CCL ಕ್ರಿಕೆಟ್ ವೇಳೆ ಸುದೀಪ್ ಮೇಲೆ ಮುಗಿಬಿದ್ದ ಎದುರಾಳಿ ಟೀಮ್, ಮಧ್ಯಪ್ರವೇಶ ಮಾಡಿದ ಗೋಲ್ಡನ್ ಸ್ಟಾರ್ ಗಣೇಶ್
Feb 27, 2025, 15:03 IST
|

ಅಷ್ಟಕ್ಕೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್ 2025ರ 11ನೇ ಆವೃತ್ತಿ ನಡೆಯುತ್ತಿದೆ. ಫೆಬ್ರುವರಿ 8ರಿಂದ ಪಂದ್ಯಾವಳಿ ಆರಂಭವಾಗಿದ್ದು, 8 ಚಿತ್ರರಂಗಗಳ ಒಂದು ಕಪ್ಗಾಗಿ ಸೆಣೆಸಾಟ ನಡೆಸುತ್ತಿದೆ. ಕಿಚ್ಚ ಸುದೀಪ್ ಅವರ ಕರ್ನಾಟಕ ಬುಲ್ಡೋಜರ್ಸ್ ತಂಡ ಮೊದಲ ಪಂದ್ಯದಲ್ಲಿ ಗೆದ್ದು ಶುಭಾರಂಭ ಕೂಡ ಮಾಡಿತ್ತು. ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವು ತೆಲುಗು ವಾರಿಯರ್ಸ್ ವಿರುದ್ಧ ಗೆದ್ದು ಬೀಗಿತ್ತು.
ಕರ್ನಾಟಕ ಈವರೆಗೆ ಒಟ್ಟು ನಾಲ್ಕು ಪಂದ್ಯಗಳನ್ನು ಆಡಿದ್ದು, ಇದರಲ್ಲಿ ಮೂರು ಪಂದ್ಯದಲ್ಲಿ ಜಯ ಸಾಧಿಸಿದೆ. ಕೊನೆಯ ಪಂದ್ಯದಲ್ಲಿ, ಫೆಬ್ರವರಿ 22 ರಂದು ನಡೆದ ಪಂಜಾಬ್ ದಿ ಶೇರ್ ವಿರುದ್ಧದ ರೋಚಕ ಪಂದ್ಯದಲ್ಲಿ 2 ರನ್ಗಳಿಂದ ಸೋತಿತ್ತು. ಆದರೆ, ಈ ಪಂದ್ಯದಲ್ಲಿ ಎಲ್ಲರ ಹುಬ್ಬೇರುವಂತಹ ಘಟನೆ ನಡೆಯಿತು. ಕಿಚ್ಚ ಸುದೀಪ್ ಎದುರಾಳಿ ತಂಡದ ವಿರುದ್ಧ ರೊಚ್ಚಿಗೆದ್ದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಪಂದ್ಯದ ಮಧ್ಯದಲ್ಲಿ ಪಂಜಾಬ್ ತಂಡದ ನಿಂಜಾ ಎನ್ಜೆ ಮತ್ತು ಕರ್ನಾಟಕದ ವಿಕೆಟ್ ಕೀಪರ್ ಕಿಚ್ಚ ಸುದೀಪ್ ನಡುವೆ ಜಗಳ ನಡೆಯಿತು. ಇಬ್ಬರು ಆಟಗಾರರ ನಡುವೆ ಮಾತಿನ ಚಕಮಕಿ ನಡೆಯಿತು. ಇದರಿಂದಾಗಿ ಕೆಲಕಾಲ ಪಂದ್ಯ ಕೂಡ ಸ್ಥಗಿತಗೊಂಡಿತು. ಪರಿಸ್ಥಿತಿ ವಿಕೋಪಕ್ಕೆ ಹೋಗಿ ಒಬ್ಬರಿಗೊಬ್ಬರು ಎಚ್ಚರಿಕೆ ನೀಡಲು ಆರಂಭಿಸಿದರು. ಸ್ಥಿತಿ ಕೈ ಮೀರುತ್ತಿದೆ ಎಂದು ಅರಿತ ಅಂಪೈರ್‌ಗಳು ಆಟಗಾರರಿಗೆ ಶಾಂತವಾಗಲು ಹೇಳಿದರು.
ಕಿಚ್ಚ ಸುದೀಪ್ ಅವರನ್ನು ಸಮಾಧಾನ ಪಡಿಸಲು ಗೋಲ್ಡನ್ ಸ್ಟಾರ್ ಗಣೇಶ್ ಸೇರಿದಂತೆ ತಂಡದ ಸದಸ್ಯರು ಮಧ್ಯಪ್ರವೇಶಿಸಬೇಕಾಯಿತು. ಆದರೆ, ಪಂದ್ಯ ಮುಗಿದ ನಂತರ ಕಿಚ್ಚ ಸುದೀಪ್ ಸ್ವತಃ ಹೋಗಿ ತಾವು ಜಗಳ ಮಾಡಿದ್ದ ಆಟಗಾರ ನಿಂಜಾ ಜೊತೆ ಕೈಕುಲುಕಿದರು. ಅವರು ಕೂಡ ಸುದೀಪ್ ಅವರನ್ನು ಅಪ್ಪಿಕೊಂಡು ನಗುತ್ತಾ ಮಾತನಾಡಿದನು. ಪಂಜಾಬ್‌ನ ಇತರ ಆಟಗಾರರು ಸಹ ಕೈಕುಲುಕಿದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಅಂತರ್ಜಾಲದಲ್ಲಿ ವೈರಲ್ ಆಗಿದೆ. (ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.
Mon,10 Jul 2023
ಭಾರತೀಯ ಆಟಗಾರ ಕೆ ಎಲ್ ರಾಹುಲ್ ಅವರ ಸಂಭಾವನೆ ಎಷ್ಟು ಕೋಟಿ ಇರಬಹುದು
Sat,8 Jul 2023
ದಕ್ಷಿಣ ಕನ್ನಡದ ಕಂಬಳ ಕ್ರೀಡೆ ನೋಡುವುದೇ ಎಷ್ಟು ಚೆಂದ ಗೊತ್ತಾ
Sat,17 May 2025
ಏಕಾಏಕಿ ಲೈವ್ ಬಂದ್ ಅಭಿಮಾನಿಗಳ ಮುಂದೆ ಕಣ್ಣೀರು ಹಾಕಿದ ಸಿಂಗರ್ ಅರ್ಚನ ಉಡುಪ
Sat,17 May 2025
ಸೆಟ್ ನಲ್ಲಿ ಕಿರಿಕ್, ಅಣ್ಣಯ್ಯ ಸೀರಿಯಲ್ ನಿಂದ ನಿಶಾ ಔಟ್
Sat,17 May 2025