ಇಡೀ ಕರುನಾಡಿಗೆ ಸಿಹಿಸುದ್ದಿ, ನಿಜ ಜೀವನದಲ್ಲಿ ಒಂದಾದ ಮತ್ತೊಂದು ಸ್ಟಾರ್ ಜೋಡಿ
Sep 19, 2024, 18:00 IST
|
ಯಾರಿಗೆ ಯಾವಾಗ ಹೇಗೆ ಲವ್ವಾಗುತ್ತದೆ? ಎಂದು ಹೇಳುವುದು ಕಷ್ಟ. ಬಣ್ಣದಲೋಕದಲ್ಲಿ ದಿಢೀರ್ ಲ್ ಆಗೋದು, ಮದುವೆ ಆಗೋದು ಎಲ್ಲಾ ಕಾಮನ್. ಸಿನಿಮಾಗಳಲ್ಲಿ, ಧಾರಾವಾಹಿಗಳಲ್ಲಿ ಒಟ್ಟೊಟ್ಟಿಗೆ ನಟಿಸಿದವರು ಸ್ನೇಹಿತರಾಗಿ ಬಳಿಕ ಆ ಸ್ನೇಹ ಪ್ರೀತಿಗೆ ತಿರುಗಿ ಮದುವೆವರೆಗೂ ಹೋಗಿರುವ ಸಾಕಷ್ಟು ಉದಾಹರಣೆಗಳು ಕಣ್ಣ ಮುಂದಿದೆ.
ಒಂದು ಸಿನಿಮಾ ಅಂದ್ರೆ ನಾಲ್ಕೈದು ತಿಂಗಳು ಧಾರಾವಾಹಿ ಅಂದ್ರೆ ವರ್ಷಗಳ ಕಾಲ ನಟ-ನಟಿಯರು ಒಟ್ಟೊಟ್ಟಿಗೆ ನಟಿಸಬೇಕಾಗುತ್ತದೆ. ಜೊತೆ ಜೊತೆಯಾಗಿ ಸಾಕಷ್ಟು ಕಾಲ ಕಳೆಯಬೇಕಾಗುತ್ತದೆ. ಹೀಗೆ ಒಟ್ಟಿಗೆ ಕಾಲ ಕಳೆದಷ್ಟು ಕೆಮೆಸ್ಟ್ರಿ ವರ್ಕ್ ಆಗುತ್ತದೆ ಎನ್ನುವ ಮಾತು ಇದೆ. ಕೆಲ ಸಿನಿಮಾ ನಟ, ನಟಿಯರ ಆನ್‌ಸ್ಕ್ರೀನ್, ಆಫ್ ಸ್ಕ್ರೀನ್ ಕೆಮೆಸ್ಟ್ರಿ ನೋಡಿದರೆ ಪದೇ ಪದೆ ನೋಡಬೇಕೆನಿಸುತ್ತದೆ.
ಹೀಗೆ ಒಟ್ಟಿಗೆ ನಟಿಸಿ ಪ್ರೇಕ್ಷಕರ ಮನಗೆದ್ದ ಜೋಡಿಗಳು ನಿಜಜೀವನದಲ್ಲಿ ಕೂಡ ಜೊತೆಯಾಗಲಿ ಎಂದು ಬಯಸುವ ಅಭಿಮಾನಿಗಳು ಇದ್ದಾರೆ. ಕೆಲವರ ನಟನೆ, ಒಡನಾಟ ನೋಡುತ್ತಿದ್ದರೆ ನಿಜವಾಗಿಯೂ ಇಬ್ಬರ ನಡುವೆ ಲವ್ವಾಗಿದೆ, ಮುಂದೆ ಇಬ್ಬರೂ ಒಟ್ಟಾಗಿ ಬಿಡುತ್ತಾರೆ ಎನ್ನುವ ಊಹಾಪೋಹ ಶುರುವಾಗುತ್ತದೆ. ಕನ್ನಡ ಕಿರುತೆರೆಯ ನೀನಾದೆನಾ ಧಾರಾವಾಹಿ ಜೋಡಿ ವಿಕ್ರಂ-ವೇದಾ ನೋಡಿದಾಗಲೂ ಹೀಗೆ ಅನಿಸುತ್ತದೆ.
ವಿಕ್ರಂ-ವೇದಾ ಪಾತ್ರಗಳಲ್ಲಿ ದಿಲೀಪ್ ಹಾಗೂ ಖುಷಿ ಶಿವು ಜೋಡಿ ವೀಕ್ಷಕರಿಗೆ ಮೋಡಿ ಮಾಡಿದೆ. ಹಾಗಾಗಿ ನಿನಾದೇನಾ ಪಾರ್ಟ್ 2 ಬರ್ತಿದೆ.ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ ಎನ್ನುವ ಗುಸುಗುಸು ಪದೇ ಪದೆ ಕೇಳಿಬರುತ್ತದೆ. ಒರಟ ಗಂಡನಾಗಿ ದಿಲೀಪ್ ಕ್ಯೂಟ್ ಕ್ಯೂಟ್ ಹುಡುಗಿಯಾಗಿ ಸೌಮ್ಯ ಪಾತ್ರದಲ್ಲಿ ಖುಷಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ತೆಲುಗು ಕಾರ್ಯಕ್ರಮಕ್ಕೆ ದಿಲೀಪ್ ಅವರ ವಿಶೇಷ ಸ್ನೇಹಿತೆ ಎಂದು ಸಪ್ರೈಸ್ ಆಗಿ ಖುಷಿ ಅವರನ್ನು ಆಹ್ವಾನಿಸಲಾಗಿತ್ತು. ಇಬ್ಬರ ಪ್ರೀತಿ ಬಿದ್ದಿದ್ದಾರೆ ಎನ್ನುವ ಚರ್ಚೆಗೆ ಇದು ಮತ್ತಷ್ಟು ಇಂಬು ನೀಡಿದಂತಾಗಿತ್ತು. ಮುಂದಿನ ದಿನಗಳಲ್ಲಿ ಮದುವೆ ಆದ್ರೂ ಆಗಬಹುದು ಅಂತಿದ್ದಾರೆ ಅಭಿಮಾನಿಗಳು.
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.