ಬಿಗ್ ಬಾಸ್ ಮನೆಯಲ್ಲಿ ಮಿಂಚುತ್ತಿರುವ ಗೌತಮಿ ಜಾಧವ್ ಗಂಡ ಯಾರು, ಇವರ ಬ್ಯಾಗ್ರೌಂಡ್ ಕೇಳಿದ್ರೆ ಬೆಚ್ಚಿಬೀಳ್ತೀರಾ
Oct 11, 2024, 16:14 IST
|

ನೋಡಲು ಕನ್ನಡತಿಯಂತೆ ಕಾಣುವ ಈಕೆ ಮೂಲತಃ ಮರಾಠಿ ಬೆಡಗಿ, ಹುಟ್ಟಿದಾಗಿನಿಂದಲೂ ಬೆಂಗಳೂರಿನಲ್ಲೆ ಬೆಳದ ಈಕೆ ಕನ್ನಡ ಬಹಳ ಸರಳವಾಗಿ ಮಾತನಾಡುತ್ತಾರೆ. ನಟಿ ಗೌತಮಿ ಜಾದವ್ ಅವರಿಗೆ ಮದುವೆಯಾಗಿದೆ, ಇವರ ಪತಿ ಕನ್ನಡ ಫಿಲಿಂ ಇಂಡಸ್ಟ್ರಿಯಲ್ಲಿ ಛಾಯಾಗ್ರಾಹಕನಾಗಿ ಕಾಣಿಸಿಕೊಂಡಿದ್ದಾರೆ. ಆತನ ಹೆಸರು ಅಭಿಷೇಕ್ ಕಾಸರಗೋಡು.
ನಟಿ ಗೌತಮಿ ಜಾಧವ್ ಅವರ ಪತಿ ಹೆಸರು ಅಭಿಷೇಕ್ ಕಾಸರಗೋಡ್ ಅವರು ಖ್ಯಾತ ಸಿನಿ ಪತ್ರಕರ್ತ ಗಣೇಶ್ ಕಾಸರಗೋಡು ಅವರ ಪುತ್ರ.ಇವರು ಸಿನಿಮಾಟೋಗ್ರಾಫರ್ ಆಗಿದ್ದು, ಇತ್ತೀಚೆಗೆ ತೆರೆಕಂಡ ನಟ ವಿನಯ್ ರಾಜ್‌ಕುಮಾರ್ ಅಭಿನಯದ ʼಪೆಪೆʼ ಸಿನಿಮಾದ ಸಿನಿಮಾಟೋಗ್ರಫಿ ಮಾಡಿದ್ದು ಇವರೇ. ಇದಷ್ಟೇ ಅಲ್ಲದೆ, ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ, ಮಾಯಾಬಜಾರ್, ಕೃಷ್ಣ ಟಾಕೀಸ್ ಎಂಬ ಕನ್ನಡ ಪ್ರಮುಖ ಸಿನಿಮಾಗಳಲ್ಲಿ ಸಿನಿಮಾಟೋಗ್ರಾಫರ್ ಆಗಿ ಕೆಲಸ ಮಾಡಿದ್ದಾರೆ.
ಇದಷ್ಟೇ ಅಲ್ಲದೆ, ಛಾಯಾಗ್ರಹಣದಲ್ಲಿ ಡಿಪ್ಲೊಮಾ ಪಡೆದ ಅಭಿಷೇಕ್ ಕಾಸರಗೋಡು ಅವರು 'ಸೂಪರ್', 'ಪೊರ್ಕಿ', 'ಜಂಗ್ಲಿ' ಮತ್ತು 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' ಮುಂತಾದ ಚಲನಚಿತ್ರಗಳಿಗೆ ಸಹಾಯಕ ಛಾಯಾಗ್ರಾಹಕರಾಗಿ ಕೆಲಸ ಮಾಡಿದ್ದರು.ಕಾಮಿಡಿ-ಥ್ರಿಲ್ಲರ್ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಮೂಲಕ ಅಭಿಷೇಕ್ ಸ್ವತಂತ್ರ ಸಿನಿಮಾಟೋಗ್ರಾಫರ್ ಆಗಿ ಪಾದಾರ್ಪಣೆ ಮಾಡಿದರು.
ತಮ್ಮ ಮದುವೆ ಸ್ಟೋರಿ ಬಗ್ಗೆ ಮಾತನಾಡಿದ್ದ ಗೌತಮಿ ಜಾದವ್ ನಮ್ಮಿಬ್ಬರದ್ದು ಅಂತರ್ಜಾತಿ ವಿವಾಹ, ನಮ್ಮ ಕಡೆಯ ಸಂಪ್ರದಾಯ ಆಚರಣೆಗಳು ಬೇರೆ ಅವರ ಕಡೆಯ ಸಂಪ್ರದಾಯ ಬೇರೆ ಇದರಿಂದ ಯಾರ ಮನಸ್ಸಿಗೂ ಸಹ ಬೇಜಾರಾಗಬಾರದು ಎಂಬ ಕಾರಣಕ್ಕೆ ನಾವಿಬ್ಬರು ದೇವಸ್ಥಾನದಲ್ಲಿ ಮದುವೆಯಾದೆವು, ರಿಸೆಪ್ಷನ್‌ಗೆ ಸೆಲೆಬ್ರಿಟಿಗಳನ್ನು ಕರೆದಿದ್ದೆವು ಎಂದಿದ್ದಾರೆ.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023