ಸಚಿನ್ ತೆಂಡೂಲ್ಕರ್ ಮಗಳ ಜೊತೆ ಗಿಲ್ ಒಡನಾಟ; ರೊ ಚ್ಚಿಗೆದ್ದ ತೆಂಡೂಲ್ಕರ್
ಕ್ರಿಕೇಟ್ ದೇವರು ಸಚಿನ್ ತೆಂಡೂಲ್ಕರ್ ಮಗಳು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಕ್ರಿಕೆಟಿಗ ಶುಭ್ಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬುದು ಇಂದು ನಿನ್ನೆಯ ವದಂತಿಯಲ್ಲ. ಕಳೆದ ನಾಲ್ಕು ವರ್ಷಗಳಿಂದ ಈ ಸುದ್ದಿ ಭಾರೀ ಸದ್ದು ಮಾಡುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಅನೇಕ ಸಾಕ್ಷಿಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದುಂಟು.
ಆದ್ರೆ ಇದೀಗ ಇವರಿಬ್ಬರು ಮತ್ತೂಮ್ಮೆ ಸುದ್ದಿಯಲ್ಲಿದ್ದಾರೆ. ಅಂಬಾನಿ ಜಿಯೋ ವರ್ಲ್ಡ್ ಪ್ಲಾಜಾ ಬಿಡುಗಡೆ ಸಮಾರಂಭದಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಮತ್ತೆ ಇವರಿಬ್ಬರ ಪ್ರೀತಿ ವಿಚಾರ ಮುನ್ನೆಲೆಗೆ ಬಂದಿದೆ. ಆದರೆ ಇದು ಹಳೆಯ ವಿಡಿಯೋ ಆಗಿದ್ದರೂ ಪ್ರಸ್ತುತ ದಿನಗಳಲ್ಲಿ ಸುದ್ದಿಯಾಗುತ್ತಿದೆ.
ಕ್ರಿಕೆಟ್ ದೇವರು ಎಂದೇ ಖ್ಯಾತರಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ಅವರೊಂದಿಗೆ ಶುಭ್ಮನ್ ಹೆಸರು ತಳುಕು ಹಾಕಿಕೊಂಡಿದೆ. ಇನ್ನು ಈ ಸಂಬಂಧವನ್ನು ಇವರಿಬ್ಬರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಹಾಗಂತ ಈ ಸುದ್ದಿಯನ್ನು ತಳ್ಳಿ ಹಾಕಿಲ್ಲ.
ಇದಷ್ಟೇ ಅಲ್ಲದೆ, ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಕರಣ್ ಜೋಹರ್ ಅವರ ಕಾಫಿ ವಿತ್ ಕರಣ್ 8 ಕಾರ್ಯಕ್ರಮದಲ್ಲಿ ಶುಭ್‌ಮನ್ ಅವರೊಂದಿಗಿನ ಸಂಬಂಧದ ಬಗೆ ಸ್ಪಷ್ಟನೆ ನೀಡಿದ್ದರು. ನೀವು ಅಂದುಕೊಂಡಿರುವ ಸಾರಾ ನಾನಲ್ಲ ಎಂದಿದ್ದರು.
ಇದಷ್ಟೇ ಅಲ್ಲದೆ, ಯುಎಇ ಕ್ರಿಕೆಟಿಗ ಚಿರಾಗ್ ಸೂರಿ ಎಂಬವರು ಕೂಡ ಇವರಿಬ್ಬ ಸಂಬಂಧದ ಬಗ್ಗೆ ದೃಢೀಕರಣ ನೀಡಿ ಮಹತ್ವದ ಹೇಳಿಕೆ ನೀಡಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.