ಇಷ್ಟು ಬೇಗ ಸಿಹಿಸುದ್ದಿನಾ, ಸೋನಲ್ ತರುಣ್ ಮೇಲೆ ಪೋಷಕರಿಗೆ ಅನುಮಾ ನ

 | 
ಗ೮
 ಕೆಲ ದಿನಗಳ ಹಿಂದಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಯಾಂಡಲ್ ವುಡ್ ಸೆಲೆಬ್ರಿಟೀಸ್ ಸೋನಲ್ ಮೊಂತೆರೋ ಮತ್ತು ತರುಣ್ ಸುಧೀರ್ ಮಗುವಿನ ಜೊತೆಗಿರುವ ಫೋಟೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.  ಸ್ಯಾಂಡಲ್ ವುಡ್ ಹೊಸ ಸೆಲೆಬ್ರಿಟಿ ಜೋಡಿಗಳಾದ ತರುಣ್ ಸುದೀರ್ ಸೋನಲ್ ಮೊಂತೆರೋ ಎಲ್ಲಿಗೆ ಹನಿಮೂನ್ ಹೋಗ್ತಾರೆ ಎನ್ನುವ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲವಿತ್ತು.
ಮಾಲ್ಡೀವ್ಸ್ ಗೆ ಹೋಗೋದಾಗಿ ಸಹ ಹೇಳಿದ್ದರು. ಆದರೆ ಇದೀಗ ದುಬೈಗೆ ಹಾರಿದ್ದಾರೆ ಜೋಡಿಗಳು.ನಿನ್ನೆ ಸೋನಲ್ ಮೊಂತೆರೋ ತರುಣ್ ಕೈ ಹಿಡಿದು, ಏರ್ ಪೋರ್ಟ್ ನಲ್ಲಿ ನಡೆಯುವ ವಿಡಿಯೋ ಪೋಸ್ಟ್ ಮಾಡಿದ್ದರು. ಹನಿಮೂನ್ ಗೆ ಹೋಗ್ತಿದ್ದಾರೆ ಅಂದ್ಕೊಂಡ್ರೆ, ಇದೀಗ ಈ ಜೋಡಿ ದುಬೈನಲ್ಲಿ ಐಐಎಫ್’ಎ ಉತ್ಸವದಲ್ಲಿ ಭಾಗಿಯಾಗಲು ತೆರಳಿದ್ದು ಅಲ್ಲಿ ತಮ್ಮ ನೆಂಟರಿಷ್ಟರ ಮನೆಗೆ ತೆರಳಿದ್ದಾರೆ.  
ದುಬೈನಲ್ಲಿ ಸೋನಲ್ ಮತ್ತು ತರುಣ್ ಮುದ್ದಾದ ಮಗುವಿನ ಜೊತೆಗೆ ಫೋಟೊ ತೆಗೆಸಿಕೊಂಡಿದ್ದು, ಈ ಫೋಟೊ ಸೋಶಿಯಲ್ ಮಿಡೀಯಾದಲ್ಲಿ ವೈರಲ್ ಆಗುತ್ತಿದೆ. ಹನಿಮೂನ್ ಗೆ ಅಂತ ಹೋದೋರ ಕೈಯಲ್ಲಿ ಮಗು ಎಲ್ಲಿಂದ ಬಂತು ಅಂತಾನೂ ಜನ ಪ್ರಶ್ನಿಸಿದ್ದಾರೆ. ಆದರೆ ರಿಯಲ್ ಕಥೆ ಬೇರೆನೆ ಇದೆ. ಸೋನಲ್ ದುಬೈನಲ್ಲಿರುವ ತಮ್ಮ ಕಸಿನ್ ಮನೆಗೆ ತೆರಳಿದ್ದು, ಅವರ ಮಗುವಿನ ಜೊತೆಗೆ ಸಮಯ ಕಳೆದು ಫೋಟೊ ತೆಗೆಸಿಕೊಂಡಿದ್ದಾರೆ. 
ಸೋನಲ್ ಸಹೋದರಿ ಫೋಟೊ ಶೇರ್ ಮಾಡಿದ್ದು, ಕೈಲೆನ್ಸ್ ಮೊದಲ ಬಾರಿ ಸೋನಲ್ ಮೌಶಿ ಮತ್ತು ತರುಣ್ ಮಾಮನನ್ನ ಭೇಟಿಯಾಗ್ತಿದ್ದಾನೆ ಎಂದು ಬರೆದುಕೊಂಡು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಅಭಿಸಾರಿಕೆ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಸೋನಲ್  ಸದ್ಯಕ್ಕೆ ಕನ್ನಡ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
 ಬುದ್ಧಿವಂತ 2 ಮತ್ತು ಮಾರ್ಗರೇಟ್ ಲವರ್ ಆಫ್ ರಾಮಾಚಾರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.  ಇನ್ನು ಖಳನಟ ಸುಧೀರ್ ಪುತ್ರರಾಗಿರುವ ತರುಣ್ ಸುಧೀರ್ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದು, ಕನ್ನಡಕ್ಕೆ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. 
( ಮಿತ್ರರೇ ಕರ್ನಾಟಕದ ಪ್ರತಿಷ್ಠಿತ ನ್ಯೂಸ್ ಚಾನಲ್ Powerfullkannada.tech ವಾಹಿನಿಗೆ ಬೆಂಬಲಿಸಿ.)
ದಿನ ನಿತ್ಯದ ತಾಜಾ ಸುದ್ದಿಗಾಗಿ ಪವರ್ ಫುಲ್ ಕನ್ನಡ ವಾಹಿನಿಯನ್ನು ಲೈಕ್ ಮಾಡಿ ಶೇರ್ ಮಾಡಿ.