನಾಗಿ ಕನ್ನಡ ಕಿರುತೆರೆಯಲ್ಲಿ ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕೃಷ್ಣ ಮುಕುಂದ ಮುರಾರಿಯಲ್ಲೂ ಗಗನ್ ಅವರು ನಟಿಸಿದ್ದಾರೆ. ಪರಭಾಷೆಯ ಕಿರುತೆರೆಗೂ ಕಾಲಿಟ್ಟಿರುವ ಗಗನ್ ಚಿನ್ನಪ್ಪ ಮನೋಜ್ಞ ನಟನೆಯ ಮೂಲಕ ವೀಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ವಿಶೇಷವೆಂದರೆ ತೆಲುಗಿನ ಧಾರಾವಾಹಿಯಲ್ಲಿಯೂ ಗಗನ್ ಅವರು ಪೊಲೀಸ್ ಇನ್ಸ್ಪೆಕ್ಟರ್ ಪಾತ್ರದಲ್ಲಿ ಅಭಿನಯಿಸಿದ್ದು ವಿಶೇಷ.
ಗಗನ್ ಚಿನ್ನಪ್ಪ ಅವರು ಐಟಿ ಉದ್ಯೋಗಿಯಾಗಿದ್ದರು. ಆಟೋಮೊಬೈಲ್ ಇಂಡಸ್ಟ್ರಿಯಲ್ಲಿ ಮಾರ್ಕೆಟಿಂಗ್ ಹೆಡ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಮೂರು ವರ್ಷ ಜರ್ಮನಿ ಮತ್ತು ಓಮನ್ ನಲ್ಲಿ ಕೆಲಸ ಮಾಡಿದ್ದರು. ಮುಂದೆ ಭಾರತಕ್ಕೆ ಮರಳಿದ ಅವರು ಐಟಿ ಕಂಪೆನಿಯೊಂದರಲ್ಲಿ ಕೆಲಸ ಗಿಟ್ಟಿಸಿಕೊಂಡರು. ಬಾಲ್ಯದಿಂದಲೂ ನಟನಾಗಬೇಕು, ಬಣ್ಣದ ಲೋಕದಲ್ಲಿ ಮಿಂಚಬೇಕು ಎಂಬ ಕನಸು ಗಗನ್ ಚಿನ್ನಪ್ಪ ಅವರಿಗಿತ್ತು. 
ಇನ್ನು ಗಗನ್ ಚಿನ್ನಪ್ಪ ಅವರು ಒಂಟಿಯಲ್ಲವಂತೆ ಎಂಬ ಸುದ್ದಿ ನಿನ್ನೆಯಿಂದ ಎಲ್ಲೆಲ್ಲೂ ವೈರಲ್ ಆಗುತ್ತಿದೆ. ಈ ಹಿಂದೆ ಒಮ್ಮೆ ಗಗನ್ ಚಿನ್ನಪ್ಪ ಅವರು ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಪ್ರಾರ್ಥನಾ ಎಂಬ ಹುಡುಗಿಯೊಂದಿಗಿನ ಫೋಟೋ ಶೇರ್ ಮಾಡಿಕೊಂಡಿದ್ದರು. ಪ್ರಾರ್ಥನಾ ಹಾಗೂ ಗಗನ್ ಚಿನ್ನಪ್ಪ ಅವರು ಕೆಲ ವರ್ಷಗಳಿಂದ ಒಟ್ಟಿಗೆ ಇದ್ದು, ಇನ್ನಷ್ಟು ವರ್ಷ ಹೀಗೆ ಕಳೆಯಬೇಕು ಎಂಬ ಬಯಕೆಯನ್ನು ಹೇಳಿದ್ದರು. ಪ್ರಾರ್ಥನಾ ಎಂದರೆ ಬೇರೆ ಯಾರೂ ಅಲ್ಲ, ಪ್ರಾರ್ಥನಾ ನಾಣಯ್ಯ. ಪ್ರಾರ್ಥನಾ ಅವರು ಮೇಕಪ್ ಆರ್ಟಿಸ್ಟ್ ಆಗಿದ್ದು, ಹಲವು ನಟಿಯರಿಗೆ ಮೇಕಪ್ ಮಾಡಿದ್ದಾರೆ. ಪ್ರಾರ್ಥನಾ ಹಾಗೂ ಗಗನ್ ಇಬ್ಬರೂ ಕೂಡ ಕೊಡಗು ಮೂಲದವರೇ ಆಗಿದ್ದಾರೆ.
2021ರಲ್ಲಿ ನಾವು ಡೇಟಿಂಗ್ ಮಾಡುತ್ತಿದ್ದೆವು. ಆ ನಂತರ ನಮ್ಮಿಬ್ಬರ ಮಧ್ಯೆ ಬ್ರೇಕಪ್ ಆಯಿತು. ಯಾರೂ ಕೂಡಾ ಪರ್ಮನೆಂಟ್ ಅಲ್ಲ, 2021ರಲ್ಲಿ ನಾನು ಪೋಸ್ಟ್ ಮಾಡುವಾಗ ನಾನಷ್ಟು ಫೇಮಸ್ ಆಗಿರಲಿಲ್ಲ. ಆಗ ಬರೆದ ನೋಟ್ ಈಗ ವೈರಲ್ ಆಗಿದೆ. ಈಗ ನಾವು ಒಳ್ಳೆಯ ಫ್ರೆಂಡ್ಸ್, ಆದರೆ ಟಚ್​ನಲ್ಲಿಲ್ಲ. ಅದೆಲ್ಲವೂ ಜೀವನದ ಒಂದು ಭಾಗ ಅಷ್ಟೆ. ಫ್ರೆಂಡ್ಸ್ ಐ ಯ್ಯಾಮ್ ಸಿಂಗಲ್, ರೆಡಿ ಟು ಮಿಂಗಲ್ ಎಂದು ನಟ ಹೇಳಿದ್ದಾರೆ. ಈ ಮೂಲಕ ಗಗನ್ ಚಿನ್ನಪ್ಪ ಅವರು ತಾವು ಸಿಂಗಲ್ ಎನ್ನುವುದನ್ನು ಮುಕ್ತವಾಗಿ ಹೇಳಿಕೊಂಡಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
News Hub