ಕೇವಲ ಸೀರಿಯಲ್ ನಲ್ಲಿ ಅಭಿನಯಿಸಿ ಇವತ್ತು ಬಹು ವೆಚ್ಚದ ಮನೆ ಖರೀದಿ ಮಾಡಿದ ಗಟ್ಟಿಮೇಳ ಅನ್ವಿತಾ ಸಾಗರ್
Mar 22, 2025, 13:20 IST
|

ಗಟ್ಟಿಮೇಳ ಧಾರಾವಾಹಿಯನ್ನು ಯಾರೆಲ್ಲಾ ನೆನಪಿನಲ್ಲಿಟ್ಟುಕೊಂಡಿದ್ದೀರಾ..? ನೆನಪಿರುವವರಿಗೆ ಈಗಾಗಲೇ ನಾವು ಯಾರ ಬಗ್ಗೆ ಹೇಳುತ್ತಿದ್ದೇವೆ ಎಂಬುದು ಗೊತ್ತಾಗಿರುತ್ತದೆ. ನೆನಪಾಗದವರಗೆ ಗಟ್ಟಿಮೇಳ ಧಾರಾವಾಹಿಯಲ್ಲಿ ಮೂವರು ಅಣ್ಣಂದಿರ ಮುದ್ದಿನ ತಂಗಿ ಆದ್ಯ ಗೊತ್ತಿದೆಯಾ. ಆ. ಅವರೇ ಆದ್ಯ ಅಲಿಯಾಸ್ ನಟಿ ಅನ್ವಿತಾ ಸಾಗರ್. ಹೌದ ನಟಿ ಅನ್ವಿತಾ ಸಾಗರ್ ಅವರು ಇಷ್ಟು ದಿನ ಮುದ್ದಿನ ತಂಗಿ ಪಾತ್ರದಿಂದಲೇ ಎಲ್ಲರ ಮೆಚ್ಚುಗೆಯನ್ನು ಪಡೆದಿದ್ದರು. ಇನ್ಮುಂದೆ ಹೊಸದೊಂದು ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾರೆ.
ನಟಿ ಅನ್ವಿತಾ ಸಾಗರ್ ಅವರು ಇನ್ಮುಂದೆ ಅಮೃತಧಾರೆ ಧಾರಾವಾಹಿಯಲ್ಲಿ ಇರುವ ಮಲ್ಲಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಹೌದು ಇದು ಜಸ್ಟ್ ಗೆಸ್ಸಿಂಗ್ ಅಲ್ಲ. ನಾಳೆಯಿಂದ ನಟಿ ಅನ್ವಿತಾ ಸಾಗರ್ ಅವರು ಮಲ್ಲಿಯಾಗಿ ಎಲ್ಲರ ಮನೆಯ ಟಿವಿ ಪರದೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಅಮೃತಧಾರೆ ಧಾರಾವಾಹಿಯಲ್ಲಿ ಇಷ್ಟು ದಿನ ಮಲ್ಲಿಯ ಪಾತ್ರಕ್ಕೆ ನಟಿ ರಾಧಾ ಭಾಗವತಿ ಅವರು ಜೀವ ತುಂಬಿದ್ದರು. ಮುಗ್ಧ ಹುಡುಗಿ ಮಲ್ಲಿ ಜೈದೇವ್ ನಿಂದ ಮೋಸಕ್ಕೊಳಗಾಗಿ ಕೊನೆಗೆ ಮದುವೆಯಾಗಿದ್ದಳು. ಈಗಲೂ ಜೈದೇವ್ ಹಳೆ ಬಣ್ಣ ಬಯಲಾದ ಕಾರಣ ಬೇಸರ ಮಾಡಿಕೊಂಡ ಮಲ್ಲಿ ತಾತನನ್ನು ನೋಡುವ ನೆಪದಲ್ಲಿ ಹಳ್ಳಿಗೆ ಬಂದಿದ್ದಳು. ಬಹಳ ದಿನಗಳಿಂದ ಕಾಣೆಯಾಗಿದ್ದ ಮಲ್ಲಿ ಈಗ ನಟಿ ಅನ್ವಿತಾ ಸಾಗರ್ ರೂಪದಲ್ಲಿ ಕಾಣಿಸಿಕೊಳ್ಳಲಿದ್ದಾಳೆ.
ನಟಿ ರಾಧಾ ಭಾಗವತಿ ಅವರು ಕಾರಾಣಾಂತರಗಳಿಂದ ಅಮೃತಧಾರೆ ಧಾರಾವಾಹಿಯಿಂದ ಹೊರ ನಡೆದಿದ್ದರು. ಹಾಗಾಗಿ ಇನ್ಮುಂದೆ ನಟಿ ಅನ್ವಿತಾ ಸಾಗರ್ ಅವರು ಮಲ್ಲಿ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ಇನ್ನು ನಟಿ ಅನ್ವಿತಾ ಸಾಗರ್ ಅವರು ಮೂಲತಃ ಮಂಗಳೂರಿನವರು. ಮಂಗಳೂರಿನ ಎಸ್ ಡಿಎಂ ಕಾಲೇಜಿನಲ್ಲಿ ಎಂಬಿಎ ವ್ಯಾಸಂಗ ಮಾಡಿದ ಇವರು, ತುಳು ಸಿನಿಮಾದಲ್ಲಿ ನಟಿಸಿದ್ದಾರೆ. ದಂಡ್, ಬಲೆ ಪುದರ್ ದೀಕ, ಪೆಟ್ ಕಮ್ಮಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು. ಬಳಿಕ ಯಜ್ಞ ಸಿನಿಮಾದ ಮೂಲಕ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ತದ ನಂತರ ಮಾಯಾ ಕನ್ನಡಿ, ವಿರಾಟ ಪರ್ವ ಸಿನಿಮಾಗಳಲ್ಲಿ ಅನ್ವಿತಾ ಸಾಗರ್ ಅಭಿನಯಿಸಿದ್ದಾರೆ. ಗಟ್ಟಿಮೇಳ ಧಾರಾವಾಹಿ ಮೂಲಕ ಕರುನಾಡಿನ ಮುದ್ದಿನ ತಂಗಿಯಾಗಿರುವ ಇವರು ಆದ್ಯ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದರು.
ಮನಸ್ಸೆಲ್ಲಾ ನೀನೆ ಧಾರಾವಾಹಿಯಲ್ಲಿ ನೆಗೆಟಿವ್ ಶೇಡ್ ನಲ್ಲಿ ಕಾಣಿಸಿಕೊಂಡರು. ತದನಂತರ ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಅಣ್ಣ-ತಂಗಿ ಧಾರಾವಾಹಿಯಲ್ಲಿ ನಟಿ ಅನ್ವಿತಾ ಸಾಗರ್ ಅವರು ಜ್ಯೋತಿ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇದು ಕೂಡ ನೆಗೆಟಿವ್ ಕಮ್ ಪಾಸಿಟಿವ್ ಎರಡೂ ಶೇಡ್ ಇರುವ ಪಾತ್ರ. ಅಲ್ಲದೇ, ನಟಿ ಅನ್ವಿತಾ ಸಾಗರ್ ಅವರು ಡ್ಯಾನ್ಸಿಂಗ್ ಚಾಂಪಿಯನ್ ರಿಯಾಲಿಟಿ ಶೋನಲ್ಲಿ ಭಾಗವಿಹಿಸಿದ್ದರು. ನಟಿ ಅನ್ವಿತಾ ಸಾಗರ್ ಅವರ ಸಹೋದರ ಕೂಡ ನಟ. ಅನ್ವಿತಾ ಅವರ ಅಣ್ಣ ಅನೂಪ್ ಸಾಗರ್ ಅವರು ತುಳು ಸಿನಿಮಾ ಇಂಡಸ್ಟ್ರಿಯಲ್ಲಿ ಆಕ್ಟಿವ್ ಆಗಿದ್ದಾರೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ