ಚಿನ್ನದ ಬೆಲೆಯಲ್ಲಿ ಇಳಿಮುಖ, ಸಾಲುಗಟ್ಟಿ ನಿಂತ ಚಿನ್ನದ ಗ್ರಾಹಕರು
| Dec 12, 2024, 16:31 IST
ಇತ್ತಿಚೆಗೆ ಚಿನ್ನದ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಈ ಪರಿಣಾಮದಿಂದ ಇಡೀ ಭಾರತದಲ್ಲಿ ಮದುವೆ ಹಾಗೂ ಇನ್ನಿತರ ಕಾರ್ಯಕ್ರಮಗಳಲ್ಲಿ ಚಿನ್ನದ ವೆಚ್ಚದ ಬಿಸಿ ಮುಟ್ಟಿತ್ತು.
ಇದರ ಜೊತೆಗೆ ಮಧ್ಯಮವರ್ಗದ ಕುಟುಂಬಗಳಿಗೆ ಸಾಕಷ್ಟು ಹೊಡೆತ ಬಿದಿತ್ತು. ಇನ್ನು ಇದರ ಜೊತೆಗೆ ಚಿನ್ನ ವ್ಯಾಪಾರಿಗಳಿಗೂ ಬಾರಿ ನಷ್ಟದ ಬೀದಿ ಎದುರಾಗಿತ್ತು. ಚಿನ್ನ ಬೆಲೆ ಏರಿಕೆಯಿಂದ ಬಂಗಾರದಂಡಿಗೆ ಗ್ರಾಹಕರ ಸಂಖ್ಯೆ ತೀರಾ ತಿಳಿಮುಖವಾಗಿತ್ತು.
ಇನ್ನು ಒಂದು ವಾರಗಳ ಹಿಂದೆ ಚಿನ್ನದ ಬೆಲೆ ಸ್ಪಲ್ಪ ಮಟ್ಟಿಗೆ ಇಳಿಮುಖ ಕಂಡಿದೆ. ಇದರಿಂದಾಗಿ ರಾಜ್ಯದ ಜನರು ನಿಟ್ಟುಸಿರು ಬಿಟ್ಟಿದ್ದಾರೆ.
ಹೌದು, ಸುಮಾರು 600 ರೂಪಾಯಿಯಷ್ಟು ಬೆಲೆ ಇಳಿಕೆ ಕಂಡಿದೆ. ಇದರಿಂದ ಬಂಗಾರ ಖರೀದಿದಾರರಿಗೆ ಸ್ಪಲ್ಪ ಮಟ್ಟಿಗೆ ಖುಷಿ ತಂದಿದೆ.