ಕನ್ನಡಿಗರಿಗೆ ಸಿಹಿಸುದ್ದಿ; 'ಡಾಲಿ‌ ಧನಂಜಯ್ ಜೊತೆ ಮದುವೆ ಆಗಲು ಒಪ್ಪಿಕೊಂಡ ರಮ್ಯಾ'

 | 
ಗ೭

ನಟನೆ ಜತೆಗೆ ನಿರ್ಮಾಣ ಕಾರ್ಯದಲ್ಲಿಯೂ ಡಾಲಿ ಧನಂಜಯ್‌ ಬಿಜಿಯಾಗಿದ್ದಾರೆ. ಹೊಸಬರ ಪ್ರಯತ್ನಗಳನ್ನು ಮುಕ್ತವಾಗಿ ಸ್ವೀಕರಿಸಿ ಅವರಿಗೂ ತಮ್ಮ ಡಾಲಿ ಪಿಕ್ಚರ್ಸ್‌ ಬ್ಯಾನರ್‌ನಲ್ಲಿ ಅವಕಾಶ ನೀಡುತ್ತ ಬರುತ್ತಿದ್ದಾರೆ. ಇದೆಲ್ಲ ಒಂದೆಡೆಯಾದರೆ, ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡಿದ ವಿಚಾರ ಏನೆಂದರೆ, ಧನಂಜಯ್‌ ಮದುವೆ ಯಾವಾಗ ಎಂಬುದು. ಇದೀಗ ಮತ್ತೆ ಇದಕ್ಕೆ ಉತ್ತರ ಸಿಕ್ಕಿದೆ.

ಕೆಲ ದಿನಗಳ ಹಿಂದಷ್ಟೇ ಚಿಟ್ಟೆಗೆ ಹುಡುಗಿ ಸಿಕ್ಕಳು, ಡಾಲಿ ಕಥೆ ಏನು? ಎಂಬ ಪುಕಾರು ಹಬ್ಬಿತ್ತು. ಅಭಿಮಾನಿ ವಲಯದಲ್ಲಿಯೂ ಈ ವಿಚಾರ ಹೆಚ್ಚು ಸದ್ದು ಮಾಡಿತ್ತಾದರೂ, ಉತ್ತರ ಮಾತ್ರ ಸಿಕ್ಕಿರಲಿಲ್ಲ. ಇದೀಗ ಇದೇ ಧನಂಜಯ್‌ ಮದುವೆ ಬಗ್ಗೆ ಮೋಹಕ ತಾರೆ ರಮ್ಯಾ ಸುಳಿವು ನೀಡಿದ್ದಾರೆ.

ಸದಾ ಹೊಸತನದ ತುಡಿತದಲ್ಲಿರುವ ಧನಂಜಯ್‌, ಏನಾದರೊಂದು ಹೊಸ ಹೊಸ ಸಾಹಸಕ್ಕೆ ಕೈಹಾಕುತ್ತಲೇ ಇರುತ್ತಾರೆ. ಯೂನಿಕ್‌ ಐಡಿಯಾಗಳೊಂದಿಗೆ ಪ್ರೇಕ್ಷಕರೆದುರಿಗೆ ಬರುವ ಆಲೋಚನೆಯಲ್ಲಿರುತ್ತಾರೆ. ಅದರಂತೆ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೋ ತುಣುಕೊಂದನ್ನು ಧನಂಜಯ್‌ ಹಂಚಿಕೊಂಡಿದ್ದರು. ಅದೇ ಏನ್ ಇರ್ಬೋದು?!

ಹೌದು, ತಲೆಕೆರೆದುಕೊಂಡು, ಕೂತಲ್ಲಿ ಕೂರದೆ, ನಿಂತಲ್ಲಿ ನಿಲ್ಲದೆ ತಲೆ ಬಿಸಿಮಾಡಿಕೊಂಡು ಗಣಿತದ ಲೆಕ್ಕಾಚಾರ ಹಾಕಿದ್ದಾರೆ. ಆ ಲೆಕ್ಕಾಚಾರ ನೋಡಿದ ಅವರ ಸ್ನೇಹಿತರು ಏನ್ ಇರ್ಬೋದು? ಎಂದು ಊಹಿಸಿದ್ದಾರೆ. ಆದರೆ, ಅದಕ್ಕೆ ಉತ್ತರ ಅವರಿಗೂ ದಕ್ಕಿಲ್ಲ. ಕೊನೆಗೆ ಮುಂದುವರಿದು ಅದನ್ನು ಹೇಳಲು ರಮ್ಯಾ ಅವರೇ ಬರಬೇಕಾಯಿತು. 

12-1= 23 ನಂಬರ್‌ಗೆ ನಿನ್ನ ಮದುವೆ ದಿನಾಂಕ ಎಂದು ರಮ್ಯಾ ಕಮೆಂಟ್‌ ಮಾಡಿದ್ದಾರೆ. ಒಟ್ಟಿನಲ್ಲಿ ಇದನ್ನು ನೋಡಿ ಅಭಿಮಾನಿಗಳು ಸಮ್ ಥಿಂಗ್ ಎಂದು ಕಾಲೆಳೆದಿದ್ಧಾರೆ.