ರಾಜ್ ಕುಟುಂಬದಿಂದ ಕರುನಾಡಿಗೆ ಸಿಹಿಸುದ್ದಿ, ಅಶ್ವಿನಿ ಪುನೀತ್ ರಾಜ್‍ಕುಮಾರ್ ಸಂತಸ

 | 
Hd

ವಿನಯ್ ರಾಜ್ ಕುಮಾರ್ ಅವ್ರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಣ್ಣಾವ್ರ ಕುಟುಂಬದ ಮೂರನೇ ಜನರೇಷನ್ನಿನ ಕುಡಿ ಇವರು. ರಾಘವೇಂದ್ರ ರಾಜ್ ಕುಮಾರ್ ಅವರ ಮೊದಲ ಮಗ ವಿನಯ್ ರಾಜ್ ಕುಮಾರ್ ಅವರು. ಕಳೆದ ಸಾಕಷ್ಟು ವರ್ಷಗಳಿಂದ ಸಿನಿಮಾ ರಂಗದಲ್ಲಿ ಗುರುತಿಸಿಕೊಂಡಿದ್ದು ಎಲ್ಲರಿಗೂ ತಿಳಿದೇ ಇದೆ.ಇನ್ನು ಇದೀಯ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಮಗ ಯುವ ರಾಜ್ ಕುಮಾರ್ ಕೂಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದು ಕೆ ಜಿ ಎಫ್ ಖ್ಯಾತಿಯ ಹೊಂಬಾಳೆ ಫಿಲಂಸ್ ನಿರ್ಮಾಣ ಸಂಸ್ಥೆಯ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ.Hd

ವರ್ಷದ ಹಿಂದೆಯೇ ಯುವ ರಾಜ್ ಕುಮಾರ್ ಅವರ ಸಿನಿಮಾವೊಂದು ಅನೌನ್ಸ್ ಆಗಿದ್ದರೂ ಸಹ ಕಾರಣಾಂತರಗಳಿಂದ ಆ ಸಿನಿಮಾ ಸೆಟ್ಟೇರಲಿಲ್ಲ. ಇತ್ತ ಪುನೀತ್ ರಾಜ್ ಕುಮಾರ್ ಅವರ ಅಗಲಿಕೆಯ ನಂತರ ಹೊಂಬಾಳೆ ಫಿಲಂಸ್ ಮೂಲಕ ದೊಡ್ಡ ಮಟ್ಟದಲ್ಲಿಯೇ ಸ್ಯಾಂಡಲ್ವುಡ್ ಗೆ ಎಂಟ್ರಿ ನೀಡುವ ತಯಾರಿ ನಡೆಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಅಣ್ಣ ವಿನಯ್ ರಾಜ್ ಕುಮಾರ್ ಅವರಿಗಿಂತಲೂ ಮುನ್ನವೇ ಯುವ ರಾಜ್ ಕುಮಾರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ತಮ್ಮದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು ಮೈಸೂರು ಮೂಲದ ತಮ್ಮ ಗೆಳತಿಯನ್ನೇ ಮದುವೆಯಾದರು.Hd

ಇತ್ತ ವಿನಯ್ ರಾಜ್ ಕುಮಾರ್ ಅವರು ಮದುವೆ ಏಕೆ ಆಗಲಿಲ್ಲ.ಅಣ್ಣನಿಗಿಂತ ಮೊದಲು ತಮ್ಮನ ಮದುವೆ ಮಾಡಿದ್ದೇಕೆ ಎಂದು ಅಭಿಮಾನಿಗಳ ಮನಸ್ಸಿನಲ್ಲಿ ಸಾಕಷ್ಟು ಪ್ರಶ್ನೆಗಳು ಮೂಡಿದ್ದುಂಟು. ಆದರೆ ವಿನಯ್ ರಾಜ್ ಕುಮಾರ್ ಅವರು ಮಾತ್ರ ವಯಸ್ಸಲ್ಲಿ ದೊಡ್ಡವರಾದರೂ ತಾವು ಮದುವೆಯಾಗದೇ ತಮ್ಮನ ಮದುವೆ ಮಾಡಿಸಿ ಸಂಭ್ರಮ ಪಟ್ಟಿದ್ದರು. ಅಷ್ಟಕ್ಕೂ ಅದಕ್ಕೆಲ್ಲ ಅದಕ್ಕೆ ಕಾರಣ ಸಿನಿಮಾ. ಹೌದು ಸಿನಿಮಾ ರಂಗದಲ್ಲಿ ಒಂದು ದೊಡ್ಡ ಮಟ್ಟದ ಯಶಸ್ಸಿಗಾಗಿ ಕಾಯುತ್ತಿರುವ ವಿನಯ್ ರಾಜ್ ಕುಮಾರ್ ಮದುವೆಯ ವಿಚಾರವನ್ನು ಪಕ್ಕಕ್ಕಿಟ್ಟು ಸಿನಿಮಾಗಳ ಕಡೆ ಮುಖ ಮಾಡಿದರು.ದೊಡ್ಮನೆ ಕುಟುಂಬದಿಂದ ಬಂದವರಾದರೂ. Hd

ಚಿಕ್ಕಪ್ಪ ದೊಡ್ಡಪ್ಪ ಎಲ್ಲರೂ ಸಹ ದೊಡ್ಡ ಸ್ಟಾರ್ ಗಳಾಗಿ ಬ್ಯುಸಿ ಆಗಿದ್ದಾಗಲೂ ಸಹ ವಿನಯ್ ರಾಜ್ ಕುಮಾರ್ ಅವರಿಗೆ ಹೇಳಿಕೊಳ್ಳುವ ದೊಡ್ಡ ಮಟ್ಟದ ಯಶಸ್ಸು ದೊರಕಿರಲಿಲ್ಲ. ಕೈಯಲ್ಲಿ ಸಾಕಷ್ಟು ಸಿನಿಮಾಗಳಿದ್ದವು. ರನ್ ಆಂತನಿ ಅಂತಹ ಕಥೆಯಾಧಾರಿತ ಒಳ್ಳೆಯ ಸಿನಿಮಾಗಳನ್ನು ಮಾಡಿದರೂ ಸಹ ಸ್ಟಾರ್ ಪಟ್ಟಕ್ಕೆ ಹೋಗುವ ರೀತಿ ಬ್ರೇಕ್ ಸಿಗಲಿಲ್ಲ. ಆದರೆ ವಿನಯ್ ರಾಜ್ ಕುಮಾರ್ ಮಾತ್ರ ತಮ್ಮ ಪ್ರಯತ್ನವನ್ನು ಬಿಡಲಿಲ್ಲ. ಮತ್ತಷ್ಟು ತಯಾರಿ ನಡೆಸಿ ಹೊಸ ಹೊಸ ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ. Bb

ಇನ್ನು ಇದೀಗ ವಿನಯ್ ರಾಜ್ ಕುಮಾರ್ ಅವರೀಗ ಸಿಹಿ ಸುದ್ದಿ ಒಂದನ್ನು ನೀಡಿದ್ದಾರೆ. ಹೌದು ಕಳೆದ ಎರಡು ವರ್ಷದ ಹಿಂದೆ ಕೊರೊನಾ ಸಮಯದಲ್ಲಿ ಸಿನಿಮಾ ಇಂಡಸ್ಟ್ರಿ ಹಾಗೂ ಕಿರುತೆರೆ ಎಲ್ಲವೂ ಸಹ ನೆಲಕಚ್ಚಿ ಹೋಗಿತ್ತು.ಆ ಸಮಯದಲ್ಲಿ ಕನ್ನಡ ಕಿರುತೆರೆಗೆ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಕಾಲಿಟ್ಟಿದ್ದವು. ಅದರಲ್ಲೂ ಮಹಾಭಾರತ ಹಾಗೂ ರಾಧಾ ಕೃಷ್ಣ ಧಾರಾವಾಹಿ ಬೇರೆಯದ್ದೇ ಕ್ರೇಜ್ ಹುಟ್ಟುಹಾಕಿತು. ಡಬ್ಬಿಂಗ್ ಧಾರಾವಾಹಿಗಳಾದರೂ ಕೂಡ ದಾಖಲೆಯ ರೇಟಿಂಗ್ ಪಡೆದುಕೊಂಡು ಕನ್ನಡದಲ್ಲಿಯೂ ನಂಬರ್ ಒನ್ ಸ್ಥಾನಕ್ಕೇರಿದ್ದವು.ಧಾರಾವಾಹಿ ಮಾತ್ರವಲ್ಲ ಅಲ್ಲಿನ ಕಲಾವಿದರುಗಳು ಸಹ ಕನ್ನಡದ ಕಲಾವಿದರೇ ಎನ್ನುವಷ್ಟು ಜನರ ಮನಸ್ಸಿಗೆ ಹತ್ತಿರವಾಗಿದ್ದರು ಅಂತಹ ಕಲಾವಿದರುಗಳಲ್ಲಿ ಒಬ್ಬರು ಮಲ್ಲಿಕಾ ಸಿಂಗ್. 

ಹೌದು ರಾಧಾ ಕೃಷ್ಣ ಧಾರಾವಾಹಿಯಲ್ಲಿ ರಾಧೆಯ ಪಾತ್ರ ಮಾಡಿದ್ದ ಮಲ್ಲಿಕಾ ಸಿಂಗ್ ನಿಜವಾಗಿಯೂ ಆಕೆಯೇ ರಾಧೆ ಎನ್ನುವಷ್ಟರ ಮಟ್ಟಕ್ಕೆ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದಂತಿತ್ತು.. ಇನ್ನು ಜನರು ಸಹ ಮಲ್ಲಿಕಾ ಸಿಂಗ್ ನನ್ನು ರಾಧೆಯಾಗಿಯೇ ಒಪ್ಪಿಕೊಂಡು ಎಲ್ಲಿ ಹೋದರು ರಾಧೆ ಎಂದೇ ಮಾತನಾಡಿಸುವುದು ಆಕೆಯ ಅದ್ಭುತ ನಟನೆಗೆ ಸಿಕ್ಕ ಪ್ರಶಂಸೆ ಎನ್ನಬಹುದು.
ಹೌದು ಈಗಾಗಲೇ ಹಿಂದಿ ಧಾರಾವಾಹಿಗಳು.ಇತರ ಭಾಷೆಯ ಡಬ್ಬಿಂಗ್ ಧಾರಾವಾಹಿಗಳು. ಜೊತೆಗೆ ಗಲ್ಲಿ ಬಾಯ್ ಸಿನಿಮಾ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಟ್ಟು ಅಲ್ಲಿಯೂ ಮಿಂಚಿರುವ ಮಲ್ಲಿಕಾ ಸಿಂಗ್ ಇದೀಗ ವಿನಯ್ ರಾಜ್ ಕುಮಾರ್ ಅವರಿಗೆ ಜೋಡಿಯಾಗಿದ್ದು ಅದಾಗಲೇ ಸಿನಿಮಾದ ಅರ್ಧ ಚಿತ್ರೀಕರಣ ಪೂರ್ಣ ಗೊಂಡಿದೆ. 

ಸಿನಿಮಾದ ಹೆಸರು ಇನ್ನೂ ಇಟ್ಟಿಲ್ಲವಾದರೂ ಸಿನಿಮಾದಲ್ಲಿ ಮಲ್ಲಿಕಾ ಸಿಂಗ್ ಕಾಶ್ಮೀರಿ ಹುಡುಗಿಯ ಪಾತ್ರವನ್ನು ಮಾಡುತ್ತಿದ್ದು ಹಿಂದಿ ಮಾದ್ಯಮಗಳಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ವಿನಯ್ ರಾಜ್ ಕುಮಾರ್ ಹಾಗೂ ರಾಧಾ ಕೃಷ್ಣ ಧಾರಾವಾಹಿ ಮೂಲಕ ಮೋಡಿ ಮಾಡಿರುವ ಮಲ್ಲಿಕಾ ಸಿಂಗ್ ಒಟ್ಟಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದು ಸಿನಿಮಾ ದೊಡ್ಡ ಸಕ್ಸಸ್ ನೀಡುವ ನಿರೀಕ್ಷೆಯನ್ನು ಹುಟ್ಟುಹಾಕಿದೆ ಎನ್ನಬಹುದು.‌ಈ ಸಿನಿಮಾ ವಿನಯ್ ರಾಜ್ ಕುಮಾರ್ ಅವರ ಕೆರಿಯರ್ ಗೂ ಕೂಡ ದೊಡ್ಡ ಬ್ರೇಕ್ ನೀಡುತ್ತದೆಯಾ ಎಂದು ಕಾದು ನೋಡಬೇಕಿದೆ. (ಪ್ರೀಯ ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ) ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.